ಸಿವಿ ಮತ್ತು ರೆಸ್ಯೂಮ್ ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವುದು ಸೂಕ್ತ? ಇಲ್ಲಿದೆ ಡಿಟೇಲ್ಸ್
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಸಿವಿ ಮತ್ತು ರೆಸ್ಯೂಮ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ. . ಯಾವ ಸಮಯದಲ್ಲಿ ಯಾವುದನ್ನು ಕಳುಹಿಸಬೇಕು? ಇಲ್ಲಿದೆ ಡಿಟೇಲ್ಸ್
ಉದ್ಯೋಗಾಕಾಂಕ್ಷಿಗಳಿಗೆ ಸಿವಿ ಮತ್ತು ರೆಸ್ಯೂಮ್ ನಡುವಿನ ಮುಖ್ಯ ವ್ಯತ್ಯಾಸ ಗೊತ್ತಿರಲೇಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಸಿವಿ ಕಳುಹಿಸಬೇಕೋ, ರೆಸ್ಯೂಮ್ ಕಳುಹಿಸಬೇಕೋ ತಿಳಿಯದೇ ಗೊಂದಲ ಉಂಟಾಗಬಹುದು. ಕೆಲವೊಮದು ಸಿವಿ ಕಳುಹಿಸಿ ಎಂದು, ಮತ್ತೆ ಕೆಲವೊಮ್ಮೆ ಕೆಲವು ಸಂಸ್ಥೆ,ಕಂಪೆನಿಗಳು ರೆಸ್ಯೂಮ್ ಕಳುಹಿಸಿ ಎನ್ನಬಹುದು. ಆಗ ಇವೆರಡರ ನಡುವಿನ ವ್ಯತ್ಯಾಸ ಗೊತ್ತಾಗದೇ ಹಲವು ಅಭ್ಯರ್ಥಿಗಳು ಗೂಗಲ್ ಮೊರೆ ಹೋಗುವ ಸಂದರ್ಭ ಬರುತ್ತದೆ. ಕೆಲವೊಮ್ಮೆ ಅದರಲ್ಲಿ ನೋಡಿದರೂ ಕೊನೆಯ ಕ್ಷಣದಲ್ಲಿ ಅರ್ಥವಾಗದೇ ಹೋಗಬಹುದು. ಹಾಗಾದರೆ ಸಿವಿ ಎಂದರೇನು? ರೆಸ್ಯೂಮ್ ಎಂದರೇನು ಎಂಬ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.
CV ಎಂದ್ರೆ ಇದರ ಫುಲ್ ಫಾರ್ಮ್ Curriculum vitae ಎಂದು. ಇದನ್ನು ಶೈಕ್ಷಣಿಕ ಪಠ್ಯಕ್ರಮ ಎಂದು ಬೇಕಾದರೂ ಕರಿಯಬಹುದು. ಸಿವಿ ಮತ್ತು ರೆಸ್ಯೂಮ್ ಎರಡೂ ವೃತ್ತಿಪರ ದಾಖಲೆಗಳಾಗಿದ್ದರೂ ಇವೆರಡರ ನಡುವೆ ವ್ಯತ್ಯಾಸವಿದೆ. ಸಿವಿ ಇದಾಗಲೇ ಹೇಳಿದಂತೆ ಶೈಕ್ಷಣಿಕ ಪಠ್ಯಕ್ರಮದ ಮೇಲೆ ಆಧರಿತವಾಗಿರುವಂಥದ್ದು. ಸಿವಿ ಕೇಳುವುದು ಸಾಮಾನ್ಯವಾಗಿ ಹೊಸದಾಗಿ ನೇಮಕ ಆಗುವವರಿಗೆ, ಅಂದರೆ ಯಾವುದೇ ಅನುಭವ ಇಲ್ಲದ, ಅದೇ ತಾನೇ ಕಾಲೇಜು ಅಥವಾ ಇನ್ನಿತರ ಶಿಕ್ಷಣ ಮುಗಿಸಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯ ಆಗುತ್ತದೆ. ಉದ್ಯೋಗ ಮಾಡದೇ ಇರುವವರು ಅಥವಾ ಹಿಂದಿನ ಉದ್ಯೋಗದ ಅನುಭವ ಕಡಿಮೆ ಇರುವವರು ಇದನ್ನು ಸಲ್ಲಿಸಬಹುದು. ಅಂದರೆ ಇದನ್ನು ಫ್ರೆಶರ್ಸ್ನಿಂದ ಕೇಳುವಂಥದ್ದು. ಸಿವಿ ಮುಖ್ಯವಾಗಿ ಶೈಕ್ಷಣಿಕ ಅಂಶಕ್ಕೆ ಒತ್ತು ನೀಡುತ್ತದೆ. ಇದು ಗರಿಷ್ಠ ನಾಲ್ಕು ಪುಟಗಳವರೆಗೆ ಬೇಕಿದ್ದರೆ ಬರೆಯಬಹುದು. ಇದರಲ್ಲಿ, ಶೈಕ್ಷಣಿಕ ಮಾಹಿತಿಯನ್ನು ವಿವರವಾಗಿ ತಿಳಿಸಬೇಕಾಗುತ್ತದೆ. ಸುಲಭದಲ್ಲಿ ಹೇಳಬೇಕು ಎಂದರೆ, ಇದರಲ್ಲಿ ನಿಮ್ಮ ಹೆಸರು ಮತ್ತು ಶೈಕ್ಷಣಿಕ ಹಿನ್ನೆಲೆ ಹೈಲೈಟ್ ಆಗುತ್ತದೆ.
ಅಮಿತ್ ಶಾ ದೃಷ್ಟಿಯಲ್ಲಿ ರಾಮ ಯಾರು, ರಾವಣ ಯಾರು? ನಟ ವರುಣ್ ಧವನ್ ಪ್ರಶ್ನೆಗೆ ಸಚಿವರ ಉತ್ತರ ಹೀಗಿದೆ...
ಅದೇ ಇನ್ನೊಂದೆಡೆ ರೆಸ್ಯೂಮ್. ಇದು ಸಿವಿಗಿಂತಲೂ ಭಿನ್ನವಾದದ್ದು. ಇದರಲ್ಲಿ ಸಂಪೂರ್ಣವಾಗಿ ನಿಮ್ಮ ಕೆಲಸದ ಅನುಭವ, ನಿಮಗೆ ಆ ಕೆಲಸ ಅಥವಾ ಉದ್ಯೋಗಕ್ಕೆ ತಕ್ಕಂತೆ ಇರುವ ಕೌಶಲ ಮತ್ತು ಅದಕ್ಕೆ ಸಂಬಂಧಿತ ಮಾಹಿತಿಯನ್ನು ಆಧರಿಸಿದೆ. ಸಿವಿಯಲ್ಲಿ ಶಿಕ್ಷಣದ ಮಾಹಿತಿಗೆ ಹೆಚ್ಚು ಒತ್ತು ನೀಡಲಾಗಿದ್ದರೆ, ರೆಸ್ಯೂಮ್ ನಲ್ಲಿ ಶಿಕ್ಷಣಕ್ಕೆ ಅಷ್ಟು ಆದ್ಯತೆ ಇರುವುದಿಲ್ಲ, ಬದಲಿಗೆ ನೀವು ಅಪ್ಲೈ ಮಾಡುವ ಉದ್ಯೋಗಕ್ಕೆ ನಿಮ್ಮ ಅನುಭವ ಹಿಂದೆ ಎಷ್ಟಿದೆ ಎನ್ನುವ ಡಿಟೇಲ್ಸ್ ಬರೆಯಬೇಕಾಗುತ್ತದೆ. ಇದನ್ನು ನೀವು ಒಂದರಿಂದ ಎರಡು ಪುಟಗಳು ಮಾತ್ರ ಇರಬೇಕು. ಇದರಲ್ಲಿ ಶಿಕ್ಷಣದ ಬಗ್ಗೆ ಮಾಹಿತಿ ಇದ್ದರೂ, ಉದ್ಯೋಗ ಮತ್ತು ಅದಕ್ಕೆ ಸಂಬಂಧಿತ ಪ್ರಶಸ್ತಿ ಮತ್ತು ಸಾಧನೆಗಳ ಬಗ್ಗೆ ಸ್ಫುಟವಾಗಿ ಬರೆಯಬೇಕು.
ಒಟ್ಟಾರೆಯಾಗಿ ಹೇಳುವುದಾದರೆ, ನೀವು ಹೊಸದಾಗಿ ಈಗ ತಾನೇ ಉದ್ಯೋಗಕ್ಕೆ ಹೋಗುವುದಿದ್ದರೆ ಸಿವಿಯನ್ನೂ, ಅನುಭವ ಪಡೆದು ಬೇರೊಂದು ಕಂಪೆನಿ, ಸಂಸ್ಥೆಗಳಿಗೆ ಹೋಗುವುದಿದ್ದರೆ ರೆಸ್ಯೂಮ್ ನೀಡಬೇಕಾಗುತ್ತದೆ. ಸಿವಿಯಲ್ಲಿ ಶಿಕ್ಷಣಕ್ಕೆ, ರೆಸ್ಯೂಮ್ನಲ್ಲಿ ಅನುಭವಕ್ಕೆ ಹೆಚ್ಚು ಆದ್ಯತೆ. ಇದು ಇವೆರಡರ ನಡುವೆ ಇರುವ ಮುಖ್ಯವಾದ ವ್ಯತ್ಯಾಸವಾಗಿರುತ್ತದೆ. ನೀವು ಫ್ರೆಶರ್ ಆಗಿದ್ದರೆ ಉದ್ಯೋಗ ಬಯಸಿದ ಕಂಪನಿಗೆ ಸಿವಿಯನ್ನು ಕಳುಹಿಸಬೇಕು. ನೀವು ಅನುಭವಿ ಉದ್ಯೋಗಿಯಾಗಿದ್ದಾರೆ, ರೆಸ್ಯೂಮ್ ಅನ್ನು ಕಳುಹಿಸುವುದು ಸೂಕ್ತ.