ಆಫೀಸ್ ಮ್ಯಾನರ್ಸ್ ಫಾಲೋ ಮಾಡಿಲ್ಲ ಅಂದ್ರೆ ಬರುತ್ತೆ ಕೆಲಸಕ್ಕೆ ಕುತ್ತು
ಆಫೀಸ್‍ನಲ್ಲಿ ನೀವೊಂದು ಶಿಸ್ತು ಪಾಲಿಸುವುದು ಅಗತ್ಯ. ಇಲ್ಲವಾದರೆ ನಿಮ್ಮ ವ್ಯಕ್ತಿತ್ವಕ್ಕೆ ಹಾನಿಯಾಗುವ ಜೊತೆಗೆ ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರಲು ಸವಾಲು ಎದುರಾಗಬಹುದು. ಆಫೀಸ್‍ನಲ್ಲಿರುವ ಲಿಖಿತ ಹಾಗೂ ಅಲಿಖಿತ ಚೌಕಟ್ಟನ್ನು ದಾಟುವ ಪ್ರಯತ್ನವನ್ನು ಎಂದಿಗೂ ಮಾಡಬೇಡಿ.
ಆಫೀಸ್ ಎಂದ ಮೇಲೆ ಅಲ್ಲೊಂದು ನೀತಿ-ನಿಯಮಗಳ ಚೌಕಟ್ಟು ಇದ್ದೇಇರುತ್ತದೆ. ಸಹೋದ್ಯೋಗಿಗಳೊಂದಿಗೆ ಎಷ್ಟೇ ಉತ್ತಮ ಬಾಂಧವ್ಯ ಹೊಂದಿದ್ದರೂ ಕೆಲಸದ ವಿಷಯ ಬಂದಾಗ ರೂಲ್ಸ್ ಫಾಲೋ ಮಾಡೋದು ಅಗತ್ಯ.ಆಫೀಸ್ನಲ್ಲಿ ಕೆಲಸದಷ್ಟೇ ನಿಮ್ಮ ವರ್ತನೆಗಳು ಕೂಡ ಮುಖ್ಯವಾಗುತ್ತವೆ. ಮನೆಯಲ್ಲಿ ಚೆಲ್ಲುಚೆಲ್ಲಾಗಿ ಆಡಿದಂತೆ ಆಫೀಸ್‍ನಲ್ಲೂ ವರ್ತಿಸಿದರೆ ನಿಮ್ಮ ರಿಪ್ಯೂಟೇಷನ್ ಹಾಳಾಗುವುದು ಗ್ಯಾರಂಟಿ. ಬಾಸ್, ಸೀನಿಯರ್ಸ್ ನಿಮ್ಮೊಂದಿಗೆ ಎಷ್ಟೇ ಸಲುಗೆಯಿಂದಿದ್ದರೂ ಅಲ್ಲೊಂದು ಪ್ರೋಟೋಕಾಲ್ಸ್ ಇದ್ದೇಇ ಮತ್ತದಕ್ಕೆ ನೀವು ಗೌರವ ಕೊಡುವುದು ಅಗತ್ಯ. ಆದರೆ,ಆ ನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ನಮ್ಮಲ್ಲಿ ಬಹುತೇಕರು ಮರೆತು ಬಿಡುತ್ತಾರೆ.ಇದರಿಂದ ಅವರ ವ್ಯಕ್ತಿತ್ವಕ್ಕೆ ಹಾನಿಯಾಗುವುದು ಗ್ಯಾರಂಟಿ. ಆದಕಾರಣ ಆಫೀಸ್‍ನಲ್ಲಿರುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಡುವುದು ಅಗತ್ಯ.
• ಲೇಟ್ ಲತೀಫ್ ಆಗಬೇಡಿ: ಆಫೀಸ್‍ಗೆ ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ಲೇಟಾಗಿ ಹೋಗುವುದರಲ್ಲಿ ಖಂಡಿತಾ ತಪ್ಪಿಲ್ಲ. ಆದರೆ, ಪ್ರತಿದಿನ 5-10 ನಿಮಿಷ ತಡವಾಗಿ ಹೋಗುವ ಅಭ್ಯಾಸ ನಿಮಗಿದ್ದರೆ, ಅದು ಒಂದಲ್ಲೊಂದು ದಿನ ನಿಮಗೆ ಮುಳುವಾಗುವ ಸಾಧ್ಯತೆಯಿದೆ. 5 ನಿಮಿಷ ತಡವಾಗಿದ್ದಷ್ಟೇ ತಾನೇ,ನಡೆಯುತ್ತೆ ಎಂಬ ಭಾವನೆ ನಿಮ್ಮಲ್ಲಿದ್ದರೆ ಬಿಟ್ಟುಬಿಡಿ. ಅದರಲ್ಲೂ ಮೀಟಿಂಗ್‍ಗಳಿಗೆ ತಡವಾಗಿ ಹಾಜರಾಗುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ.ಇದು ನಿಮ್ಮಲ್ಲಿನ ವೃತ್ತಿಪರತೆ ಕೊರತೆಯನ್ನು ಎತ್ತಿ ತೋರಿಸುತ್ತದೆ.
• ಫೋನ್ ಬಳಕೆಯಲ್ಲಿ ಶಿಸ್ತಿರಲಿ: ಕೆಲವರ ಮೊಬೈಲ್ ರಿಂಗ್‍ಟೋನ್ ಹೈ ವಾಲ್ಯೂಮ್‍ನಲ್ಲಿರುತ್ತದೆ. ಇದರಿಂದ ಕಾಲ್ ಬಂದಾಗ ಅಕ್ಕಪಕ್ಕದಲ್ಲಿರುವವರಿಗೆ ಡಿಸ್ಟರ್ಬ್ಆಗಬಹುದು. ಇನ್ನು ಆಫೀಸ್‍ನಲ್ಲಿರುವಾಗ ಫೋನ್‍ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಅಭ್ಯಾಸ ಕೂಡ ಒಳ್ಳೆಯದ್ದಲ್ಲ. ಮೀಟಿಂಗ್‍ನಲ್ಲಿ ಪದೇಪದೆ ಫೋನ್ ನೋಡುವುದು, ಕಾಲ್ ರಿಸೀವ್ ಮಾಡಿ ಮಾತನಾಡುವುದು ಕೆಟ್ಟ ಅಭ್ಯಾಸ. ಇದು ನೀವು ಮೀಟಿಂಗ್ ಮೇಲೆ ಗಮನ ಕೇಂದ್ರೀಕರಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.ದೈಹಿಕವಾಗಿಯಷ್ಟೇ ನೀವು ಹಾಜರಿದ್ದೀರಿ, ಆದರೆ ಮಾನಸಿಕವಾಗಿ ಬೇರೆಲ್ಲೂ ಇರುವ ಸೂಚನೆ ಇದು. ಇಂಥ ವರ್ತನೆ ಮುಂದೆ ನಿಮಗೆ ಪ್ರಮೋಷನ್ ಸೇರಿದಂತೆ ಕೆಲವೊಂದು ಅವಕಾಶಗಳು ಕೈತಪ್ಪಲು ಕಾರಣವಾಗಬಹುದು.
ಅಪ್ಪನಂತಹ ಬಾಸ್ ಇದ್ರೆ ಉದ್ಯೋಗಿಗಳು ಫುಲ್ ಖುಷ್!
• ಮನೆ ತಲೆನೋವು ಇಲ್ಲಿಗೆ ಬೇಡ: ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಬಹುದು.ಅದೆಷ್ಟೇ ಒತ್ತಡವಿರಲಿ, ಮನೆಯ ರಗಳೆಯನ್ನು ಆಫೀಸ್‍ಗೆ ಹೊತ್ತು ತರಬೇಡಿ.ಇದರಿಂದ ನಿಮಗೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೆ ಒಂದಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
• ಬೇರೆಯವರ ಕೆಲಸಕ್ಕೆ ಅಡ್ಡಿ ಸಲ್ಲ: ಕೆಲವರಿಗೊಂದು ಕೆಟ್ಟ ಚಟವಿರುತ್ತದೆ.ಅದೇನೆಂದರೆ ತಮಗೆ ಕೆಲಸ ಮಾಡಲು ಮೂಡ್ ಇಲ್ಲದಿರುವಾಗ ಬೇರೆಯವರ ಕೆಲಸಕ್ಕೆ ಅಡ್ಡಿಯುಂಟು ಮಾಡುವುದು.ಅವರೇನೋ ಮುಖ್ಯವಾದ ಕೆಲಸ ಮಾಡುತ್ತಿರುತ್ತಾರೆ, ಆಗ ಇವರು ಪದೇಪದೆ ಕರೆದೋ ಇಲ್ಲ ಏನೇನೋ ಅನಗತ್ಯ ವಿಷಯಗಳನ್ನು ಪ್ರಶ್ನಿಸುತ್ತ ಅವರಿಗೆ ಡಿಸ್ಟರ್ಬ್ ಮಾಡುತ್ತಾರೆ.ಇಂಥ ವರ್ತನೆ ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ಎಂಬುದು ನೆನಪಿಡಿ.
• ಗಾಸಿಪ್‍ಗೆ ಸೊಪ್ಪು ಹಾಕಬೇಡಿ: ಸಹೋದ್ಯೋಗಿಗಳ ವೈಯಕ್ತಿಕ ಬದುಕಿನ ಬಗ್ಗೆ ಆಸಕ್ತಿ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ನಿಮ್ಮೊಂದಿಗೆ ಮಾತನಾಡಬಹುದು. ಇದು ಸಹಜ. ಆದರೆ, ಅವರ ವೈಯಕ್ತಿನ ಬದುಕಿನ ಮಾಹಿತಿ ನಿಮಗೆ ಗೊತ್ತು ಎಂಬ ಕಾರಣಕ್ಕೆ ಆ ಬಗ್ಗೆ ಗಾಸಿಪ್ ಮಾಡುವುದು ತಪ್ಪು. ಇದರಿಂದ ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧ ಕೆಡುತ್ತದೆ.ಇನ್ನೊಬ್ಬರು ನಿಮ್ಮ ಬಳಿ ಅವರ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಾಗ ಗಮನವಿಟ್ಟು ಕೇಳಿ, ತಪ್ಪೇನಿಲ್ಲ.ಆದರೆ, ನೀವಾಗಿ ಅವರ ವೈಯಕ್ತಿಕ ವಿಚಾರಗಳನ್ನು ಕೆದಕಲು ಹೋಗಬೇಡಿ.
ಟೀಂನಲ್ಲಿ ಸ್ಮಾರ್ಟ್ ವರ್ಕರ್ ಆಗಲು ನಿಮ್ಮಲ್ಲಿವೆಯೇ ಈ ಗುಣಗಳು?
• ಇನ್ನೊಬ್ಬರ ಕೆಲಸದ ಕುರಿತ ಕೆಟ್ಟ ಕುತೂಹಲ ಬಿಡಿ: ಆ ಕಡೆ ಈ ಕಡೆ ಹೋಗುವಾಗ ಸಹೋದ್ಯೋಗಿಗಳ ಕಂಪ್ಯೂಟರ್ ಸ್ಕ್ರೀನ್ ನೋಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅವರು ಸಿಸ್ಟಂ ಆನ್ ಇಟ್ಟು ಬೇರೆ ಕಡೆ ತೆರಳಿರುವಾಗ ಕದ್ದು ಅವರ ಸಿಸ್ಟಂ ನೋಡುವುದು ತಪ್ಪು. ಇದು ಅವರ ಪ್ರೈವಸಿಗೆ ಭಂಗ ತಂದಂತೆ. ನಿಮ್ಮ ಮೇಲ್ ಅಥವಾ ಮೆಸೇಜ್‍ಗಳನ್ನು ಬೇರೆಯವರು ಓದಿದರೆ ನಿಮಗೆ ಸಿಟ್ಟು ಬರುತ್ತದೋ ಇಲ್ಲವೋ? ಅವರಿಗೂ ಹಾಗೇ ಆಗುತ್ತದೆ ಅಲ್ಲವೆ? ಹೀಗಾಗಿ ಸಹೋದ್ಯೋಗಿಗಳ ಪ್ರೈವಸಿಗೆ ಭಂಗ ತರಬೇಡಿ.
• ತೀವ್ರ ಅನಾರೋಗ್ಯವಿದ್ದಾಗ ಬರಲೇಬೇಡಿ: ತೀವ್ರ ಅನಾರೋಗ್ಯವಿರುವಾಗ ಆಫೀಸ್‍ಗೆ ಬರಲೇಬೇಡಿ. ಅನಾರೋಗ್ಯವಿರುವಾಗಲೂ ಆಫೀಸ್‍ಗೆ ಬರುವುದರಿಂದ ಬಾಸ್ ಹಾಗೂ ಸಹೋದ್ಯೋಗಿಗಳ ಮೆಚ್ಚುಗೆ ಗಳಿಸಬಹುದು ಎಂದು ನೀವು ಯೋಚಿಸಿದರೆ,ಅದು ತಪ್ಪು.