ಕಲ್ಲು ನಾಗರ ಮೂರ್ತಿ ಮೇಲೆ ಕೂದಲು ಬೆಳವಣಿಗೆ; ಕಲಬುರಗಿ ಜಿಲ್ಲೆಯಲ್ಲಿ ಅಚ್ಚರಿ ಘಟನೆ

ಕಲಬುರಗಿ ಜಿಲ್ಲೆಯ ಕಡಣಿ ಗ್ರಾಮದಲ್ಲಿ ಕಲ್ಲು ನಾಗರ ಮೂರ್ತಿ ಮೇಲೆ ಕೂದಲು ಬೆಳೆದಿದ್ದು, ಗ್ರಾಮಸ್ಥರು ಇದನ್ನು ಪವಾಡ ಎಂದು ನಂಬಿ ಪೂಜೆ ಸಲ್ಲಿಸುತ್ತಿದ್ದಾರೆ. ಶ್ರೀ ಹವಾ ಮಲ್ಲಿನಾಥ ಮಹಾರಾಜರು ಪ್ರತಿಷ್ಠಾಪಿಸಿದ ದೃಷ್ಟಿ ಲಿಂಗದ ಮೇಲಿನ ನಾಗರ ಮೂರ್ತಿಯೇ ಇದೀಗ ಅಚ್ಚರಿಗೆ ಕಾರಣವಾಗಿದೆ.

Hair growth in god snake idol kadani village kalaburgi mrq

ಕಲಬುರಗಿ: ಜಿಲ್ಲೆಯ ಕಡಣಿ ಗ್ರಾಮದಲ್ಲಿ ಅಚ್ಚರಿ ಘಟನೆ ನಡೆದಿದ್ದು, ಇಲ್ಲಿಯ ಕಲ್ಲು ನಾಗರ ಮೂರ್ತಿ ಮೇಲೆ ಕೂದಲು ಬೆಳೆದಿದೆ. ಈ ವಿಚಿತ್ರ ಘಟನೆಯನ್ನು ಗ್ರಾಮಸ್ಥರು ಪವಾಡ ಎಂದು ನಂಬಿದ್ದು, ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. 2023ರ ಜುಲೈ 2ರಂದು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಮುತ್ಯಾ ಅವರು ಕಡಣಿ ಗ್ರಾಮದಲ್ಲಿ ತಮ್ಮ ಅಮೃತಹಸ್ತದಿಂದ ದೃಷ್ಟಿಲಿಂಗವನ್ನು ಪ್ರತಿಷ್ಠಾಪಿಸಿದ್ದರು. ಇದೀಗ ದೃಷ್ಟಿಲಿಂಗವೇ ಅಚ್ಚರಿಗೆ ಕಾರಣವಾಗಿದೆ. ಈ ಲಿಂಗದ ಮೇಲೆ ಕಲ್ಲು ನಾಗರ ರಚನೆಯನ್ನು ಮಾಡಲಾಗಿದೆ. ಈಗ ಇದೇ ನಾಗರ ಮೂರ್ತಿ ಮೇಲೆ ಕೂದಲು ಬೆಳೆದಿದೆ. ಇದನ್ನು ಕಂಡ ಗ್ರಾಮಸ್ಥರು ಹವಾ ಮಲ್ಲಿನಾಥ ಮುತ್ಯಾರ ಪವಾಡ ಎಂದು ಹೇಳುತ್ತಾರೆ. 

ಈ ಕುರಿತು ಮಾತನಾಡಿರುವ ಗ್ರಾಮಸ್ಥ, ಇದು ಕಲಬುರಗಿ ತಾಲೂಕಿನಲ್ಲಿರುವ ಸುಕ್ಷೇತ್ರ ಕಡಣಿ ಗ್ರಾಮ, ಶ್ರೀ ಹವಾ ಮಲ್ಲಿನಾಥ ಮಹಾರಾಜ ಮುತ್ಯಾ ಅವರ ಭಕ್ತರ ಬಳಗ ದೊಡ್ಡದಾಗಿದ್ದು, ನಮ್ಮೂರಿಗೆ ಬಂದು ಆಶ್ರಮ ಆರಂಭಿಸಬೇಕೆಂದು ನಾವೆಲ್ಲರೂ ಮನವಿ ಮಾಡಿಕೊಂಡಿದ್ದೇವು. ನಂತರ ಅವರಿಂದಲ ಈ ದೃಷ್ಟಿ ಲಿಂಗದ ಸ್ಥಾಪನೆ ಆಯ್ತು ಎಂದು ತಿಳಿಸುತ್ತಾರೆ. 

ಪಿತೃದೋಷ, ನಾಗದೋಷ ನಿವಾರಣೆಗಾಗಿ ನಾಗಪಂಚಮಿ ದಿನದಂದು ಮಾಡಿ ಈ 6 ಕೆಲಸ

ಇದಾದ ಬಳಿಕ ಪ್ರತಿದಿನ ಬೆಳಗ್ಗೆ ಪೂಜೆ ನೆರವೇರಿಸಲಾಗುತ್ತದೆ. ಅಮವಾಸ್ಯೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಪೂಜೆಗಾಗಿ ಜನರನ್ನು ನೇಮಿಸಲಾಗಿದೆ. ಒಂದು ದಿನ ಬೆಳಗ್ಗೆ ಪೂಜೆ  ಸಲ್ಲಿಸಲು ಬಂದ ಹುಡುಗರಿಗೆ ಕಲ್ಲು ನಾಗರ ಮೂರ್ತಿ ಮೇಲೆ ಕೂದಲು ಬೆಳೆದಿರೋದನ್ನು ಗಮನಿಸಿದ್ದಾರೆ. ನಂತರ ಇದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ ಎಂದು ಭಕ್ತರೊಬ್ಬರು ಹೇಳುತ್ತಾರೆ. 

ಈ ಆಶ್ವರ್ಯಕರ ಘಟನೆಯನ್ನು ನೋಡಲು ಸುತ್ತಲಿನ 10ಕ್ಕೂ ಅಧಿಕ ಗ್ರಾಮದ ಜನರು ಬರುತ್ತಿದ್ದಾರೆ. ಸುಮಾರು 1 ರಿಂದ 2 ಇಂಚುಗಳಷ್ಟು ಬಿಳಿ ಬಣ್ಣದ ಕೂದಲು ಬೆಳೆದಿದೆ. ಇದೆಲ್ಲವೂ ರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಮುತ್ಯಾ ಪವಾಡ ಎಂದು ಇಲ್ಲಿನ ಭಕ್ತರು ನಂಬಿದ್ದಾರೆ. ಹವಾ ಮಲ್ಲಿನಾಥ ಮಹಾರಾಜರು ಮೂಲತಃ ಬೀದರ್ ಜಿಲ್ಲೆಯವರಾಗಿದ್ದು, ಲಿಂಗ ಸ್ಥಾಪನೆಗಾಗಿ ಕಡಣಿ ಗ್ರಾಮಕ್ಕೆ ಆಗಮಿಸಿದ್ದರು.

ಪಂಚಾಂಗ: ನಾಗದೋಷವಿದ್ದರೆ ಈ ಮಂತ್ರವನ್ನು ಪಠಿಸುವುದರಿಂದ ಧೈರ್ಯ ಬರುವುದು

Latest Videos
Follow Us:
Download App:
  • android
  • ios