Asianet Suvarna News Asianet Suvarna News

ಕಮತಗಿ ಕಾಂಚಿವರಂ ರೇಷ್ಮೆ ಸೀರೆಗಳಿಗೆ ಫಿದಾ ಆದ ವಿದೇಶಿಯರು!

  • ಕಮತಗಿ ಕಾಂಚಿವರಂ ರೇಷ್ಮೆ ಸೀರೆಗಳಿಗೆ ಫಿಧಾ ಆದ ವಿದೇಶಿಯರು
  • ಬಾಗಲಕೋಟೆಯಿಂದ ವಿದೇಶಗಳಿಗೆ ರಪ್ತಾಗುತ್ತಿರೋ ಸೀರೆಗಳು 
  • ನೇಕಾರರ ಬಾಳಿಗೆ ವರದಾನ
  • ಬಾಗಲಕೋಟೆ ಜಿಲ್ಲೆಯ ಕಮತಗಿ ತಮಿಳುನಾಡಿನ ಕಾಂಚಿವರಂ ಸೀರೆ
  • ಅಮೇರಿಕಾ, ಇಂಗ್ಲೆಂಡ್​, ಪ್ರಾನ್ಸ್, ಮಲೇಶಿಯಾ ಸೇರಿದಂತೆ ವಿವಿಧ ದೇಶಗಳಿಂದ ಬಂದವರಿಂದ ಶ್ಲಾಘನೆ & ಖರೀದಿ.
Kamatagi Kanchivaram silk sarees are buying  foreigners bagalkot
Author
Bangalore, First Published Aug 25, 2022, 1:25 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಆ.25) : ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನೇಕಾರಿಕೆ ಅಂದ್ರೆ ಸಾಕು ಯುವಕರು ದೂರ ಸರಿದು ಬೇರೆ ಬೇರೆ ಉದ್ಯೋಗ ಮಾಡೋ ಪರಿಸ್ಥಿತಿ ಇದೆ, ಆದ್ರೆ ಇಲ್ಲೊಂದು ಸಹಕಾರಿ ಸಂಘ(Co-operative Society) ವಿನೂತನ ಪ್ರಯತ್ನ ಮಾಡಿ ತಮಿಳುನಾಡಿ(Tamilunadu)ನ ಕಾಂಚಿವರಂ(Kanchivaram)ನಲ್ಲಿ ತಯಾರಾಗೋ ಸೀರೆಗಳನ್ನೇ ನಮ್ಮಲ್ಲಿಯೇ ಉತ್ಪಾದಿಸಿ ಅತ್ತ ನೇಕಾರರಿಗೂ ಒಳ್ಳೆಯ ಕೂಲಿ ನೀಡಿ, ಮತ್ತೊಂದೆಡೆ ಗ್ರಾಹಕರಿಗೂ ಕಡಿಮೆ ದರದಲ್ಲಿ ಕಾಂಚಿವರಂ ಸೀರೆ ಸಿಗುವಂತೆ ಮಾಡ್ತಿದೆ, ಸಾಲದ್ದಕ್ಕೆ ಈ ಸೀರೆಗಳಿಗೆ ವಿದೇಶಿಗರೂ ಸಹ ಫುಲ್ ಫಿದಾ ಆಗಿದ್ದಾರೆ. ಅದೆಲ್ಲಿ? ಹೇಗೆ? ಅಂತೀರಾ. ಹಾಗಾದರೆ ಈ ಕುರಿತು ವರದಿ ಓದಿ.

Ankita Lokhande Saree: ಫ್ಲೋರಲ್ ಸಿಲ್ಕ್ ಸೀರೆ ಬೆಲೆಗೆ ಲೇಟೆಸ್ಟ್ ಐಫೋನ್ ಕೊಳ್ಬೋದು

 ಒಂದೆಡೆ ಸೀರೆಗಳನ್ನ ನೇಯುವ ನೇಕಾರರು, ಮತ್ತೊಂದೆಡೆ ವಿವಿಧ ಬಗೆಯ ಕಲರ್ ಕಲರ್​ ಕಾಂಚಿವರಂ ಸೀರೆಗಳು, ಇವುಗಳ ಮಧ್ಯೆ ದೇಶದಲ್ಲಷ್ಟೇ ಅಲ್ಲದೆ ವಿದೇಶಗರನ್ನೂ ಸಹ ಮನಸೂರೆಗೊಳ್ಳುತ್ತಿರೋ ಕಾಂಚಿವರಂ ವಿಶೇಷ ಸೀರೆಗಳು. ಅಂದಹಾಗೆ ಇಂತಹವೊಂದು ಅಪರೂಪದ ಸೀರೆಗಳು ಉತ್ಪಾದನೆಯಾಗುತ್ತಿರೋದು ದೂರದ ತಮಿಳುನಾಡಿನಲ್ಲೋ, ಆಂಧ್ರಪ್ರದೇಶ(Andrapradesh)ದಲ್ಲೋ ಅಲ್ಲ, ಬದಲಾಗಿ ನಮ್ಮ ಕನ್ನಡ ನಾಡಿನ ಉತ್ತರ ಕರ್ನಾಟಕ(North Karnataka)ದ ಬಾಗಲಕೋಟೆ(Bagalkot) ಜಿಲ್ಲೆಯ ಕಮತಗಿ(Kamatagi) ಪಟ್ಟಣದಲ್ಲಿ. 

ಹೌದು. ಪಟ್ಟಣದ ಚಾಮುಂಡೇಶ್ವರಿ ಕೈಮಗ್ಗ ನೇಕಾರರ ಸಹಕಾರಿ ಸಂಘ (Chamundeshwari Handloom Weavers Cooperative Society)ಕಳೆದ 10 ವರ್ಷದ ಹಿಂದೆ ಮೊದಲ ಬಾರಿಗೆ ತಮಿಳುನಾಡಿನ ಕಾಂಚಿವರಂ ಸೀರೆಗಳನ್ನೇ ತಮ್ಮೂರಿನಲ್ಲಿ ತಯಾರಿಸಲು ಮುಂದಾಯ್ತು. ಕಾಂಚಿವರಂಗೆ ತೆರಳಿ ತರಬೇತಿಯನ್ನ ಪಡೆದುಕೊಂಡು ಬಂದ ನೇಕಾರರು ಅಂದಿನಿಂದ ಸೀರೆಗಳನ್ನ ನೇಯಲು ಮುಂದಾಗಿದ್ದಾರೆ. ಮುಖ್ಯವಾಗಿ ತಮಿಳುನಾಡು ಮತ್ತು ಆಂದ್ರಪ್ರದೇಶಗಳಲ್ಲಿ ತಯಾರಾಗುತ್ತಿದ್ದ ಕಾಂಚಿವರಂ ರೇಷ್ಮೆ ಸೀರೆಗಳನ್ನ ಇಲ್ಲಿನ ಜನತೆಗೆ ಕಡಿಮೆ ದರದಲ್ಲಿ ನೀಡುವುದು ಒಂದು ಭಾಗವಾದರೆ ಮತ್ತೊಂದೆಡೆ ನೇಕಾರರಿಗೆ ಒಳ್ಳೆಯ ಕೂಲಿ ನೀಡಿ ಅವರನ್ನ ಆರ್ಥಿಕವಾಗಿ ಸಬಲರನ್ನಾಗಿಸುವುದು ಇವರ ಮೂಲ ಉದ್ದೇಶವಾಗಿತ್ತು. 

ಕನ್ನಡನಾಡಿನ ಕಾಂಚಿವರಂ ಸೀರೆಗಳಿಗೆ ಫುಲ್​ ಫಿದಾ ಆದ ಅಮೇರಿಕಾ(America), ಇಂಗ್ಲೆಂಡ್(Engaland), ಪ್ರಾನ್ಸ್(France) ಸೇರಿದಂತೆ ವಿವಿಧ ದೇಶಗಳ ​ಫಾರೆನರ್ಸ್​
ಇನ್ನು ನಮ್ಮ ಕನ್ನಡ ನಾಡಿನಲ್ಲಿ ನಿರ್ಮಾಣವಾಗುವ ಕಾಂಚಿವರಂ ಸೀರೆಗಳಿಗೆ ರಾಜ್ಯವಲ್ಲದ, ದೇಶವಲ್ಲದೆ ವಿದೇಶಗಳಲ್ಲೂ ಇನ್ನಿಲ್ಲದ ಬೇಡಿಕೆ. ಸಧ್ಯ ಕಮತಗಿ ಪಟ್ಟಣದ ಚಾಮುಂಡೇಶ್ವರಿ ಕೈಮಗ್ಗ ನೇಕಾರರ ಸಹಕಾರಿ ಸಂಘದಲ್ಲಿ ಇಂದು ಒಟ್ಟು 11 ಮಗ್ಗಗಳಲ್ಲಿ ಕಾಂಚಿವರಂ ರೇಷ್ಮೇ ಸೀರೆಗಳು ತಯಾರಾಗುತ್ತಿದ್ದು, ಇವುಗಳಿಗೆ ನಮ್ಮ ಜನರಲ್ಲದೆ ವಿದೇಶಿಗರು ಸಹ ಫುಲ್ ಫಿಧಾ ಆಗಿದ್ದಾರೆ. ಯಾಕಂದ್ರೆ ಬಾಗಲಕೋಟೆ ಜಿಲ್ಲೆಯು ಐಹೊಳೆ, ಬಾದಾಮಿ, ಪಟ್ಟದಕಲ್​ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿದ್ದು, ಅವುಗಳ ವೀಕ್ಷಣೆಗೆಂದು ಬರುವ  ಅಮೇರಿಕಾ, ಇಂಗ್ಲೆಂಡ್​, ಪ್ರಾನ್ಸ್​, ಮಲೇಶಿಯಾ ಸೇರಿದಂತೆ ಬೇರೆ ಬೇರೆ ದೇಶಗಳ ಪ್ರವಾಸಿಗರು ಕಮತಗಿ ಪಟ್ಟಣಕ್ಕೆ ಬಂದು ಇಲ್ಲಿನ ಕಾಂಚಿವರಂ ರೇಷ್ಮೇ ಸೀರೆಗಳನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಸೀರೆಗಳನ್ನೂ ಸಹ ಖರೀದಿಸಿ ಹೋಗುತ್ತಿದ್ದಾರೆ ಇದರಿಂದ ಉತ್ತಮ ಬೇಡಿಕೆ ಕಂಡು ಬರುತ್ತಿದೆ ಅಂತಾರೆ ಕಮತಗಿಯ ಚಾಮುಂಡೇಶ್ವರಿ ನೇಕಾರ ಸಹಕಾರಿ ಸಂಘದ ಕಾರ್ಯದರ್ಶಿ ಪಾಂಡು ಹೋಟಿ.

ವಿದೇಶಗಳಿಗೆ ರಫ್ತು ಮಾಡಲು ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ:

 ಹೌದು, ಕಮತಗಿಯಲ್ಲಿ ತಯಾರಾಗುತ್ತಿರೋ ಸೀರೆಗಳು ಕೇವಲ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಅಷ್ಟೇ ಅಲ್ಲದೆ ವಿದೇಶಗಳಿಗೂ ಸಹ ರಫ್ತಾಗುತ್ತಿವೆ. ಇನ್ನು ವಿದೇಶಕ್ಕೆ ರಪ್ತು ಮಾಡಲು ಹೆಚ್ಚು ಖರ್ಚು ಆಗುತ್ತೇ ಅನ್ನೋ ಕಾರಣಕ್ಕೆ ಚಾಮುಂಡೇಶ್ವರಿ ಕೈಮಗ್ಗ ಸಹಕಾರಿ ಸಂಘವು ಕೇಂದ್ರ ಸರ್ಕಾರದ ಜೊತೆ ಒಡಂಬಡಿಕೆಯನ್ನೂ ಸಹ ಮಾಡಿಕೊಂಡಿದೆ. ಒಂದೊಮ್ಮೆ ಸ್ವತಃ ರಫ್ತು ಮಾಡಲು ಮುಂದಾದಲ್ಲಿ ಹೆಚ್ಚುವರಿ ಹಣ ವ್ಯಯ ಮಾಡಬೇಕಿತ್ತು, ಈ ಕಾರಣದಿಂದ ಸ್ಮೃತಿ ಇರಾನಿ(Smriti Irani)  ಕೇಂದ್ರ ಜವಳಿ ಸಚಿವೆಯಾಗಿದ್ದಾಗ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದವನ್ನೂ ಸಹ ಅವರ ಸಮ್ಮುಖದಲ್ಲಿ ಮಾಡಿಕೊಳ್ಳಲಾಗಿದೆ. ಇದರಿಂದ ಅಮೇರಿಕಾ, ಇಂಗ್ಲೆಂಡ್​, ಪ್ರಾನ್ಸ್​, ಮಲೇಶಿಯಾ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಬೇಕೆಂದರೂ ಸಮಸ್ಯೆಯಾಗೋದಿಲ್ಲ ಅಂತಾರೆ ಚಾಮುಂಡೇಶ್ವರಿ ಕೈಮಗ್ಗ ನೇಕಾರ ಸಹಕಾರ ಸಂಘದ ಪದಾಧಿಕಾರಿಗಳು.

ನೇಕಾರರಿಗೆ ಬೇರೆ ರಾಜ್ಯಗಳಲ್ಲೂ ತರಬೇತಿ, ಕಾಂಚಿವರಂ ಸೀರೆಗಳ ಮೇಲೆ ಪಿಎಚ್​ಡಿ ವಿದ್ಯಾರ್ಥಿಗಳ ಅಧ್ಯಯನ:

 ಈ ಮಧ್ಯೆ ಚಾಮುಂಡೇಶ್ವರಿ ಕೈಮಗ್ಗ ನೇಕಾರರ ಸಹಕಾರಿ ಸಂಘದಲ್ಲಿ ನೇಕಾರಿಕೆಯಲ್ಲಿ ತೊಡಗಿರುವ ನೇಕಾರರನ್ನೂ ಸಹ ದೇಶದ ವಿವಿಧ ರಾಜ್ಯಗಳಿಗೆ ಕರೆದೊಯ್ದದ್ದೂ ಅಲ್ಲದೆ ಕೆಲವೊಮ್ಮೆ ವಿಮಾನಯಾನದ ಮೂಲಕ ನೇಕಾರರನ್ನ ಕರೆದೊಯ್ದು ಅವರಿಗೆ ವಿಶೇಷ ನೇಕಾರಿಕೆ ತರಬೇತಿಯನ್ನೂ ಸಹ ನೀಡಲಾಗಿದೆ. ಇನ್ನು ಕಮತಗಿಯಲ್ಲಿ ತಯಾರಾಗೋ ಸೀರೆಗಳಿಗೆ ಸುತ್ತಮುತ್ತಲಿನ ಜಿಲ್ಲೆಗಳಲ್ಲದೆ ರಾಜ್ಯ ಹೊರರಾಜ್ಯಗಳಲ್ಲೂ  ಉತ್ತಮ ಬೇಡಿಕೆ ಕಂಡು ಬರುತ್ತಿದ್ದು, ಇದೇ ವಿಷಯದಲ್ಲಿ ದೂರದ ಬೆಂಗಳೂರು, ತುಮಕೂರು, ಮೈಸೂರಿನ ವಿದ್ಯಾರ್ಥಿಗಳು ಪಿಎಚ್​ಡಿ ಅಧ್ಯಯನಕ್ಕೂ ಸಹ ಬಂದಿದ್ದು ವಿಶೇಷವಾಗಿದೆ.

ನೇಕಾರರ ಬಾಳಿಗೆ ವರದಾನವಾದ ಕಾಂಚಿವರಂ ರೇಷ್ಮೇ ಸೀರೆಗಳ ನೇಕಾರಿಕೆ:
ಇನ್ನು ಈ ಮಧ್ಯೆ  ರಾಜ್ಯದಲ್ಲಿರೋ ನೇಕಾರರ ಪರಿಸ್ಥಿತಿ ಅಷ್ಟೊಂದು ಸುಧಾರಿಸಿಲ್ಲ, ಕಚ್ಚಾಮಾಲು ದಿನೇ ದಿನೇ ಹೆಚ್ಚುತ್ತಿರೋದು ಒಂದು ಭಾಗವಾದರೆ, ಬೇರೆ ಬೇರೆ ಮಾದರಿ ಸೀರೆಗಳನ್ನ ನೇಯಲು ನೇಕಾರರು ತಮ್ಮ ಮನೆಮಂದಿಯೆಲ್ಲಾ ಸೇರಿ ದುಡಿದರೂ ಸಹ ಸಮರ್ಪಕ ಕೂಲಿ ಸಿಗುತ್ತಿರಲಿಲ್ಲ, ಇದರಿಂದ ನೇಕಾರಿಕೆ ಕುಟುಂಬಗಳು ಜೀವನ ನಡೆಸೋದೆ ದುಸ್ತರವಾಗಿತ್ತು. ಆದ್ರೆ ಇಂದು ಕಾಂಚಿವರಂ ಸೀರೆಯನ್ನ ಒಬ್ಬನೇ ನೇಕಾರ ನೇಯುವುದರಿಂದ ಆತನೊಬ್ಬನ ದುಡಿಮೆಗೆ ತಿಂಗಳಿಗೆ 12 ರಿಂದ 15 ಸಾವಿರ ಕೂಲಿ ಬೀಳುತ್ತೇ, ಇದ್ರಿಂದ ಇಡೀ ಕುಟುಂಬಸ್ಥರು ಸೇರಿ ದುಡಿದಾಗಲೂ ಸಿಗದೇ ಇದ್ದ ಕೂಲಿ ಸಿಕ್ಕು ಕಾಂಚಿವರಂ ಸೀರೆಯನ್ನು ನೇಯುವ ನೇಕಾರರ ಕುಟುಂಬಗಳು ಸಹ ಆರ್ಥಿಕವಾಗಿ ಸಬಲೀಕರಗೊಳ್ಳಲು ಕಾರಣವಾಗಿದೆ ಅಂತಾರೆ ನೇಕಾರ ಶಂಕರ್​.

ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ ಮೈಸೂರು ಸಿಲ್ಕ್ ಸೀರೆ
                  
ಒಟ್ಟಿನಲ್ಲಿ ಸಮರ್ಪಕ ಕೂಲಿ ಇಲ್ಲದೆ ನಲುಗಿ ಹೋಗಿದ್ದ ನೇಕಾರರ ಕುಟುಂಬಗಳಿಗೆ ಇದೀಗ ತರಬೇತಿ ನೀಡಿ ಕಾಂಚಿವರಂ ರೇಷ್ಮೆ ಸೀರೆಗಳನ್ನ ನೇಯಲು ನೀಡಿ ಉತ್ತಮ ಕೂಲಿ ನೀಡುತ್ತಿರೋದು ಒಂದೆಡೆ ನೇಕಾರರ ಬದುಕಿಗೆ ಆಧಾರವಾಗಿದ್ದರೆ ಮತ್ತೊಂದೆಡೆ ದೇಶ ವಿದೇಶದಲ್ಲೂ ಸಹ ಕಮತಗಿ ಪಟ್ಟಣದ ಕಾಂಚಿವರಂ ರೇಷ್ಮೆ ಸೀರೆಗಳು ರಫ್ತಾಗಿ ಜನಮನ್ನಣೆ ಗಳಿಸುತ್ತಿರೋದು ಹೆಮ್ಮೆಯ ಸಂಗತಿಯೇ ಸರಿ.

Follow Us:
Download App:
  • android
  • ios