Earn money : ಸರ್ಕಾರ ಹಾಗೂ ಎಲ್ ಐಸಿ ಸೇರಿ ಮಹಿಳೆಯರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿ ಮಾಡಲು ಮಹತ್ವದ ಯೋಜನೆ ಜಾರಿಗೆ ತಂದಿದೆ. ಇದ್ರಲ್ಲಿ ಮಹಿಳೆ ತರಬೇತಿ ಜೊತೆ ಹಣ ಸಂಪಾದನೆ ಮಾಡ್ಬಹುದು. ಬಿಮಾ ಸಖಿ ಯೋಜನೆ ಸಂಪೂರ್ಣ ವಿವರ ಇಲ್ಲಿದೆ
ಮನೆಯಲ್ಲೇ ಕುಳಿತು ಹಣ (money) ಸಂಪಾದನೆ ಮಾಡ್ಬೇಕು ಅಂದ್ಕೊಂಡಿರುವ ಮಹಿಳೆಯರಿಗೆ ಬಿಮಾ ಸಖಿ ಯೋಜನೆ 2025 ಉತ್ತಮ ಆಯ್ಕೆ. ಗ್ರಾಮೀಣ ಹಾಗೂ ರೆ ನಗರ ಪ್ರದೇಶದ ಮಹಿಳೆಯರಿಗಾಗಿ ಈ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಲ್ಲಿ ನೀವು ಹೇಗೆ ಹಣ ಸಂಪಾದನೆ ಮಾಡ್ಬಹುದು, ಮಹಿಳೆಯರ ಕೆಲ್ಸ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಮಾ ಸಖಿ (Bima Sakhi) ಯೋಜನೆ 2025 : ಈ ಯೋಜನೆ ಅಡಿ ಮಹಿಳೆಯರು ಎಲ್ಐಸಿ ಏಜೆಂಟ್ ಆಗುವ ಮೂಲಕ ಸ್ಟೈಫಂಡ್ ಪಡೀಬಹುದು. ಅಲ್ದೆ 2 ಲಕ್ಷಕ್ಕಿಂತ ಹೆಚ್ಚು ಹಣ ಗಳಿಸುವ ಅವಕಾಶ ಇಲ್ಲಿದೆ. ಬಿಮಾ ಸಖಿ ಯೋಜನೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ಜಂಟಿಯಾಗಿ ಶುರು ಮಾಡಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನುಈ ಯೋಜನೆ ಹೊಂದಿದೆ. ಈ ಯೋಜನೆಯಡಿಯಲ್ಲಿ, ಮಹಿಳೆಯರಿಗೆ ಎಲ್ಐಸಿ ಏಜೆಂಟ್ ಗಳಾಗುವ ತರಬೇತಿ ನೀಡಲಾಗುತ್ತೆ. ಹಳ್ಳಿ ಅಥವಾ ನಗರ ಪ್ರದೇಶದಲ್ಲಿ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸ್ಬಹುದು.
ಯೋಜನೆಯ ಮುಖ್ಯ ಉದ್ದೇಶ :
• ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು
• ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ಜಾಗೃತಿ ಹೆಚ್ಚಳ
• 2025 ರ ವೇಳೆಗೆ 1 ಲಕ್ಷಕ್ಕೂ ಹೆಚ್ಚು ವಿಮಾ ಸಖಿಗಳಿಗೆ ತರಬೇತಿ
• ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಗುರುತು
ತರಬೇತಿ ಸಮಯದಲ್ಲಿ ಮಹಿಳೆಯರಿಗೆ ಸಿಗಲಿದೆ ವಿದ್ಯಾರ್ಥಿವೇತನ : ಮಹಿಳೆಯರಿಗೆ ತರಬೇತಿ ಸಮಯದಲ್ಲಿ ಪ್ರತಿ ತಿಂಗಳು ₹ 5000 ರಿಂದ ₹ 7000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಆರಂಭದಿಂದಲೇ ಗಳಿಕೆ : ತರಬೇತಿ ಪಡೆಯುವಾಗ್ಲೇ ಮಹಿಳೆಯರು ವಿಮಾ ಪಾಲಿಸಿಯನ್ನು ಮಾರಾಟ ಮಾಡಬಹುದು. ವಿಮಾ ಪಾಲಿಸಿ ಮಾರಾಟ ಮಾಡ್ತಿದ್ದಂತೆ ಕಮಿಷನ್ ಸಿಗಲಿದೆ. ತರಬೇತಿ ಮುಗಿದ ನಂತ್ರ, ಮಹಿಳೆಯರಿಗೆ ವಿಮಾ ಸಖಿ ಪ್ರಮಾಣಪತ್ರ ಮತ್ತು ಎಲ್ ಐಸಿ (LIC) ಏಜೆಂಟ್ ಕೋಡ್ ನೀಡಲಾಗುವುದು. ಇದು ಅವರಿಗೆ ಅಧಿಕೃತ ಏಜೆಂಟ್ಗಳಾಗಿ ಕೆಲಸ ಮಾಡಲು ಅವಕಾಶ ನೀಡುತ್ತದೆ.
2.16 ಲಕ್ಷ ಗಳಿಸೋದು ಹೇಗೆ? : ಮಹಿಳೆ ಮೂರು ವರ್ಷಗಳ ಕಾಲ ಈ ಯೋಜನೆಯಡಿ ಸಕ್ರಿಯವಾಗಿ ಕೆಲಸ ಮಾಡಬೇಕು. ಹಾಗಾದಲ್ಲಿ ಅವರಿಗೆ ₹ 2.16 ಲಕ್ಷದವರೆಗೆ ಹಣ ಗಳಿಸುವ ಅವಕಾಶ ಸಿಗುತ್ತದೆ.
ಭವಿಷ್ಯದಲ್ಲಿ ಬಡ್ತಿಗೆ ಅವಕಾಶ : ವಿಮಾ ಸಖಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಭವಿಷ್ಯದಲ್ಲಿ ಅವರಿಗೆ ಅಭಿವೃದ್ಧಿ ಅಧಿಕಾರಿಯಂತಹ ಉನ್ನತ ಜವಾಬ್ದಾರಿ ಸಿಗಲಿದೆ.
ಯಾರು ಅರ್ಜಿ ಸಲ್ಲಿಸಬಹುದು? : 18 ರಿಂದ 70 ವರ್ಷ ನಡುವಿನ ಯಾವುದೇ ಮಹಿಳೆ ಅರ್ಜಿ ಸಲ್ಲಿಸಬಹುದು. ಕನಿಷ್ಠ ಅರ್ಹತೆ 10 ನೇ ತರಗತಿ ಪಾಸ್ ಆಗಿರಬೇಕು. ಎಲ್ ಐಸಿ ಉದ್ಯೋಗಿಗಳು, ಏಜೆಂಟ್ಗಳು ಅಥವಾ ಅವರ ಆಪ್ತರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ? : ಆಸಕ್ತಿಯುಳ್ಳ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಐಸಿಯ ಅಧಿಕೃತ ವೆಬ್ಸೈಟ್ https://licindia.in ಗೆ ಮೊದಲು ಭೇಟಿ ನೀಡಿ. ಅಗತ್ಯ ದಾಖಲೆಗಳನ್ನು ನೀವು ಅಲ್ಲಿ ಅಪ್ಲೋಡ್ ಮಾಡಬೇಕು. 10 ನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್ / ವಿಳಾಸ ಪುರಾವೆ, ಬ್ಯಾಂಕ್ ಖಾತೆ ವಿವರಗಳು, ಪಾಸ್ಪೋರ್ಟ್ ಗಾತ್ರದ ಫೋಟೋ ಇದ್ರಲ್ಲಿ ಸೇರಿದೆ. ನೀವು ಹತ್ತಿರದ ಎಲ್ ಐಸಿ ಶಾಖೆ ಅಥವಾ ಸಿಎಸ್ ಸಿ ಕೇಂದ್ರ ಅಥವಾ ಪಂಚಾಯತ್ ಕಚೇರಿಗೆ ಭೇಟಿ ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ನಂತ್ರ, ಎಸ್ ಎಂಸ್ ಅಥವಾ ಇಮೇಲ್ ಮೂಲಕ ನಿಮ್ಮ ಆಯ್ಕೆಯನ್ನು ದೃಢಪಡಿಸಲಾಗುತ್ತದೆ. ನಂತ್ರ ತರಬೇತಿ ಕೇಂದ್ರಕ್ಕೆ ಕರೆಯಲಾಗುವುದು.
