ಬೆಂಗಳೂರು (ಅ.22):  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ತಾಂತ್ರಿಕ ಸಹಾಯಕ, ಭದ್ರತಾ ರಕ್ಷಕ, ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿ ಸಂಬಂಧ ಆರಂಭಿಸಿದ್ದ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. 

ಕೊರೋನಾ ಹಿನ್ನೆಲೆಯಲ್ಲಿ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೂ ಈ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. 

ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ, ಜೊತೆಗೆ 35 ರಜೆ: ಹೀಗೆ ಅಪ್ಲೈ ಮಾಡಿ! .

ಮತ್ತೆ ನೇಮಕಾತಿ ಪ್ರಕ್ರಿಯೆ ಪಾರಂಭಿಸುವಾಗ ನಿಗಮದ ಜಾಲತಾಣ www.ksrtcjobs.karnataka.govt.in ದಲ್ಲಿ ಮಾಹಿತಿ ಪ್ರಕಟಿಸಲಾಗುವುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಹಲವು ರೀತಿಯ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದು ಉದ್ಯೋಗ ನೇಮಕಾತಿಗಳು ನಿಂತು ಹೋಗಿವೆ.