ಮೈಸೂರು (ಜು. 17) ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ, ಪರೀಕ್ಷೆಗಳಿಗೆ ಹೋಗುವ ಯುವತಿಯರ ಸುರಕ್ಷಿತ ವಾಸ್ತವ್ಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಟ್ರಾನ್ಸಿಟ್ ಹಾಸ್ಟೆಲ್ ಪ್ರಾರಂಭಿಸಲಾಗಿದೆ.

ವಾಸ್ತವ್ಯದ ಸಂದರ್ಭದಲ್ಲಿ ಮೂರು ದಿನಗಳವರೆಗೆ ಉಚಿತ ಉಟೋಪಚಾರ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.  ಮಹಿಳೆಯರು ಈ ಕೆಳಕಂಡ ಟ್ರಾನ್ಸಿಟ್ ಹಾಸ್ಟೆಲ್ ಗಳಲ್ಲಿ ಸೌಲಭ್ಯ ಪಡೆಯಬಹುದಾಗಿದೆ. 

ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ: https://kannada.asianetnews.com/jobs

 • ಬೆಂಗಳೂರಿನ ನಂದಿದುರ್ಗ ರಸ್ತೆಯ ಜಯಮಹಲ್ ಬಡಾವಣೆಯಲ್ಲಿರುವ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‍ಫೇರ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 080-23330846, 22925898
 • ಶಂಕರಪುರದ ರಂಗರಾವ್ ರಸ್ತೆಯಲ್ಲಿರುವ ಶ್ರೀಶಾರದ ಕುಠೀರ ಮಹಿಳಾ ವಸತಿ ನಿಲಯ. ದೂರವಾಣಿ ಸಂಖ್ಯೆ 080-26674697 
 • ಮಿಷನ್ ರಸ್ತೆ, ಸಿಎಸ್‍ಐ ಕಾಂಪೌಂಡ್ ಹತ್ತಿರ ಇರುವ ಯಂಗ್ ವುಮೆನ್ಸ್ ಕ್ರಿಸ್ಟಿಯನ್ ಅಸೋಸಿಯೇಷನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ -080-22238574, 
 • ಸಂಪಂಗಿ ರಾಮನಗರದಲ್ಲಿರುವ ಯುನಿವರ್ಸಿಟಿ ವುಮೆನ್ಸ್ ಅಸೋಸಿಯೇಷನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 080-22223314, 26631838, 9845023783
 • ಕುಮಾರಸ್ವಾಮಿ ಬಡವಾಣೆಯಲ್ಲಿರುವ ಶಾವಿಗಿ ಮಲ್ಲೇಶ್ವರಬೆಟ್ಟದ ಮಹಾತ್ಮ ಗಾಂಧಿ ವಿದ್ಯಾಪೀಠ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 080-26662226
 • ಜಯನಗರದಲ್ಲಿರುವ ಜಯನಗರ ಸ್ತ್ರೀ ಸಮಾಜ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 080-26674697 
 • ಜಯನಗರದ ಕಾರ್ಪೋರೇಷನ್ ಬಡವಾಣೆಯಲ್ಲಿರುವ ಆಲ್ ಇಂಡಿಯಾ ವುಮೆನ್ಸ್ ಕಾನ್ಫರೆನ್ಸ್ ವರ್ಕಿಂಗ್ ವುಮೆನ್ಸ್ ಅಸೋಸಿಯೇಷನ್. ದೂರವಾಣಿ ಸಂಖ್ಯೆ 080-26349676 
 • ಕೆಂಗೇರಿ ಬಳಿ ಬಸವಾಶ್ರಮದಲ್ಲಿರುವ ಬಸವ ಸಮಿತಿ ಬಸವ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 080-22723355
 • ಕನಕಪುರ ಮುಖ್ಯ ರಸ್ತೆಯ ಖಾದರ್ ನಗರ, ಜರಗನಹಳ್ಳಿ ಬಳಿ ಇರುವ ವಿಶಾಲ್ ವಿದ್ಯಾ ಸಂಸ್ಥೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 9341289653
 • ಪೀಣ್ಯಾದ ಕೆಐಡಿಬಿ ಕಾಲೋನಿ ಕರ್ನಾಟಕ ಗ್ರಾಮೀಣ ಮತ್ತು ಕರಕುಶಲ ಅಭಿವೃದ್ಧಿ ಸಂಸ್ಥೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ 080-23160531, 23160535, 
 • ಕೋರಮಂಗಲದಲ್ಲಿರುವ ಯಂಗ್ ವುಮೆನ್ಸ್ ಕ್ರಿಸ್ಟಿಯನ್ ಅಸೋಸಿಯೇಷನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್. ದೂರವಾಣಿ ಸಂಖ್ಯೆ -080-25634813
 • ಜ್ಞಾನಭಾರತಿ ಕ್ಯಾಂಪಸ್‍ನಲ್ಲಿರುವ ರೀಜಿನಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್.  ದೂರವಾಣಿ ಸಂಖ್ಯೆ -080-23213243, 23218452 

ಸದರಿ ಸೌಲಭ್ಯವನ್ನು ಜಿಲ್ಲೆಯ ಮಹಿಳೆಯರು ಸದುಪಯೋಗಪಡಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.