ರಾಣಿಬೆನ್ನೂರು[ನ.3]:  ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್ ವತಿಯಿಂದ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರ ಜನ್ಮದಿನದ ಅಂಗವಾಗಿ ನ. 10 ರಂದು ನಗರದ ಬಿ.ಕೆ. ಗುಪ್ತಾ ಪ್ರೌಢಶಾಲೆಯಲ್ಲಿ ಬೃಹತ್‌ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಕೆಕೆ ಇನಿಷಿಯೇಟಿವ್ಸ್  ಸಂಸ್ಥೆಯ ಅಧ್ಯಕ್ಷ ಪ್ರಕಾಶ ಕೋಳಿವಾಡ ತಿಳಿಸಿದರು.

ಬೋಧಕ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಿ

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಂಸ್ಥೆಯ ವತಿಯಿಂದ 4 ಬಾರಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ. 5ನೇ ಬಾರಿಗೆ ಮೇಳವನ್ನು ಹಮ್ಮಿಕೊಂಡಿದ್ದು, ಮೇಳದಲ್ಲಿ ಇನ್ಪೋಸಿಸ್‌, ಟಿವಿಎಸ್‌, ಹೋಂಡಾ, ಟೆಕ್‌ ಮಹೀಂದ್ರಾ ಸೇರಿದಂತೆ 40ಕ್ಕಿಂತ ಅಧಿಕ ಕಂಪನಿಗಳು ಸಂದರ್ಶನಕ್ಕೆ ಆಗಮಿಸಲಿವೆ. ಎಸ್ಸೆಸ್ಸೆಲ್ಸಿ ಪಾಸು ಅಥವಾ ಪೇಲ್‌ ಆದವರು ಹಾಗೂ ಪಿಯುಸಿ, ಯಾವುದೇ ಪದವಿ ಹೊಂದಿದ ಆಸಕ್ತ ನಿರುದ್ಯೋಗ ಯುವಕ ಯುವತಿಯರು ಖುದ್ದಾಗಿ ಸಂಸ್ಥೆಯ ಕಚೇರಿ ಪಿಕೆಕೆ ಇನಿಷಿಯೇಟಿವ್ಸ್ ವಾಗೀಶ ನಗರ 6ನೇ ಕ್ರಾಸ್‌, ಮೇಡ್ಲೇರಿ ರಸ್ತೆ ರಾಣಿಬೆನ್ನೂರ ಇಲ್ಲಿಗೆ ನ. 7ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: 9731568854ಗೆ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.