ಫೇಸ್‌ಬುಕ್, ಅಮೆಜಾನ್ ಬಳಿಕ ಒರಾಕಲ್‌ಗೂ ತಟ್ಟಿದ ಉದ್ಯೋಗ ಕಡಿತ, 3,000 ನೌಕರರಿಗೆ ಕೊಕ್!
ಜಾಗತಿಕ ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ಟೆಕ್ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇಷ್ಟು ದಿನ ಉದ್ಯೋಗ ಕಡಿತದಿಂದ ದೂರವಿದ್ದ ಒರಾಕಲ್ ಕೂಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ 3,000 ಉದ್ಯೋಗಳಿಗೆ ಕೊಕ್ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ನವದೆಹಲಿ(ಮೇ.19): ಜಾಗತಿಕ ಆರ್ಥಿಕ ಹಿಂಜರಿತ, ಆದಾಯ ಕೊರತೆ, ನಿರ್ವಹಣ ಸೇರಿದಂತೆ ಹಲವು ಕಾರಣಗಳಿಂದ ಟೆಕ್ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಅಸ್ತ್ರ ಜಾರಿ ಮಾಡುತ್ತಿದೆ. ಈಗಾಗಲೇ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಫೇಸ್‌ಬುಕ್, ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಇದೀಗ ಒರಾಕಲ್ ಸರದಿ. ಮೂಲಗಳ ಪ್ರಕಾರ ಒರಾಕಲ್‌ನಲ್ಲಿ 3,000 ಉದ್ಯೋಗ ಕಡಿತಕ್ಕೆ ಕಂಪನಿ ಎಲ್ಲಾ ಸಿದ್ಧತೆ ಮಾಡಿದೆ. ಈಗಾಗಲೇ ಒರಾಕಲ್ ಕಂಪನಿಯಲ್ಲಿ ವೇತನ ಹೆಚ್ಚಳ, ಬಡ್ತಿ ಸೇರಿದಂತೆ ಹಲವು ಸೌಲಭ್ಯಕ್ಕೆ ಕೊಕ್ ನೀಡಲಾಗಿದೆ.
ಈ ವರ್ಷ ಒರಾಕಲ್ ಕಂಪನಿಯ ಉದ್ಯೋಗಳಿಗೆ ವೇತನ ಹೆಚ್ಚಳ, ಬಡ್ತಿ ಸೇರಿದಂತೆ ಹೆಚ್ಚಿನ ಸೌಲಭ್ಯಗಳಿಲ್ಲ ಎಂದು ಕಂಪನಿ ಹೇಳಿದೆ. ಆದರೆ ಉದ್ಯೋಗ ಕಡಿತ ಕುರಿತು ಯಾವುದೇ ಮಾಹಿತಿಯನ್ನು ಕಂಪನಿ ಬಿಚ್ಚಿಟ್ಟಿಲ್ಲ. ಆದರೆ ಕಂಪನಿಯ ಹಿರಿಯ ಉದ್ಯೋಗಿಗಳು ಉದ್ಯೋಗ ಕಡಿತ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.
ಕೆಲಸ ಕಳೆದುಕೊಂಡು ಕಣ್ಣೀರಾಕಿದ ಬೆಂಗಳೂರಿನ ಅಮೆಜಾನ್ ಉದ್ಯೋಗಿ
ಕಂಪನಿ ಈಗಾಗಲೇ ನಿರ್ವಹಣೆ ವೆಚ್ಚ ಕಡಿಮೆ ಮಾಡಲು ಹಲವು ತಂತ್ರ ಪ್ರಯೋಗಿಸಿದೆ. ಇದರಲ್ಲಿ ಉದ್ಯೋಗ ಕಡಿತವೂ ಸೇರಿದೆ ಅನ್ನೋದು ಕಂಪನಿಯ ಹಿರಿಯ ಉದ್ಯೋಗಳ ಮಾತು. ಈಗಾಗಲೆ ಒರಾಕಲ್‌ನ ಮಾರ್ಕೆಟಿಂಗ್ ಸೇರಿದಂತೆ ಕೆಲ ವಿಭಾಗದಲ್ಲಿ ಉದ್ಯೋಗ ಕಡಿತ ಆರಂಭಗೊಂಡಿದೆ. ಆದರೆ ಒರಾಕಲ್ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ.
ಇತ್ತೀಚೆಗೆ ವೋಡಾಫೋನ್ 11,00 ಹಾಗೂ ಅಮೆಜಾನ್ 500 ಸಿಬ್ಬಂದಿಯನ್ನು ವಜಾ ಮಾಡಿದೆ. ಬಹುರಾಷ್ಟ್ರೀಯ ಕಂಪನಿಗಳಾದ ವೊಡಾಪೋನ್ ಮತ್ತು ಅಮೆಜಾನ್ ಕಂಪನಿಗಳು ಮತ್ತೊಂದು ಸುತ್ತಿನಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಕಡಿತದ ಘೋಷಣೆ ಮಾಡಿತ್ತು. ವೊಡಾಫೋನ್‌ನ ನೂತನ ಸಿಇಒ ಆಗಿ ನೇಮಕಗೊಂಡಿರುವ ಮಾರ್ಘೆರಿಟಾ ಡೆಲ್ಲಾ, ‘ನಮ್ಮ ಸಾಧನೆ ಅಷ್ಟೊಂದು ಉತ್ತಮವಾಗೇನೂ ಇಲ್ಲ, ಸತತವಾಗಿ ಉತ್ತಮ ಫಲಿತಾಂಶ ನೀಡಲು ನಾವು ಬದಲಾಗಲೇ ಬೇಕಿದೆ. ಕಂಪನಿಯನ್ನು ಇನ್ನಷ್ಟುಸರಳಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಮುಂದಿನ 3 ವರ್ಷಗಳ ಅವಧಿಯಲ್ಲಿ ಒಟ್ಟಾರೆ 11000 ಸಿಬ್ಬಂದಿಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಹಾಲಿ ಕಂಪನಿಯಲ್ಲಿ 1.04 ಲಕ್ಷ ಸಿಬ್ಬಂದಿಗಳಿದ್ದು ಈ ಪೈಕಿ ಶೇ.10ರಷ್ಟುಸಿಬ್ಬಂದಿ ತೆಗೆಯಲು ನಿರ್ಧರಿಸಲಾಗಿದೆ.
ಹೊಸಬರಿಗೆ ಶೇ.50 ರಷ್ಟು ವೇತನ ಕಡಿತ, ಕಾರಣ ಬಿಚ್ಚಿಟ್ಟ ವಿಪ್ರೋ ಸಿಎಫ್ಒ!
ಈ ನಡುವೆ ಅಮೆಜಾನ್ ಕಂಪನಿ ಭಾರತದಲ್ಲಿ 500 ಜನರನ್ನು ಹುದ್ದೆಯಿಂದ ತೆಗೆದು ಹಾಕಿರುವುದಾಗಿ ಪ್ರಕಟಿಸಿದೆ. ಕಳೆದ ಮಾಚ್‌ರ್‍ನಲ್ಲಿ ಕಂಪನಿ 9000 ಜನರನ್ನು ವಿಶ್ವದಾದ್ಯಂತ ಕೈಬಿಡುವುದಾಗಿ ಪ್ರಕಟಿಸಿತ್ತು. ಅದರ ಭಾಗವಾಗಿ ಇದೀಗ 500 ಜನರನ್ನು ಕೈಬಿಡಲಾಗಿದೆ.
ನ್‌ಲೈನ್‌ನಲ್ಲಿ ಉದ್ಯೋಗ ಶೋಧದ ಪ್ರಮುಖ ವೇದಿಕೆ ಆಗಿರುವ ಲಿಂಕ್‌್ಡ ಇನ್, ತನ್ನ ಕಂಪನಿಯಿಂದ ಒಟ್ಟು 716 ಉದ್ಯೋಗಿಗಳನ್ನು ವಜಾ ಮಾಡಿದೆ. ಇದೇ ವೇಳೆ, ಚೀನಾದಲ್ಲಿನ ಉದ್ಯೋಗ ಹುಡುಕುವ ಆ್ಯಪ್ ಅನ್ನು ಸಹ ಸ್ಥಗಿತಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಲಿಂಕ್‌್ಡ ಇನ್, ವಿಶ್ವಾದ್ಯಂತ ಗ್ರಾಹಕರು ಬೇರೆಡೆ ಆಕರ್ಷಿತರಾಗಿರುವ ಕಾರಣ ಆದಾಯವು ಕಡಿಮೆಯಾಗಿದೆ. ಹೀಗಾಗಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ. ಮೇ 15ರ ಬಳಿಕ ಆಡಳಿತದಲ್ಲಿ ಹೊಸದಾಗಿ 250 ಜನರ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.