ಶಿವಮೊಗ್ಗ [ಫೆ.07]: ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಫೆ. 7 ರಿಂದ 11ರವರೆಗೆ ನಗರದ ಹಳೇ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ. 

 ಜಿಲ್ಲಾಧಿಕಾರಿ ಶಿವಕುಮಾರ್ ಪ್ರದರ್ಶನ ಹಾಗೂ ಮಾರಾಟವನ್ನು ಉದ್ಘಾಟಿಸುವರು. ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದೆ. ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 

 ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆ ಜತೆ ಕೆಎಸ್‌ಐಸಿ ಈಗ ನಾಜೂಕು ವಿನ್ಯಾಸದ ಸಂಗ್ರಹಿತ ಸೀರೆ ಹಾಗೂ ಜಾರ್ಜೆಟ್ ಹಾಗೂ ಸಾದಾ ಮುದ್ರಿತ ಸೀರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಶಿವಮೊಗ್ಗದಲ್ಲಿ ಚೆಲ್ಲಿದ ರಕ್ತ.. ಹಂದಿ ಅಣ್ಣಿ ಸಹೋದರ ಗಿರೀಶ್ ಕೊಚ್ಚಿಹಾಕಿದ್ರು!...

 ಶೇ.25ರಷ್ಟು ರಿಯಾಯಿತಿ ದರದಲ್ಲಿ ಸೀರೆಗಳು ಪ್ರದರ್ಶನದಲ್ಲಿ ಲಭ್ಯವಾಗಲಿವೆ ಎಂದು ಸಂಸ್ಥೆ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.