Asianet Suvarna News Asianet Suvarna News

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ: ಅರ್ಜಿ ಸಲ್ಲಿಸಲು ಅವಧಿ​ ವಿಸ್ತರಣೆ

ಕೊರೋನಾ ಹಾಗೂ ಲಾಕ್‌ಡೌನ್‌ನಿಂದಾಗಿ 2020-21ನೇ ಸಾಲಿನ ಪೊಲೀಸ್‌ ಕಾನ್ಸ್‌ಟೇಬಲ್‌ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ರರಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

Police Constable Exam apply date Extended in Shivamogga
Author
Shivamogga, First Published Jun 13, 2020, 8:22 AM IST

ಶಿವಮೊಗ್ಗ(ಜೂ.13): 2020-21ನೇ ಸಾಲಿನ ಪೊಲೀಸ್‌ ಕಾನ್ಸ್‌ಟೇಬಲ್‌ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕಿಸಿ ಈ ಹಿಂದೆ ನಿಗ​ಪಡಿಸಲಾಗಿದ್ದ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಮಾತ್ರ ವಿಸ್ತರಿಸಲಾಗಿದ್ದು, ಇನ್ನುಳಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ಅ​ಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಿಪಿಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) ಹಾಗೂ ಎಪಿಸಿ (ಪುರುಷ) (ಕಲ್ಯಾಣ ಕರ್ನಾಟಕ) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-9 ಹಾಗೂ ಶುಲ್ಕ ಪಾವತಿಸಲು ಜುಲೈ 13, ಸಿಪಿಸಿ (ಪುರುಷ ಮತ್ತು ಮಹಿಳಾ) ಹಾಗೂ ಎಪಿಸಿ (ಪುರುಷ)( ಸಿಎಆರ್‌/ಡಿಎಆರ್‌) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-13 ಹಾಗೂ ಶುಲ್ಕ ಪಾವತಿಸಲು ಜುಲೈ 15 ಹಾಗೂ ಸ್ಪೇ. ಆರ್‌.ಪಿ.ಸಿ. (ಪುರುಷ /ಮಹಿಳಾ) (ಕೆಎಸ್‌ಆರ್‌ಪಿ /ಐ.ಆರ್‌.ಬಿ) ಹಾಗೂ ಸ್ಪೇ./ಆರ್‌ಪಿಸಿ (ಪುರುಷ) (ಬ್ಯಾಂಡ್ಸ್‌ಮನ್‌) (ಕೆಎಸ್‌ಆರ್‌ಪಿ/ಐ.ಆರ್‌.ಬಿ.) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-6 ಹಾಗೂ ಶುಲ್ಕ ಪಾವತಿಸಲು ಜುಲೈ 7 ಕೊನೆ ದಿನಾಂಕ ಆಗಿರುತ್ತದೆ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-261413/259022 ಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ವಿವಿಧ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಕೆಪಿಎಸ್​​ಸಿ

ದ್ವಿತಿಯ ಪಿಯು ಪರೀಕ್ಷೆ: ನಿಷೇಧಾಜ್ಞೆ ಜಾರಿ

ಶಿವಮೊಗ್ಗ: ಜೂನ್‌ 18ರಂದು ಜಿಲ್ಲೆಯ 33 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆಯುತ್ತಿದ್ದು, ಅಂದು ಬೆಳಗ್ಗೆ 7.30ರಿಂದ ಸಂಜೆ 4ರವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿಸಲಾಗಿದೆ. ಈ ಅವ​ಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಟೈಪಿಂಗ್‌, ಝೆರಾಕ್ಸ್‌ ಅಂಗಡಿಗಳು ತೆರೆಯುವುದನ್ನು ನಿಷೇ​ಧಿಸಲಾಗಿದೆ. 

ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅ​ಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳೊಳಗೆ ಪ್ರವೇಶಿಸುವುದನ್ನು ನಿಷೇ​ಧಿಸಲಾಗಿದೆ. ಈ ನಿರ್ಬಂಧಿ​ತ ಪ್ರದೇಶದ ಸುತ್ತಮುತ್ತಲಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚಿನ ಜನರು ಸೇರುವುದನ್ನು ನಿಷೇ​ಧಿಸಲಾಗಿದೆ. ಅಲ್ಲದೇ ಮೊಬೈಲ್‌ ಬಳಕೆ ನಿಷೇಧಿಸಿ ಜಿಲ್ಲಾ​ಧಿಕಾರಿ ಕೆ.ಬಿ. ಶಿವಕುಮಾರ್‌ ಆದೇಶ ನೀಡಿದ್ದಾರೆ. 

ಯಾರಾದರೂ 200 ಮೀ ವ್ಯಾಪ್ತಿಯೊಳಗೆ ಪ್ರವೇಶಿಸಿದರೆ, ಪ್ರವೇಶಿಸಲು ಯತ್ನಿಸಿದರೆ ಅಂತಹವರನ್ನು ಪೊಲೀಸ್‌ ವಶಕ್ಕೆ ಪಡೆದು ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ​ಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios