ಅರೆಸೇನಾ ಪಡೆಗಳಲ್ಲಿ ಉದ್ಯೋಗ ನೀಡುವಂತೆ ರಣಭೀಕರ ಬಿಸಿಲಿಗೆ ನಾಗ್ಪುರದಿಂದ ದೆಹಲಿಗೆ ಜಾಥಾ

ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಪರೀಕ್ಷೆಯಲ್ಲಿ ಪಾಸ್ ಆಗಿ ಅರೆಸೇನಾ ಪಡೆಗಳಲ್ಲಿ ಇನ್ನೂ ಉದ್ಯೋಗ ಸಿಕ್ಕಿದ ಯುವಕರ ತಂಡವೊಂದು    ನಾಗ್ಪುರದಿಂದ  ದೆಹಲಿಗೆ 1,000 ಕಿ.ಮೀ ದೂರದ ಕಾಲ್ನಡಿಗೆ  ಜಾಥಾ ಆರಂಭಿಸಿದೆ.

Youth marches on foot from Nagpur to Delhi demanding employment gow

ನವದೆಹಲಿ (ಜೂ.15): ಬಿಸಿಲಿನ ತಾಪದ ನಡುವೆಯೂ ಕೆಲ ಯುವಕರು ನಾಗ್ಪುರದಿಂದ (Nagpur) ದೆಹಲಿಗೆ (Delhi) 1,000 ಕಿ.ಮೀ ದೂರದ ಕಾಲ್ನಡಿಗೆ  ಜಾಥಾ ( foot march) ಆರಂಭಿಸಿದ್ದಾರೆ. ಈ ಸಂಬಂಧ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜಾಥಾ ಹೊರಟವರ ಟೀ ಶರ್ಟ್ ನಲ್ಲಿ ‘ಪೆಡೆಸ್ಟ್ ಮಾರ್ಚ್, ನಾಗ್ಪುರ ಟು ದೆಹಲಿ’ (Pedest March, Nagpur to Delhi’) ಎಂದು ಬರೆಯಲಾಗಿದೆ.  ಜೊತೆಗೆ ಕೆಲವು ಯುವಕರ ಆರೋಗ್ಯ ಹದಗೆಟ್ಟಿದ್ದು, ಇತರರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕೂಡ ವೈರಲ್ ಆಗಿದೆ. ಕೆಲವರ ಕಾಲುಗಳಲ್ಲು ಗುಳ್ಳೆಗಳು ಎದ್ದಿದ್ದು, ಕಷ್ಟದ ಪರಿಸ್ಥಿತಿಯಲ್ಲೂ ನಡಿಗೆಯಿಂದ ಹಿಂದೆ ಸರಿದಿಲ್ಲ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission) ನಡೆಸುವ ಅರೆಸೇನಾ ಪಡೆಗಳಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಸುಮಾರು 5,000 ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಯುವಕರು ಆರೋಪಿಸಿದ್ದು, ಈ ಸಂಬಂಧ ರಣಭೀಕರ ಬಿಸಿಲಿಗೆ ಜಾಥಾ ನಡೆಸುತ್ತಿದ್ದಾರೆ. 1000 ಕಿಮೀ ಮಾರ್ಗ, ಅದೂ ಈ ಬೇಸಿಗೆಯಲ್ಲಿ ದಾಟುವುದು ತುಂಬಾ ಕಷ್ಟ. ಆದರೆ, ಈ ಯುವಕರು ತಮ್ಮ ಉದ್ಯೋಗದ (employment) ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಗ್ಪುರದಿಂದ ದೆಹಲಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ವರದಿಗಳ ಪ್ರಕಾರ, ಅನೇಕ ಯುವಕರು ನಾಗ್ಪುರದಿಂದ ದೆಹಲಿಗೆ ಮೆರವಣಿಗೆ ಮಾಡುವಾಗ ಮೂರ್ಛೆ ಹೋಗಿದ್ದರಿಂದ  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

WORK FROM HOME: ಕಂಪನಿಗೆ ಲಾಭ ನೀಡ್ತಿರೋದು ಯಾವುದು ಗೊತ್ತಾ?

ಈ ಹಿಂದೆ ಫೆಬ್ರವರಿ 2021 ರಿಂದ ಜನವರಿ 2022 ರವರೆಗೆ ಈ ಯುವಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ, ಆದರೆ ಅವರ ಬೇಡಿಕೆಗಳು ಈವರೆಗೆ ಈಡೇರಿಲ್ಲ. 

ಸ್ಟಾಫ್ ಸೆಲೆಕ್ಷನ್ ಕಮಿಷನ್ 2018 ರಲ್ಲಿ ಜನರಲ್ ಡ್ಯೂಟಿ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಇದು SSC GD 2018 ಪರೀಕ್ಷೆಯಾಗಿದೆ ಮತ್ತು ಈ ಪರೀಕ್ಷೆಯ ಮೂಲಕ CRPF, ITBP, CISF, NIA ಮತ್ತು ಅಸ್ಸಾಂ ರೈಫಲ್ಸ್ ಇತ್ಯಾದಿಗಳಲ್ಲಿ ನೇಮಕಾತಿ ನಡೆಯಲಿದೆ. ಈ ನೇಮಕಾತಿಯಲ್ಲಿ 60 ಸಾವಿರದ 210 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿತ್ತು. ಈ ಪರೀಕ್ಷೆಯ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿತ್ತು. 

ತುಮಕೂರು ಗಡಿಯಲ್ಲಿ ಕನ್ನಡಿಗರ ಮೇಲೆ ಆಂಧ್ರ ಪೊಲೀಸರ ದಬ್ಬಾಳಿಕೆ!

ಈಗ ಪ್ರತಿಭಟನೆ ನಡೆಸುತ್ತಿರುವ  ಯುವಕರೆಲ್ಲರೂ SSC GD 2018 ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು, ಪರೀಕ್ಷೆಯ ಆಯ್ಕೆ ಮಾನದಂಡಗಳಲ್ಲಿ ಎಲ್ಲದರಲ್ಲೂ ಉತ್ತೀರ್ಣರಾಗಿದ್ದೇವೆ ಆದರೆ ಈವರೆಗೆ ಕೆಲಸ ಸಿಕ್ಕಿಲ್ಲ ಎಂದು ಯುವಕರು ಆರೋಪಿಸಿದ್ದಾರೆ.

ಈ 2018 ರ ಪರೀಕ್ಷೆಯ ಆಯ್ಕೆ ಪ್ರಕ್ರಿಯೆ ಮುಗಿದು ಬಹಳ ದಿನಗಳು ಕಳೆದಿವೆ ಮತ್ತು ಈ ಅಭ್ಯರ್ಥಿಗಳು ಸಹ ದೀರ್ಘಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ, ಆದರೆ ಅವರ ಬೇಡಿಕೆಗಳು ಈವರೆಗೆ ಈಡೇರಿಲ್ಲ ಜೊತೆಗೆ ಸಂಬಂಧಿಸಿದ ಇಲಾಕೆಯು ಇವರ ಪ್ರತಿಭಟನೆಗೆ ಸೊಪ್ಪು ಹಾಕಿಲ್ಲ.

ಪಠ್ಯವಿವಾದಕ್ಕೆ ಎಂಟ್ರಿ ಕೊಟ್ಟ JNU professors ವಿರುದ್ಧ ಸಚಿವ ನಾಗೇಶ್ ಕಿಡಿ

ತಾನು ತಮಿಳುನಾಡಿನವನಾಗಿದ್ದು, ಬಹಳ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇನೆ, ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ. ಪರೀಕ್ಷೆ, ವೈದ್ಯಕೀಯ ಟೆಸ್ಟ್ ಇತ್ಯಾದಿಗಳಲ್ಲಿ ಉತ್ತೀರ್ಣನಾಗಿದ್ದೇನೆ ಎಂದು ಅಭ್ಯರ್ಥಿಯೊಬ್ಬರು ಹೇಳಿಕೊಂಡಿದ್ದಾರೆ.


 

Latest Videos
Follow Us:
Download App:
  • android
  • ios