ರೈಲ್ವೆಯಲ್ಲಿ 55 ವರ್ಷ ಮೇಲ್ಪಟ್ಟ, ಸೋಮಾರಿ ಸಿಬ್ಬಂದಿಗೆ ಗೇಟ್‌ಪಾಸ್!

ರೈಲ್ವೆಯಲ್ಲಿ ಕೆಲಸ ಮಾಡದ 55 ವರ್ಷದ ದಾಟಿದ ಸಿಬ್ಬಂದಿಗೆ ಗೇಟ್‌ ಪಾಸ್‌| 55 ವರ್ಷ ಮೇಲ್ಪಟ್ಟರೈಲ್ವೆ ಸಿಬ್ಬಂದಿಯ ಸೇವಾ ದಾಖಲೆಗಳನ್ನು ರೈಲ್ವೆ ವಲಯಗಳು 2020ರ ಜನವರಿಯಿಂದ ಮಾಚ್‌ರ್‍ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು

To remove under performers Railways asks zonal offices to list employees above 55 years of age

ನವದೆಹಲಿ[ಜು.30]: ಸೋಮಾರಿಗಳಾಗಿ ಕೆಲಸ ಮಾಡಲು ಮೈಗಳ್ಳತನ ತೋರುವ ಸಿಬ್ಬಂದಿಗಳಿಗೆ ಗೇಟ್‌ಪಾಸ್‌ ನೀಡುವಂತೆ ರೈಲ್ವೆ ಇಲಾಖೆ ವಲಯವಾರು ಅಧಿಕಾರಿಗಳಿಗೆ ಸೂಚಿಸಿದೆ. 30 ವರ್ಷ ಸೇವೆ ಸಲ್ಲಿಸಿದವರು ಅಥವಾ 55 ವರ್ಷ ಆದವರಲ್ಲಿ ಕಳಪೆ ಪ್ರದರ್ಶನ ತೋರಿದವರನ್ನು ಗುರುತಿಸಿ ಅವರ ಪಟ್ಟಿಯನ್ನು 2020ರ ಮೊದಲ ತ್ರೈಮಾಸಿಕದ ಒಳಗಾಗಿ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

55 ವರ್ಷ ಮೇಲ್ಪಟ್ಟರೈಲ್ವೆ ಸಿಬ್ಬಂದಿಯ ಸೇವಾ ದಾಖಲೆಗಳನ್ನು ರೈಲ್ವೆ ವಲಯಗಳು 2020ರ ಜನವರಿಯಿಂದ ಮಾಚ್‌ರ್‍ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕಿದೆ.

ಸಮಂಜಸವಾಗಿ ಕಾರ್ಯನಿರ್ವಹಿಸದ ಮತ್ತು ಶಿಸ್ತು ಪಾಲಿಸದ ಸಿಬ್ಬಂದಿಗೆ ಅವಧಿ ಪೂರ್ವ ನಿವೃತ್ತಿ ನೀಡಲಾಗುವುದು. ಈ ವಿಷಯವಾಗಿ ಸರ್ಕಾರ ಗಂಭೀರವಾಗಿದೆ. ರೈಲ್ವೆಯಲ್ಲಿ 13 ಲಕ್ಷ ನೌಕರರಿದ್ದು, 2020ರ ವೇಳೆಗೆ ಅವರ ಸಂಖ್ಯೆಯನ್ನು 10 ಲಕ್ಷಕ್ಕೆ ಇಳಿಸಲು ಸರ್ಕಾರ ಬಯಸಿದೆ.

Latest Videos
Follow Us:
Download App:
  • android
  • ios