Asianet Suvarna News Asianet Suvarna News

12710 ಗುತ್ತಿಗೆ ಶಿಕ್ಷಕರ ನೌಕರಿ ಖಾಯಂ ಮಾಡಿದ ಪಂಜಾಬ್‌ ಸರ್ಕಾರ!

ತಮ್ಮ ಕೆಲಸವನ್ನು ಖಾಯಂ ಮಾಡಿದ್ದಕ್ಕಾಗಿ ಶಿಕ್ಷಕಿಯೊಬ್ಬರು ವೇದಿಕೆಯ ಮೇಲೆ ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌ರನ್ನು ಅಪ್ಪಿಕೊಂಡು ಭಾವುಕರಾದರು.

Punjab Chief Minister Bhagwant Mann government regularised 12710 contractual teachers job san
Author
First Published Jul 28, 2023, 9:24 PM IST

ನವದೆಹಲಿ (ಜು.28): ಪಂಜಾಬ್ ಸರ್ಕಾರ ಶುಕ್ರವಾರ 12,710 ಗುತ್ತಿಗೆ ಶಿಕ್ಷಕರ ಕೆಲಸವನ್ನು ಖಾಯಂಗೊಳಿಸುವ ಐತಿಹಾಸಿಕ ತೀರ್ಮಾನ ಮಾಡಿದೆ. ಅದರೊಂದಿಗೆ 20,000 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಸೇವೆಯನ್ನು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಹುದ್ದೆಯನ್ನು ಖಾಯಂಗೊಳಿಸುವ ಪತ್ರಗಳನ್ನು ಹಸ್ತಾಂತರಿಸಿದ್ದಲ್ಲದೆ, ಇದನ್ನು ಐತಿಹಾಸಿಕ ದಿನ ಎಂದು ಕರೆದಿದ್ದಾರೆ. ಭಗವಂತ್‌ ಮಾನ್‌ ಅಧಿಕಾರ ವಹಿಸಿಕೊಂಡ ವೇಳೆ, ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವ ಮೂಲಕ ಈ ಶಿಕ್ಷಕರ ಸೇವೆಗಳನ್ನು ಖಾಯಂಗೊಳಿಸಲು ಒತ್ತು ನೀಡುವುದಾಗಿ ತಿಳಿಸಿದ್ದರು. ಶಿಕ್ಷಕರ ಸ್ವಂತ ಭವಿಷ್ಯ ಸುರಕ್ಷಿತವಾಗಿದ್ದರೆ ಮಾತ್ರವೇ ಅವರು ವಿದ್ಯಾರ್ಥಿಗಳ ಜೀವನವನ್ನು ಬದಲಿಸಬಹುದು ಎಂದು ಅವರು ಹೇಳಿದ್ದರು. ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಶೀಘ್ರವೇ ಬಸ್ ಸೇವೆ ಆರಂಭಿಸಲಿದೆ ಎಂದೂ ತಿಳಿಸಿದ್ದರು. 12,000 ವಿದ್ಯಾರ್ಥಿನಿಯರು ಮತ್ತು 8,000 ವಿದ್ಯಾರ್ಥಿಗಳು ಸೇರಿದಂತೆ 20,000 ವಿದ್ಯಾರ್ಥಿಗಳಿಗೆ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದಿದ್ದರು.

ಈ ಯೋಜನೆಗಾಗಿ 21 ಕೋಟಿ ರೂಪಾಯಿಗಳ ಬಜೆಟ್ ಅನ್ನು ಅಂಗೀಕರಿಸಲಾಗಿದೆ ಮತ್ತು ಸರ್ಕಾರಿ ಶಾಲೆಗಳಿಗೆ ದಾಖಲಾದ ಹೆಣ್ಣುಮಕ್ಕಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಹಾಯ ಮಾಡುವುದು ಇದರ ಮುಖ್ಯ ಗುರಿಯಾಗಿದೆ. ವಿದ್ಯಾರ್ಥಿನಿಯರ ಪೋಷಕರು ಅವರ ಚಲನವಲನವನ್ನು ಪತ್ತೆಹಚ್ಚಲು ಬಸ್‌ಗಳಲ್ಲಿ ಜಿಪಿಎಸ್ ಸಾಧನವನ್ನು ಅಳವಡಿಸಲಾಗುವುದು ಎಂದು ಮಾನ್ ತಿಳಿಸಿದ್ದಾರೆ. ಈ ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಇನ್ನು ಕಾರ್ಯಕ್ರಮದ ವೇಳೆ, ತಮ್ಮ ಕೆಲಸವನ್ನು ಖಾಯಂ ಮಾಡಿದ್ದಕ್ಕಾಗಿ ಶಿಕ್ಷಕಿಯೊಬ್ಬರು ವೇದಿಕೆಯ ಮೇಲೆ ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌ರನ್ನು ಅಪ್ಪಿಕೊಂಡು ಭಾವುಕರಾದರು. ಈ ವೇಳೆ ಮಾತನಾಡಿದ ಮಾನ್‌, ತಮ್ಮ ತಂದೆ ಶಿಕ್ಷಕರಾಗಿದ್ದರು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ. ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ವಾಗ್ದಾನವನ್ನು ಪೂರೈಸಿದ್ದೇನೆ ಎಂದರು.

ಈ ಶಿಕ್ಷಕರು ಅತ್ಯಲ್ಪ ಸಂಬಳದಲ್ಲಿ ಕೆಲಸ ಮಾಡಬೇಕಾಗಿರುವುದು ದುರದೃಷ್ಟಕರ ಮತ್ತು ಸತತ ಸರ್ಕಾರಗಳ "ನಿರಾಸಕ್ತಿ" ಯಿಂದ ತಮ್ಮ ಕಾನೂನುಬದ್ಧ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ಮಾಡಬೇಕಾಗಿತ್ತು ಎಂದಿದ್ದಾರೆ. ಯಾರನ್ನೂ ಹೆಸರಿಸದೆ, ಅರಮನೆಯಲ್ಲಿ ವಾಸಿಸುವ ನಾಯಕರಿಗೆ ಗುಡಿಸಲಿನಲ್ಲಿ ವಾಸಿಸುವವರ ಸಮಸ್ಯೆಗಳು ಗೊತ್ತಾಗೋದಿಲ್ಲ. ಹಾಗಾಗಿ ಅವರು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳೋದಿಲ್ಲ ಎಂದರು.

ಅಧಿಕೃತ ಹೇಳಿಕೆಯ ಪ್ರಕಾರ, ಬಿಎ ಪಾಸ್ ಶಿಕ್ಷಣ ಒದಗಿಸುವವರು (ಸಹ ಶಿಕ್ಷಕರು) ಸೇರಿದಂತೆ 12,710 ಶಿಕ್ಷಕರು ಈವರೆಗೂ ಮಾಸಿಕ 9,500 ರೂ.ಗಳನ್ನು ಪಡೆಯುತ್ತಿದ್ದರು. ಈ ಅವರ ವೇತನ 20,500 ರೂಪಾಯಿ ಆಗಿರಲಿದೆ. ಆದರೆ ಪ್ರಾಥಮಿಕ ಶಿಕ್ಷಕರ ತರಬೇತಿ ಮತ್ತು ನರ್ಸರಿ ಶಿಕ್ಷಕರ ತರಬೇತಿ ಅರ್ಹತೆ ಹೊಂದಿರುವ ಶಿಕ್ಷಕರು 22 ಸಾವಿರ ರೂಪಾಯಿ ವೇತನ ಪಡೆಯಲಿದ್ದಾರೆ. ಈ ಹಿಂದೆ ಅವರಿಗೆ 10,250 ರೂಪಾಯಿ ಸಿಗುತ್ತಿತ್ತು. ಅದೇ ರೀತಿ ಪ್ರಸ್ತುತ 11,000 ರೂಪಾಯಿ ಪಡೆಯುತ್ತಿರುವ ಬಿಎ/ಎಂಎ ಬಿಎಡ್ ಪದವಿ ಹೊಂದಿರುವ ಶಿಕ್ಷಕರಿಗೆ ಇನ್ನು ಮುಂದೆ ಮಾಸಿಕ 23,500 ರೂಪಾಯಿ ವೇತನ ಸಿಗಲಿದೆ. ಪ್ರತಿ ವರ್ಷ ಶಿಕ್ಷಕರಿಗೆ ಶೇ 5ರಷ್ಟು ವೇತನ ಹೆಚ್ಚಳದೊಂದಿಗೆ ಇತರೆ ಸವಲತ್ತುಗಳನ್ನು ನೀಡಲಾಗುವುದು ಎಂದು ಭಗವಂತ್‌ ಸಿಂಗ್ ಮಾನ್‌ ಹೇಳಿದ್ದಾರೆ.


ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಫಿಡೆಲಿಟಿ, ಬೆಂಗಳೂರಿನಲ್ಲಿ ಹೊಸ ಕಚೇರಿ

ಶಿಕ್ಷಕರು ಬೋಧನಾ ಕೆಲಸಕ್ಕೆ ಮಾತ್ರ ಸೇವೆ ಸಲ್ಲಿಸುತ್ತಾರೆ ಮತ್ತು ಅವರಿಗೆ ಬೇರೆ ಯಾವುದೇ ಬೋಧಕೇತರ ಕರ್ತವ್ಯವನ್ನು ನಿಯೋಜಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದೆ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯದಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರವು 66,000 ಶಿಕ್ಷಕರನ್ನು ಕೇಳಿತ್ತು. ಆದರೆ, ಇದಕ್ಕೆ ಸರ್ಕಾರ ನಿರಾಕರಿಸಿದ್ದು, ಈ ಕೆಲಸಕ್ಕೆ ನಿರುದ್ಯೋಗಿ ಯುವಕರನ್ನು ನೇಮಿಸುವಂತೆ ತಿಳಿಸಿದ್ದರು.

ತಿದೊಡ್ಡ ಮ್ಯೂಸಿಯಂ

Follow Us:
Download App:
  • android
  • ios