ಭಾರತದಲ್ಲಿ ಇರೋಕೆ ಇಷ್ಟಪಡಲ್ಲ ಎಂದ ಸ್ಟೂಡೆಂಟ್‌ಗೆ ಟ್ರೂಕಾಲರ್ ಸಿಇಒನಿಂದ ಜಾಬ್ ಆಫರ್
ಕೆನಡಾದಲ್ಲಿ ವಿದ್ಯಾರ್ಥಿನಿಯಾಗಿರುವ ಭಾರತೀಯ ಯುವತಿಯೊಬ್ಬರು ಇತ್ತೀಚಿಗೆ ಭಾರತವನ್ನು ಬಿಟ್ಟು ಬರುವುದು ನನ್ನ ಕನಸಾಗಿತ್ತು ಅಂದಿರೋ ವಿಡಿಯೋ ತುಂಬಾ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಟ್ರೂಕಾಲರ್ ಸಿಇಒ ಅಲನ್ ಮಮೆಡಿ ಯುವತಿಯ ಮುಂದೆ ಉದ್ಯೋಗದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಸ್ತುತ ಕೆನಡಾದಲ್ಲಿ ವಿದ್ಯಾರ್ಥಿನಿಯಾಗಿರುವ ಭಾರತೀಯ ಯುವತಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೋದಿಂದಾಗಿ ಸಖತ್ ವೈರಲ್ ಆಗುತ್ತಿದ್ದಾರೆ. ಈ ವಿಡಿಯೋದಲ್ಲಿ ಯುವತಿ, ಭಾರತವನ್ನು ತೊರೆದು ವಿದೇಶದಲ್ಲಿ ಉದ್ಯೋಗವನ್ನು ಪ್ರಾರಂಭಿಸುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಸಾಕಷ್ಟು ಜನರು ಆಕೆಯ ಮನೋಭಾವವನ್ನು ಟ್ರೋಲ್ ಮಾಡಿದರು. ಇದರ ಬೆನ್ನಲ್ಲೇ ಟ್ರೂಕಾಲರ್ ಸಿಇಒ ಅಲನ್ ಮಮೆಡಿ ಯುವತಿಯ ಮುಂದೆ ಉದ್ಯೋಗದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಇತ್ತೀಚಿಗೆ ವೈರಲ್ ಆದ ವಿಡಿಯೋದಲ್ಲಿ ಯುವತಿಯ (Girl) ಜೊತೆ ಒಬ್ಬಾತ ಸಂಭಾಷಣೆ ನಡೆಸುತ್ತಿದ್ದ. ಇದರಲ್ಲಿ ಯುವತಿ ತನ್ನನ್ನು ಏಕ್ತಾ ಎಂದು ಪರಿಚಯಿಸಿಕೊಂಡಿದ್ದಳು. ನೀವು ಕೆನಡಾಕ್ಕೆ ಹೇಗೆ ಬಂದಿರಿ ಎಂಬ ಪ್ರಶ್ನೆಗೆ, ಭಾರತವನ್ನು ತೊರೆಯುವುದು ನನ್ನ ಕನಸಾಗಿತ್ತು (Dream) ಎಂದು ಉತ್ತರಿಸಿದ್ದಳು. ಕೆನಡಾದಲ್ಲಿ ತನ್ನ ಜೈವಿಕ ತಂತ್ರಜ್ಞಾನ ಪದವಿಯನ್ನು ಗಳಿಸಿದ ನಂತರ, ವ್ಯವಹಾರದಲ್ಲಿ ವೃತ್ತಿಜೀವನವನ್ನು (Professional life) ಮುಂದುವರಿಸುವ ಭರವಸೆ ಇದೆ ಎಂದು ಆಕೆ ಹೇಳಿದ್ದಳು. ಕೆನದಾಡದಲ್ಲಿ ನಿಮಗೇನು ಹೆಚ್ಚು ಇಷ್ಟ ಎಂದು ಕೇಳಿದಾಗ ಏಕ್ತಾ, ಇಲ್ಲಿನ ಸುಂದರವಾದ ದೃಶ್ಯಾವಳಿ, ಸೂರ್ಯೋದಯ (Sunrising) ಮತ್ತು ಸೂರ್ಯಾಸ್ತ (Sunset)ವನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದರು.
ರೆಸ್ಯೂಮ್ ಹಿಡ್ಕೊಂಡು ಐದು ದಿನ ರಸ್ತೆಯಲ್ಲಿ ನಿಂತ ವ್ಯಕ್ತಿಗೆ ಸಿಕ್ತು ಬಂಪರ್ ಆಫರ್!
ಟ್ರೂಕಾಲರ್ ಸಿಇಒ ಅಲನ್ ಮಮೆಡಿಯಿಂದ ಯುವತಿಗೆ ಉದ್ಯೋಗದ ಪ್ರಸ್ತಾಪ
ಸಾಮಾಜಿಕ ಮಾಧ್ಯಮದಲ್ಲಿ ಯುವತಿಯ ವಿಡಿಯೋ ವೈರಲ್ ಆಗಿದ್ದು, ಆಕೆಯ ಉತ್ತರವನ್ನು ಕೇಳಿ ಹಲವರು ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಯುವತಿಯ ಹೇಳಿಕೆಗೆ ನಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. 'ಹುಟ್ಟಿದ ನಾಡನ್ನು ದ್ವೇಷಿಸುವುದು ಸರಿಯಲ್ಲ' ಎಂದು ಒಬ್ಬ ಬಳಕೆದಾರರು ಹೇಳಿದರೆ, ಇನ್ನೊಬ್ಬರು, 'ಸೂರ್ಯೋದಯ, ಸೂರ್ಯಾಸ್ತಮಾನ ಕೆನಡಾದಲ್ಲಿ ಮಾತ್ರ ಚೆನ್ನಾಗಿರುತ್ತದೆಯೇ' ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು, 'ಯಾವುದೇ ದೇಶವನ್ನು ಇಷ್ಟಪಡುವುದು ಅವರವರ ಇಷ್ಟ' ಎಂದು ತಿಳಿಸಿದ್ದಾರೆ. ಟ್ರೂಕಾಲರ್ ಸಿಇಒ ಅಲನ್ ಮಮೆಡಿ ಯುವತಿಯ ಮುಂದೆ ಉದ್ಯೋಗದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
'ಜನರು ನಿಜವಾಗಿಯೂ ಅವಳನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಮತ್ತು ಹೆಚ್ಚು ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಏಕ್ತಾ, ಎಲ್ಲರೂ ನಿಮ್ಮನ್ನು ಗೇಲಿ ಮಾಡುವುದನ್ನು ಕೇಳಬೇಡಿ. ನೀವು ಕೂಲ್ ಆಗಿದ್ದೀರಿ ಮತ್ತು ಕನಸು ಕಾಣುತ್ತಿದ್ದೀರಿ. ನೀವು ವಿದ್ಯಾಭ್ಯಾಸ ಮುಗಿಸಿದಾಗ ಪ್ರಪಂಚದಾದ್ಯಂತದ ನಮ್ಮ ಯಾವುದೇ ಕಚೇರಿಗಳಲ್ಲಿ ಟ್ರೂಕಾಲರ್‌ನಲ್ಲಿ ನೀವು ಕೆಲಸ ಮಾಡಬಹುದು. ವೆಲ್‌ಕಂ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಟ್ರೂಕಾಲರ್ ಸಿಇಒನ ಈ ನಿರ್ಧಾರಕ್ಕೂ ಜನರಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಕೋಡಿಂಗ್ ಪಾಸಾದ ಭಾರತದ ಬಾಲಕನಿಗೆ ಭಾರಿ ಆಫರ್: ವಯಸ್ಸು ತಿಳಿದು ಆಫರ್ ವಾಪಸ್ ಪಡೆದ US ಸಂಸ್ಥೆ