ನವದೆಹಲಿ[ಏ.30]: ಕಳೆದ ಎರಡು ದಶಕಗಳ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮ ಬದಲಾವಣೆ ಮಾಡಲು ಭಾರತೀಯ ವೈದ್ಯಕೀಯ ಕೌನ್ಸಿಲ್‌ ಮುಂದಾಗಿದೆ.

ಬರುವ ಆಗಸ್ಟ್‌ನಿಂದ ಎಂಬಿಬಿಎಸ್‌ ಪದವಿಯಲ್ಲಿ ವಿದ್ಯಾರ್ಥಿಗಳು ಹೊಸ ಪಠ್ಯಕ್ರಮದ ಪ್ರಕಾರ ವ್ಯಾಸಂಗ ನಡೆಸಬೇಕಾಗುತ್ತದೆ.

22 ವರ್ಷಗಳ ಬಳಿಕ ಪಠ್ಯಕ್ರಮ ಬದಲಾಗುತ್ತಿದೆ. ಭಾರತೀಯ ವೈದ್ಯ ಮಂಡಳಿಯಿಂದ ತರಬೇತಿ ಪಡೆದಿರುವ 40 ಸಾವಿರ ವೈದ್ಯ ಬೋಧಕರು ಪಠ್ಯಕ್ರಮ ರಚನೆಯಲ್ಲಿ ನಿರತರಾಗಿದ್ದಾರೆ.