Asianet Suvarna News Asianet Suvarna News

New National Museum: ದೆಹಲಿಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿದೊಡ್ಡ ಮ್ಯೂಸಿಯಂ 'ಯುಗ ಯುಗದ ಭಾರತ'

ಯುಗ ಯುಗದ ಭಾರತ ರಾಷ್ಟ್ರೀಯ ವಸ್ತುಸಂಗ್ರಹಾಲಯವು ದೆಹಲಿಯ ಜನಪಥ್‌ನಲ್ಲಿ ಈಗಾಗಲೇ ಇರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಬದಲಿಗೆ ನಿರ್ಮಾಣವಾಗಲಿದೆ.
 

Yuge Yugeen Bharat World largest museum to come up in Delhi Check details san
Author
First Published Jul 28, 2023, 8:49 PM IST

ನವದೆಹಲಿ (ಜು.28): ಇತ್ತೀಚೆಗೆ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ ಮಂಟಪ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲಿಯೇ ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಮ್ಯೂಸಿಯಂ ನಿರ್ಮಾಣವಾಗಲಿದೆ ಎಂದು ಘೋಷಣೆ ಮಾಡಿದ್ದರು. ಈಗ ಈ ಮ್ಯೂಸಿಯಂನ ವಿವರಗಳು ಹೊರಬಂದಿದ್ದು, ಇದಕ್ಕೆ ಯುಗ ಯುಗದ ಭಾರತ (ಯುಗೇ ಯುಗೇನ್‌ ಭಾರತ್‌) ರಾಷ್ಟ್ರೀಯ ವಸ್ತು ಸಂಗ್ರಹಾಲಯ ಎಂದು ಹೆಸರಿಡಲಾಗಿದೆ. ಈ ಮ್ಯೂಸಿಯಂನಲ್ಲಿ ಭಾರತದ ಕುರಿತಾಗಿ 5 ಸಾವಿರ ವರ್ಷಗಳ ಹಿಂದಿನ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಭಾಷಣದಲ್ಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಘೋಷಣೆ ಮಾಡಿದ್ದರು. ಕಳೆದ ಮೇ ತಿಂಗಳಲ್ಲಿ, ಪ್ರಗತಿ ಮೈದಾನದಲ್ಲಿ ಅಂತರರಾಷ್ಟ್ರೀಯ ಮ್ಯೂಸಿಯಂ ಎಕ್ಸ್‌ಪೋ ಸಂದರ್ಭದಲ್ಲಿ ನಿರ್ಮಾಣವಾಗಲಿರುವ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್-ಥ್ರೂ ಅನ್ನು ಪ್ರಧಾನಿ ಮಾಡಿದ್ದರು.

ಯುಗ ಯುಗದ ಭಾರತ ಮ್ಯೂಸಿಯಂ ಕುರಿತಾಗಿ ಮಾಹಿತಿ
1. ವಸ್ತುಸಂಗ್ರಹಾಲಯವು 5,000 ವರ್ಷಗಳ ಭಾರತದ ನಾಗರಿಕ ಸಂಸ್ಕೃತಿಯನ್ನು ಪ್ರದರ್ಶಿಸಲು ಎಂಟು ವಿಷಯಾಧಾರಿತ ವಿಭಾಗಗಳನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತದೆ.

2. ಇದು 1.17 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ ಮತ್ತು ಮೂರು ಅಂತಸ್ತುಗಳನ್ನು ಇದು ಹೊಂದಿರಲಿದೆ. ನೆಲಮಾಳಿಗೆಯಲ್ಲಿಯೇ ಬರೋಬ್ಬರಿಇ 950 ಕೋಣೆಗಳು ಇರಲಿದೆ.

3.  ಎಂಟು ವಿಭಾಗಗಳಲ್ಲಿ ಪ್ರಮುಖವಾಗಿ ಪ್ರಾಚೀನ ಭಾರತೀಯ ಜ್ಞಾನ, ಪ್ರಾಚೀನದಿಂದ ಮಧ್ಯಯುಗ, ಮಧ್ಯಯುಗ, ಮಧ್ಯಯುಗದಿಂದ ಪರಿವರ್ತನೆಯ ಹಂತ, ಆಧುನಿಕ ಭಾರತ, ವಸಾಹತುಶಾಹಿ ಆಳ್ವಿಕೆ, ಸ್ವಾತಂತ್ರ್ಯ ಹೋರಾಟ ಮತ್ತು 1947 ರಿಂದ 100 ವರ್ಷಗಳ ಅವಧಿಗಳನ್ನು ಒಳಗೊಂಡಿರುತ್ತದೆ.

4.  ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಗ್ಯಾಲರಿಗಳು ಮತ್ತು ಉದ್ಯಾನಗಳು ಹೇಗೆ ಕಾಣುತ್ತವೆ ಎಂಬುದರ ಕುರಿತು ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್-ಥ್ರೂ ಡಿಜಿಟಲ್ ಅನುಭವದ ಮೂಲಕ ಒಂದು ನೋಟವನ್ನು ನೀಡುತ್ತದೆ. ಭಾರತದ ಪ್ರಾಚೀನ ನಗರ ಯೋಜನಾ ವ್ಯವಸ್ಥೆಗಳು, ವೇದಗಳು, ಉಪನಿಷತ್ತುಗಳು, ಪ್ರಾಚೀನ ವೈದ್ಯಕೀಯ ಜ್ಞಾನ, ಇತ್ಯಾದಿ. ಮೌರ್ಯರಿಂದ ಗುಪ್ತ ಸಾಮ್ರಾಜ್ಯಗಳು, ವಿಜಯನಗರ ಸಾಮ್ರಾಜ್ಯ, ಮೊಘಲ್ ಸಾಮ್ರಾಜ್ಯ ಮತ್ತು ಹಲವಾರು ಇತರ ರಾಜವಂಶಗಳ ಆಳ್ವಿಕೆಯನ್ನು ವಾಕ್‌ಥ್ರೂನಲ್ಲಿ ಉಲ್ಲೇಖಿಸಲಾಗಿದೆ.

5.  ಯುಗ ಯುಗದ ಭಾರತ ಮ್ಯೂಸಿಯಂ ಜನಪಥ್‌ನಲ್ಲಿರುವ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಬದಲಿಗೆ ನಿರ್ಮಾಣವಾಗಲಿದೆ. ಪ್ರಸ್ತುತ ರಾಷ್ಟ್ರೀಯ ವಸ್ತುಸಂಗ್ರಹಾಲಯ ಕಟ್ಟಡವು ಕರ್ತವ್ಯ ಪಥದ ಭಾಗವಾಗಲಿದೆ ಮತ್ತು ಅದರ ಶ್ರೀಮಂತ ಸಂಗ್ರಹಗಳನ್ನು ಯೋಜನೆಯ ಭಾಗವಾಗಿ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳ ಕಟ್ಟಡಗಳಿಗೆ ಸ್ಥಳಾಂತರಿಸಲಾಗುತ್ತದೆ.

ನಿದ್ರೆ ಮಾಡುತ್ತಿದ್ದಾಗ ಗಂಡನನ್ನು ಮಂಚಕ್ಕೆ ಕಟ್ಟಿ ಐದು ತುಂಡು ಮಾಡಿ ಕಾಲುವೆಗೆ ಎಸೆದ ಪತ್ನಿ!

6. ಹೊಸ ಮ್ಯೂಸಿಯಂ ಯೋಜನೆಯ ಟೈಮ್‌ಲೈನ್ ಬಗ್ಗೆ ಹೇಳುವುದಾದರೆ, ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮೀನಾಕ್ಷಿ ಲೇಖಿ ಅವರು ಈ ಹಿಂದೆ ಮಾಹಿತಿ ನೀಡಿದ್ದರು. ಟೈಮ್‌ಲೈನ್‌ಗೂ ಮುಂಚೆಯೇ ಇದನ್ನು ಮುಗಿಸಲಿ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು. ಸರ್ಕಾರವು 2021 ರಲ್ಲಿ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣವಾಗಲಿದೆ ಎಂದಿತ್ತು.

ಫೋನ್‌ ಕಳ್ಳತನದ ದೂರು ಕೊಡಲು ಹೋಗುವಾಗ ಬೈಕ್‌ ಕದ್ದ ಖದೀಮರು!

Follow Us:
Download App:
  • android
  • ios