ನ. 22 ರಂದು ಕಲಬುರಗಿ ಏರ್ ಪೋರ್ಟ್ ಲೋಕಾರ್ಪಣೆ|ಉಮೇಶ್ ಜಾಧವ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಕಲಬುರಗಿಗೆ ಸ್ಟಾರ್ ಏರ್‌ಲೈನ್ಸ್ ವಿಮಾನದಲ್ಲಿ ಬಂದಿಳಿಯಲಿದ್ದಾರೆ|ಯಾಣಿಕರು ವಿಮಾನ ಟಿಕೆಟ್ ಬುಕ್ ಮಾಡಿಕೊಳ್ಳಬಹುದು ಎಂದ ಸಂಸದ|

ಕಲಬುರಗಿ[ನ.13]: ಕಲಬರಗಿ ಜನತೆಯ ಬಹು ದಿನಗಳ ಕನಸು ನನಸು ಆಗೋ ಸಮಯ ಬಂದಿದೆ. ಹೌದು, ಕಲಬುರಗಿಯಿಂದ ವಿಮಾನ ಸೇವೆ ಆರಂಭಿಸಬೇಕು ಎಂದು ಬಹಳ ದಿನಗಳಿಂದ ಬೇಡಿಕೆ ಇತ್ತು. ಇದೀಗ ನ. 22 ರಂದು ಕಲಬುರಗಿ ಏರ್ ಪೋರ್ಟ್ ಲೋಕಾರ್ಪಣೆಗೆ ಕಾಲ ಕೂಡಿ ಬಂದಿದೆ. 

Scroll to load tweet…
Scroll to load tweet…

ಕಲಬುರಗಿಯಲ್ಲಿ ಸದ್ಯಕ್ಕಿಲ್ಲ ವಿಮಾನ ಹಾರಾಟ: ಮತ್ತೆ ನಿರಾಸೆ

ನ. 22 ರಂದು ಕಲಬುರಗಿಗೆ ಫಸ್ಟ್ ಫ್ಲೈಟ್ ಲ್ಯಾಂಡ್ ಬಗ್ಗೆ ಸಂಸದ ಡಾ. ಉಮೇಶ್ ಜಾಧವ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನ. 22 ರಂದು ಉಮೇಶ್ ಜಾಧವ್ ಅವರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲಬುರಗಿಗೆ ಸ್ಟಾರ್ ಏರ್‌ಲೈನ್ಸ್ ವಿಮಾನದಲ್ಲಿ ಬಂದಿಳಿಯಲಿದ್ದಾರೆ.

ಕಲಬುರಗಿ ಏರ್ಪೋರ್ಟ್‌ ಕೇಂದ್ರಕ್ಕೆ ಹಸ್ತಾಂತರ

ಈ ಬಗ್ಗೆ ಜಾಧವ್ ಅವರು ಫಸ್ಟ್ ಫ್ಲೈಟ್‌ನಲ್ಲಿ ಟಿಕೆಟ್ ಪಡೆದು ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಈ ವಿಮಾನದ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.ಪ್ರಯಾಣಿಕರು ವಿಮಾನ ಟಿಕೆಟ್ ಬುಕ್ ಮಾಡಿಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ. ನ. 22 ರಂದು ಕಲಬರಗಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ.