Asianet Suvarna News Asianet Suvarna News

ಲಂಚ್ ಬ್ರೇಕ್ ಕಾರಣ ನೀಡಿ ಉದ್ಯೋಗಿಯ ವಜಾ, 11 ಲಕ್ಷ ರೂ ಪರಿಹಾರ ನೀಡಲು ಕೋರ್ಟ್ ತಾಕೀತು!

ಆರ್ಥಿಕ ಹಿಂಜರಿತ, ಕಂಪನಿ ನಷ್ಟದಲ್ಲಿದೆ, ಇಂತಹ ಸಂದರ್ಭದಲ್ಲಿ 1 ಗಂಟೆ 20 ನಿಮಿಷ ಲಂಚ್ ಬ್ರೇಕ್ ತೆಗೆದುಕೊಂಡಿದ್ದಾರೆ. ಇದು ಕಂಪನಿಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕಂಪನಿ ವಿರುದ್ಧ ಕಾನೂನು ಹೋರಾಟ ಮಾಡಿದ ಉದ್ಯೋಗಿ ಪ್ರಕರಣ ಗೆದ್ದುಕೊಂಡಿದ್ದಾರೆ. ಇಷ್ಟೇ ಅಲ್ಲ ಪರಿಹಾರ ಮೊತ್ತವನ್ನು ಪಡೆದಿದ್ದಾರೆ.

Woman  sacks from work after taking lunch break received over RS 11 lakh damages for her wrongful termination ckm
Author
First Published Dec 17, 2022, 8:34 PM IST

ಲಂಡನ್(ಡಿ.17):  ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿದರೆ ಕಾರಣಗಳು ಬೇಕಿಲ್ಲ. ಹೀಗೆ ಆರ್ಥಿಕ ಹಿನ್ನಡೆಯಿಂದ ಚೇತರಿಸಿಕೊಳ್ಳುತ್ತಿದ್ದ ಕಂಪನಿ ಮಹಿಳಾ ಉದ್ಯೋಗಿಯನ್ನು ಏಕಾಏಕಿ ವಜಾ ಮಾಡಿದೆ. ಇದರಿಂದ ಆಕ್ರೋಶಗೊಂಡ ಉದ್ಯೋಗಿ ಕೆಲಸದಿಂದ ವಜಾ ಮಾಡಲು ಕಾರಣ ಕೇಳಿದ್ದಾಳೆ. ಈ ವೇಳೆ ಈ ಉದ್ಯೋಗಿ ಒತ್ತಡದ ಕೆಲಸದ ನಡುವೆ ಊಟದ ವಿರಾಮ ಪಡೆದಿದ್ದಾಳೆ. ಇಷ್ಟೇ ಅಲ್ಲ ಮತ್ತಿಬ್ಬರು ಉದ್ಯೋಗಿಗಳನ್ನು ಕರೆದುಕೊಂಡು ಊಟದ ವಿರಾಮ ಸಮಯ ತೆಗೆದುಕೊಂಡಿದ್ದಾಳೆ ಅನ್ನೋ ಉತ್ತರ ಕಂಪನಿಯಿಂದ ಬಂದಿತ್ತು. ಇದು ಮಹಿಳಾ ಉದ್ಯೋಗಿಯನ್ನು ಮತ್ತಷ್ಟು ಕೆರಳಿಸಿದೆ. ಇಷ್ಟಕ್ಕೆ ಸುಮ್ಮನಾಗದ ಉದ್ಯೋಗಿ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಹಿಳಾ ಉದ್ಯೋಗಿಗಿ ಪರಿಹಾರವಾಗಿ 11 ಲಕ್ಷ ರೂಪಾಯಿ ನೀಡಬೇಕು ಎಂದು ಕೋರ್ಟ್ ಕಂಪನಿಗೆ ತಾಕೀತು ಮಾಡಿದೆ. ಲಂಡನ್‌ನಲ್ಲಿ ಈ ಘಟನೆ ನಡೆದಿದಿದೆ.

2018ರಲ್ಲಿ ಬ್ರಿಟಿಷ್ ಮಹಿಳೆ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆ ಊಟಕ್ಕೆ ತೆರಳಿದ್ದಾರೆ. ಸರಿಸುಮಾರು 1.20 ನಿಮಿಷದ ಬಳಿಕ ಕೆಲಸಕ್ಕೆ ಮರಳಿದ್ದಾರೆ. ಇದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಕಣ್ಣು ಕೆಂಪಾಗಿಸಿದೆ. ಕಂಪನಿ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಈ ವೇಳೆ ಉದ್ಯೋಗಿಗಳು ವಿಶ್ರಾಂತಿ ಸಮಯ, ಭೋಜನ ವಿರಾಮ, ಚಹಾ ವಿರಾಮ ತೆಗೆದುಕೊಳ್ಳುವಂತಿಲ್ಲ ಎಂದು ಕಂಪನಿ ಹೇಳಿತ್ತು. ಇಲ್ಲಿ ಉದ್ಯೋಗಿ 1 ಗಂಟೆ 20 ನಿಮಿಷ ಭೋಜನ ವಿರಾಮ ತೆಗೆದುಕೊಂಡಿದ್ದಾರೆ. ಜೊತೆಗೆ ಇಬ್ಬರು ಉದ್ಯೋಗಿಗಳನ್ನು ಕರೆದುಕೊಂಡು ಹೋಗಿದ್ದಾರೆ.

 

Global Layoffs Impact India: ಜಾಗತಿಕ ಮಟ್ಟದ ಉದ್ಯೋಗ ಕಡಿತ ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ

ಇದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮ್ಯಾಕ್ಸಿನ್ ಜೋನ್ಸ್ ಪಿತ್ತ ನೆತ್ತಿಗೇರಿಸಿದೆ. ಭೋಜನ ವಿರಾಮದ ಕಾರಣ ನೀಡಿ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಕಂಪನಿ ನಿರ್ಧಾರ ದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಉದ್ಯೋಗಿ, ಸತತ ಕಾನೂನು ಹೋರಾಟ ಮಾಡಿದ್ದಾರೆ.

2018ರಿಂದಲೇ ಇಲ್ಲೀವೆರೆಗೆ ವಾದ ವಿವಾದ ಆಲಿಸಿ, ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ಯೋಗಿಗೆ ಭೋಜನ ವಿರಾಮ ತೆಗೆದುಕೊಳ್ಳುವುದು ಅನಿವಾರ್ಯ. ಇದು ಕಡ್ಡಾಯ ಕೂಡ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಅಗತ್ಯ. ಇದನ್ನು ನಿಯಂತ್ರಿಸಲು ಕಂಪನಿಗೆ ಹಕ್ಕಿಲ್ಲ. ಇಷ್ಟೇ ಅಲ್ಲ ಉದ್ಯೋಗಿ ಇತರ ಸಹದ್ಯೋಗಿಗಳನ್ನು ಭೋಜನಕ್ಕೆ ಕರೆದುಕೊಂಡು ಹೋಗಿದ್ದಾರೆ. ಇವೆಲ್ಲವೂ ಭೋಜನದ ಸಮಯದಲ್ಲೇ ನಡೆದಿದೆ. ಹೀಗಾಗಿ ಕಂಪನಿ ಆತುರದ ನಿರ್ಧಾರ ತೆಗೆದುಕೊಂಡಿದೆ ಎಂದು ತೀರ್ಪು ನೀಡಿತು. ಜೊತೆಗೆ ಮಹಿಳಾ ಉದ್ಯೋಗಿಗೆ ಪರಿಹಾರ ಮೊತ್ತವಾಗಿ 11,000 ಯುಕೆ ಪೌಂಡ್ಸ್ ನೀಡಲು ಕೋರ್ಟ್ ತಾಕೀತು ಮಾಡಿತು. 

 

Amazon Layoff: 20,000 ಉದ್ಯೋಗಿಗಳನ್ನು ವಜಾ ಮಾಡಲು ಸಿದ್ಧವಾದ ಅಮೆಜಾನ್
 

Follow Us:
Download App:
  • android
  • ios