ವಾರದ ಈ ದಿನ ಉದ್ಯೋಗಿಗಳು ಕೆಲ್ಸ ಮಾಡೋಕೆ ಸಿಕ್ಕಾಪಟ್ಟೆ ಸೋಮಾರಿಗಳಂತೆ!

ಕಾರ್ಪೋರೇಟ್ ಕಂಪೆನಿಗಳು, ಒತ್ತಡದ ಕೆಲಸಗಳು ಎಂಥವರನ್ನೂ ಹೈರಾಣಾಗಿಸಿಬಿಡುತ್ತದೆ. ಜಾಣರಂತೆ ಸ್ಮಾರ್ಟ್ ವರ್ಕ್ ಮಾಡುವವರು ಕೆಲವರಾದ್ರೆ, ಮೈ ಮೇಲೆಲ್ಲಾ ಕೆಲ್ಸ ಎಳ್ಕೊಂಡು ಒದ್ದಾಡುವವರು ಕೆಲವರು. ಆದರೆ ಇವೆಲ್ಲಾ ಅಲ್ಲದೆಯೂ ವಾರದ ಈ ದಿನ ಉದ್ಯೋಗಿಗಳು ಕೆಲ್ಸ ಮಾಡೋಕೆ ಸಿಕ್ಕಾಪಟ್ಟೆ ಸೋಮಾರಿಗಳಾಗಿರ್ತಾರಂತೆ. 

Monday is not the Least productive workday, then what is Study reveals Vin

ಕಾರ್ಪೋರೇಟ್ ಕಂಪೆನಿಗಳು, ಒತ್ತಡದ ಕೆಲಸಗಳು ಎಂಥವರನ್ನೂ ಹೈರಾಣಾಗಿಸಿಬಿಡುತ್ತದೆ. ಜಾಣರಂತೆ ಸ್ಮಾರ್ಟ್ ವರ್ಕ್ ಮಾಡುವವರು ಕೆಲವರಾದ್ರೆ, ಮೈ ಮೇಲೆಲ್ಲಾ ಕೆಲ್ಸ ಎಳ್ಕೊಂಡು ಒದ್ದಾಡುವವರು ಕೆಲವರು. ಲಕ್ಸುರಿ ಲೈಫ್‌ಸ್ಟೈಲ್‌, ಫುಡ್‌ ತಿನ್ನೋಕೆ ದುಡ್ಡು ಬೇಕು ಅಂತಾನೆ ಜಾಬ್ ಸೇರೋರು ಕೆಲವರಾದ್ರೆ, ಲೈಫ್‌ಲ್ಲಿ ಒಮ್ಮೆ ಸೆಟ್ಲ್‌ ಆಗಿ ಬಿಡೋಣ ಅಂತಾನೇ ಕೆಲ್ಸ ಮಾಡೋರು ಮತ್ತಷ್ಟು ಮಂದಿ. ಒಟ್ನಲ್ಲಿ ಸ್ಪಲ್ಪ ಎನರ್ಜಿಟಿಕ್‌, ಸ್ಪಲ್ಪ ಬೋರಿಂಗ್ ಅಂತ ಕೆಲ್ಸ ತನ್ನ ಪಾಡಿಗೆ ತಾನೇ ಹೋಗ್ತಿರುತ್ತೆ. ಕುಟುಂಬದ ಒತ್ತಡ, ಆರೋಗ್ಯ ಸಮಸ್ಯೆಯಿಂದ ಕೆಲವೊಮ್ಮೆ ಕೆಲವರಿಗೆ ವರ್ಕ್ ಮಾಡೋಕೆ ಕಷ್ಟ ಆಗೋದು ಇದೆ. ಆದರೆ ಇವೆಲ್ಲಾ ಕಾರಣಗಳಲ್ಲದೆಯೂ ವಾರದ ಈ ದಿನ ಉದ್ಯೋಗಿಗಳು ಕೆಲ್ಸ ಮಾಡೋಕೆ ಸಿಕ್ಕಾಪಟ್ಟೆ ಸೋಮಾರಿಗಳಾಗಿರ್ತಾರಂತೆ. 

ಟೆಕ್ಸಾಸ್ A&M ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಒಂದು ಅಧ್ಯಯನದಲ್ಲಿ ಈ ವಿಚಾರವನ್ನು ಕಂಡುಹಿಡಿದಿದೆ, ಹೆಚ್ಚಿನ ಕಛೇರಿ ನೌಕರರು ಒಪ್ಪಿಕೊಳ್ಳಬಹುದಾದ ವಿಷಯವನ್ನು ತಂಡದ ಸದಸ್ಯರು ಸಾಬೀತುಪಡಿಸಿದ್ದಾರೆ. ಇದರಲ್ಲಿ ಯಾವ ದಿನ ಉದ್ಯೋಗಿಗಳು ಕೆಲಸ ಮಾಡಲು ಸೋಮಾರಿತನ ಹೊಂದಿರುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದು ನಾವೆಲ್ಲರೂ ಅಂದುಕೊಂಡಂತೆ ವೀಕೆಂಡ್ ಮುಗಿದ ಮುಂದಿನ ದಿನ ಸೋಮವಾರ ಅಲ್ಲ ಬದಲಿಗೆ ವೀಕೆಂಡ್ ಹಿಂದಿನ ದಿನ ಶುಕ್ರವಾರ.

Bengaluru: ಮನೆಯಲ್ಲಿ ಕೆಲ್ಸ ಮಾಡೋದು ಕಷ್ಟವೇ? ಕಡಿಮೆ ಬಾಡಿಗೆಗೆ ಸಿಗ್ತಿದೆ ಸ್ಟಡಿ ರೂಮ್

ಶುಕ್ರವಾರ ಉದ್ಯೋಗಿಗಳ ಪ್ರಾಡಕ್ಟಿವಿಟಿ ಕಡಿಮೆ
ಈ ಅಧ್ಯಯನವು ಎರಡು ವರ್ಷಗಳ ಅವಧಿಯಲ್ಲಿ ಟೆಕ್ಸಾಸ್‌ನ ದೊಡ್ಡ ಇಂಧನ ಕಂಪನಿಯೊಂದರಲ್ಲಿ 789 ಕಚೇರಿಯ ಉದ್ಯೋಗಿಗಳ (Employess) ಕಂಪ್ಯೂಟರ್ ಬಳಕೆಯ ಮೆಟ್ರಿಕ್‌ಗಳನ್ನು ಜನವರಿ 1, 2017 ರಿಂದ ಡಿಸೆಂಬರ್ 31, 2018ರ ವರೆಗೆ ತೆಗೆದುಕೊಂಡಿದೆ. ಸಂಶೋಧಕರ ತಂಡವು ನೌಕರರು ನಿಜವಾಗಿಯೂ ಶುಕ್ರವಾರ ಕಡಿಮೆ ಸಕ್ರಿಯರಾಗಿದ್ದಾರೆ ಎಂದು ಕಂಡುಹಿಡಿದಿದೆ. ಶುಕ್ರವಾರ (Friday) ಮಧ್ಯಾಹ್ನವು ಕಾರ್ಮಿಕರ ವರ್ಕ್‌ ಪ್ರಾಡಕ್ಟಿವಿಟಿ ಕಡಿಮೆಯಿರುತ್ತದೆ ಎಂದು ಬಯೋಸ್ಟಾಟಿಸ್ಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಟೇಹ್ಯುನ್ ರೋಹ್ ಹೇಳಿದರು. ಪ್ರತಿ ಮಧ್ಯಾಹ್ನ ಮತ್ತು ವಿಶೇಷವಾಗಿ ಶುಕ್ರವಾರ ಮಧ್ಯಾಹ್ನ ಕಂಪ್ಯೂಟರ್ ಬಳಕೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

'ಸೋಮವಾರದಿಂದ ಗುರುವಾರದವರೆಗೆ ಪ್ರತಿದಿನ ಹೆಚ್ಚು ಮೌಸ್ ಚಲನೆ, ಮೌಸ್ ಕ್ಲಿಕ್‌ಗಳು ಮತ್ತು ಸ್ಕ್ರಾಲ್‌ಗಳನ್ನು ಉದ್ಯೋಗಿಗಳು ಹೊಂದಿದ್ದರು, ನಂತರ ಶುಕ್ರವಾರದಂದು ಈ ಚಟುವಟಿಕೆ ಕಡಿಮೆಯಾಗಿದೆ' ಎಂದು ರೋಹ್ ಹೇಳಿದರು. ಮಾತ್ರವಲ್ಲ ಉದ್ಯೋಗಿಗಳು 'ಸೋಮವಾರದಿಂದ ಬುಧವಾರದವರೆಗೆ ಕೆಲಸ (Work) ಮಾಡುವ ಕೆಲಸಗಳ ಸಂಖ್ಯೆಯು ಸ್ಥಿರವಾಗಿ ಹೆಚ್ಚಾಗುತ್ತದೆ, ನಂತರ ಗುರುವಾರ ಮತ್ತು ಶುಕ್ರವಾರ ಕಡಿಮೆಯಾಗುತ್ತದೆ' ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿದೆ: ಇನ್ಫೋಸಿಸ್‌ ನಾರಾಯಣ ಮೂರ್ತಿ!

ಸೋಮವಾರ ಅತ್ಯಂತ ಆಕ್ಟಿವ್ ಆಗಿ ಕೆಲಸ ಮಾಡುವ ದಿನ
ಸಮೀಕ್ಷೆಯು, ಶೇಕಡಾ 28ರಷ್ಟು ಉದ್ಯೋಗಿಗಳಿಗೆ ಸೋಮವಾರವು ಅತ್ಯಂತ ಉತ್ಪಾದಕ ದಿನವಾಗಿದೆ ಎಂದು ಬಹಿರಂಗಪಡಿಸಿತು. ಆದರೆ ಕೆಲಸಗಾರರು ಮಧ್ಯಾಹ್ನದ ಸಮಯದಲ್ಲಿ ಕಡಿಮೆ ವರ್ಕ್‌ ಪ್ರಾಡಕ್ಟಿವಿಟಿಯನ್ನು ಹೊಂದಿದ್ದಾರೆ. ವಿಶೇಷವಾಗಿ ಶುಕ್ರವಾರದಂದು ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. 

ಇದಲ್ಲದೆ, ಪ್ರಯೋಜನಗಳಿದ್ದರೂ ಸಹ, ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದು ಇನ್ನೂ ಪ್ರಗತಿಯಲ್ಲಿದೆ. ಮೇ ತಿಂಗಳಿನಿಂದ ಮಾಡಿದ ಹೋಮ್ ರಿಸರ್ಚ್ ಸಮೀಕ್ಷೆಯ ಪ್ರಕಾರ ಸುಮಾರು 60 ಪ್ರತಿಶತದಷ್ಟು ಪೂರ್ಣ ಸಮಯದ ಕೆಲಸಗಾರರು ತಮ್ಮ ಎಲ್ಲಾ ಕೆಲಸಗಳನ್ನು ಸೈಟ್‌ನಲ್ಲಿಯೇ ಮಾಡಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. 

Latest Videos
Follow Us:
Download App:
  • android
  • ios