ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1791 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ವಾಯುವ್ಯ ರೈಲ್ವೆ, ಜೈಪುರವು 1961 ಆಕ್ಟ್ ಅಪ್ರೆಂಟಿಸ್ ನಿಯಮದ ಅಡಿಯಲ್ಲಿ NWR ನಲ್ಲಿ ವಿವಿಧ ವಿಭಾಗಗಳಲ್ಲಿ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಅರ್ಹ ಅಭ್ಯರ್ಥಿಗಳು ಯಾವುದಾದರು ಒಂದು ಡಿವಿಸನ್‌ಗೆ ಮಾತ್ರ ಅರ್ಜಿ ಸಲ್ಲಿಸಬಹುದು.

North Western Railway Apprentice Recruitment 2024 Apply Online for 1791 Posts mrq

ನವದೆಹಲಿ: ರೈಲ್ವೆ ನೇಮಕಾತಿ ವಿಭಾಗದಿಂದ ಹೊಸ ಅಧಿಸೂಚನೆ ಪ್ರಕಟವಾಗಿದೆ. ವಾಯುವ್ಯ ರೈಲ್ವೇ, ಜೈಪುರವು 1961 ಆಕ್ಟ್ ಅಪ್ರೆಂಟಿಸ್ ನಿಯಮದ ಅಡಿಯಲ್ಲಿ NWR ನಲ್ಲಿ ವಿವಿಧ ವಿಭಾಗಗಳಲ್ಲಿ 1791 ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಅರ್ಹ ಅಭ್ಯರ್ಥಿಗಳು ಯಾವುದಾದರು ಒಂದು ಡಿವಿಸನ್‌ಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಹುದ್ದೆಯ ವಿವರ ಮತ್ತು ಅರ್ಜಿ ಶುಲ್ಕ ಎಷ್ಟು ಮತ್ತು ಸಲ್ಲಿಕೆ ಹೇಗೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

ಅರ್ಜಿಯ ಶುಲ್ಕ
ಎಲ್ಲಾ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ,  SC/ ST/ Women/ PWD ವರ್ಗದ ಅಭ್ಯರ್ಥಿಗಳಿಗೆ ಯಾವುದೇ  ಶುಲ್ಕ ಇರಲ್ಲ. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಯುಪಿಐ/ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು. 

ಪ್ರಮುಖ ದಿನಾಂಕಗಳು 
ನೋಟಿಫಿಕೇಶನ್ ಪ್ರಕಟವಾದ ದಿನಾಂಕ: 06-11-2024
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-11-2024
ಅರ್ಜಿ ಸಲ್ಲಿಕೆ ಮತ್ತು ಆನ್‌ಲೈನ್ ಪೇಮೆಂಟ್ ಕೊನೆಯ ದಿನಾಂಕ: 10-12-2024 ರಿಂದ ರಾತ್ರಿ 23.59 ಗಂಟೆಯವರೆಗೆ

ವಯಸ್ಸಿನ ಮಿತಿ
ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ. ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ವಿದ್ಯಾರ್ಹತೆ
ಅಭ್ಯರ್ಥಿ 10ನೇ ತರಗತಿ ಉತ್ತೀರ್ಣರಾಗಿರಬೇಕು. (10+2 ಪರೀಕ್ಷಾ ಪದ್ಧತಿ) ಐಟಿಐ ಅಥವಾ ಅದಕ್ಕೆ ಸಮಾಂತರ ಕೋರ್ಸ್/ NCVT/ SCVT 

ಇದನ್ನೂ ಓದಿ: 300 ಅರ್ಜಿ, 500 ಇಮೇಲ್, 5 ತಿಂಗಳ ಸತತ ಪ್ರಯತ್ನ, ಭಾರತೀಯನಿಗೆ ಟೆಸ್ಲಾದಲ್ಲಿ ಸಿಕ್ತು ಉದ್ಯೋಗ!
 
ಅಪ್ರೆಂಟಿಸ್ ಹುದ್ದೆಯ ವಿವರಗಳು

ಡಿವಿಸನ್ ಹೆಸರು ಒಟ್ಟು
ಡಿಆರ್‌ಎಂ ಆಫಿಸ್, ಅಜ್ಮೀರ್ ಡಿವಿಸನ್ 440
ಡಿಆರ್‌ಎಂ ಆಫಿಸ್, ಬಿಜಾನೇರ್ ಡಿವಿಸನ್ 482
ಡಿಆರ್‌ಎಂ ಆಫಿಸ್, ಜೈಪುರ ಡಿವಿಸನ್ 532
ಡಿಆರ್‌ಎಂ ಆಫಿಸ್, ಜೋಧಪುರ ಡಿವಿಸನ್ 67
ಬಿಟಿಸಿ ಕ್ಯಾರೇಜ್,ಅಜ್ಮೀರ್ 99
ಬಿಟಿಸಿ, ಲೋಕೋ, ಅಜ್ಮೀರ್ 69
ಕ್ಯಾರೇಜ್ ವರ್ಕ್ ಶಾಪ್, ಬಿಕಾನೇರ್ 32
ಕ್ಯಾರೇಜ್ ವರ್ಕ್  ಶಾಪ್, ಜೋಧಪುರ 70

ಸ್ಟೈಫಂಡ್ (ಶಿಷ್ಯವೇತನ) 
ರೈಲ್ವೇ ಬೋರ್ಡ್ ನಿಯಮಗಳು ಮತ್ತು ನಿರ್ದೇಶನಗಳ ಪ್ರಕಾರ ಕಾಲಕಾಲಕ್ಕೆ ತರಬೇತಿ ಅವಧಿಯಲ್ಲಿ ಸ್ಟೈಫಂಡ್ (ಶಿಷ್ಯವೇತನ) ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಹಾಸ್ಟೆಲ್ ಸೌಕರ್ಯ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ತರಬೇತಿಯ ಸಮಯದಲ್ಲಿ ಅಪ್ರೆಂಟಿಸ್ ಕಾಯಿದೆ 1961 ರ ಪ್ರಕಾರ ತಮ್ಮದೇ ಆದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ:  ಯೂನಿಯನ್ ಬ್ಯಾಂಕ್‌ನಲ್ಲಿ 85 ಸಾವಿರ ಸಂಬಳದ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಕನ್ನಡ ಬರುತ್ತಾ ನೀವು ಅಪ್ಲೈ ಮಾಡಿ

Latest Videos
Follow Us:
Download App:
  • android
  • ios