Asianet Suvarna News Asianet Suvarna News

ಐಸಿಎಸ್‌ಐ, ಎಸ್‌ಎಸ್‌ಸಿ ಪರೀಕ್ಷೆ ದಿನವೇ ಕೆಪಿಎಸ್ಸಿ ಪರೀಕ್ಷೆ

ಕೆಎಎಸ್‌ ಮುಖ್ಯ ಪರೀಕ್ಷೆಗಳನ್ನು ನಿಗದಿಪಡಿಸಿದ್ದ ಕರ್ನಾಟಕ ಲೋಕಸೆವಾ ಆಯೋಗ (ಕೆಪಿಎಎಸ್‌ಸಿ) ಇದೀಗ ಮತ್ತೊಂದು ಎಡವಟ್ಟು ಮಾಡಿದೆ.  ಏನದು

KPSC Exam ISSC ICSI Exam Conducted on Same date snr
Author
Bengaluru, First Published Nov 21, 2020, 7:36 AM IST

 ಬೆಂಗಳೂರು (ನ.21):  ಐಎಎಸ್‌ ಮುಖ್ಯ ಪರೀಕ್ಷೆಗೂ ಒಂದು ವಾರ ಮುನ್ನ ಕೆಎಎಸ್‌ ಮುಖ್ಯ ಪರೀಕ್ಷೆಗಳನ್ನು ನಿಗದಿಪಡಿಸಿದ್ದ ಕರ್ನಾಟಕ ಲೋಕಸೆವಾ ಆಯೋಗ (ಕೆಪಿಎಎಸ್‌ಸಿ) ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ಕೇಂದ್ರದ ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್‌ಐ) ಮತ್ತು ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ)ಗೆ ನಡೆಯುವ ಪರೀಕ್ಷೆ ದಿನಗಳಂದೇ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಗಳ ಮುಖ್ಯಪರೀಕ್ಷೆ ನಿಗದಿ ಪಡಿಸಿದೆ.

ನೇಮಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವಿಫಲ: KPSC ಮುಚ್ಚುವುದೇ ಲೇಸು, ಹೈಕೋರ್ಟ್‌ ..

ಕೆಪಿಎಸ್‌ಸಿಯ ಈ ಕ್ರಮದಿಂದ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಬಯಸುವ ರಾಜ್ಯದ ಅಭ್ಯರ್ಥಿಗಳಿಗೆ ತೊಂದರೆಯಾದಂತಾಗಿದ್ದು, ಪರೀಕ್ಷೆಗಳನ್ನು ಮುಂದೂಡುವಂತೆ ಹಲವು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಐಸಿಎಸ್‌ಐ ಡಿ.21ರಿಂದ 30ರವರೆಗೆ ಕಂಪನಿ ಸೆಕ್ರೆಟರಿ ಹುದ್ದೆಗಳಿಗೆ, ಎಸ್‌ಎಸ್‌ಸಿ ’ಸಿ’ ಮತ್ತು ‘ಡಿ’ ದರ್ಜೆಯ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಡಿ.24ರಿಂದ 30ರವರೆಗೆ ಮುಖ್ಯ ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಿವೆ. ಈ ಪರೀಕ್ಷೆಗಳು ನಡೆಯುವ ದಿನಗಳಂದೇ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ 54 ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಡಿ.21ರಿಂದ 24ರವರೆಗೆ ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ದಿನಾಂಕ ನಿಗದಿ ಪಡಿಸಿದೆ.

ಕೆಪಿಎಸ್‌ಸಿಯ ಈ ಕ್ರಮದಿಂದ ಐಸಿಎಸ್‌ಐ ಮತ್ತು ಎಸ್‌ಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ಹಲವು ಅಭ್ಯರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ವೆಬ್‌ಸೈಟ್‌ನಲ್ಲಿ ಆದೇಶ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹೊರಡಿಸಿರುವ ಅಧಿಸೂಚನೆಗಳು ಮತ್ತು ನೇಮಕಾತಿ ಪ್ರಕ್ರಿಯೆ ಕುರಿತ ಸ್ಥಿತಿಗತಿಯ ವಿವರವನ್ನು ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪತ್ರಾಂಕಿತ ಹುದ್ದೆಗಳಿಂದ ಹಿಡಿದು ದ್ವಿತೀಯ ದರ್ಜೆ, ಪ್ರಥಮ ದರ್ಜೆ, ಸಹಾಯಕರ ನೇಮಕ ಸೇರಿ 28 ಬಗೆಯ ಅಧಿಸೂಚನೆಗಳು, ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳು. ಫಲಿತಾಂಶ ಪ್ರಕಟಿಸಿರುವ ಕುರಿತು ಎಲ್ಲ ಪ್ರಕ್ರಿಯೆಗಳನ್ನು ವಿವರವಾಗಿ ಪ್ರಕಟಿಸಿದ್ದು. ಎಲ್ಲ ನೇಮಕಾತಿ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸುತ್ತಿರುವುದಾಗಿ ಕೆಪಿಎಸ್‌ಸಿ ತಿಳಿಸಿದೆ.

Follow Us:
Download App:
  • android
  • ios