Asianet Suvarna News Asianet Suvarna News

ಪಿಡಬ್ಲ್ಯುಡಿ ಎಂಜಿನಿಯರ್‌ ಹುದ್ದೆ ಸಂದರ್ಶನಕ್ಕೆ 40-20 ನಿಯಮ

  • ಪಿಡಬ್ಲ್ಯುಡಿ ಎಂಜಿನಿಯರ್‌ ಹುದ್ದೆ ಸಂದರ್ಶನಕ್ಕೆ 40-20 ನಿಯಮ
  • ಗರಿಷ್ಠ- ಕನಿಷ್ಠ ಅಂಕ ಪದ್ಧತಿಗೆ ರಾಜ್ಯ ಸರ್ಕಾರ ಸೂಚನೆ
40 20 rule for PWD Engineer post interview bengaluru rav
Author
First Published Nov 7, 2022, 10:01 AM IST

ಕನ್ನಡಪ್ರಭ ವರದಿ ಪರಿಣಾಮ

ಬೆಂಗಳೂರು (ನ.7) : ಲೋಕೋಪಯೋಗಿ ಇಲಾಖೆಯ 660 ಸಹಾಯಕ ಎಂಜಿನಿಯರ್‌ ಹುದ್ದೆಗಳ ಸಂದರ್ಶನದಲ್ಲಿ ಗರಿಷ್ಠ 40-ಕನಿಷ್ಠ 20 ಅಂಕ ಪದ್ಧತಿ ಅಳವಡಿಸಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಅಂಕ ನೀಡಿದ್ದರೆ ಸೂಕ್ತ ಕಾರಣವನ್ನು ದಾಖಲಿಸಲು ರಾಜ್ಯ ಸರ್ಕಾರ ತಿಳಿಸಿದೆ.

ಈ ಕುರಿತು ನ.5ರಂದು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಹುದ್ದೆಗಳಿಗೆ ನ.7 ರಿಂದ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳಿಗೆ ಹೆಚ್ಚು, ಕೆಲವರಿಗೆ ಕಡಿಮೆ ಅಂಕ ನೀಡಿ ಕೋಟ್ಯಂತರ ಭ್ರಷ್ಟಾಚಾರ ನಡೆಸುವ ಸಾಧ್ಯತೆಗಳಿವೆ. ಹುದ್ದೆ ನಿರೀಕ್ಷೆಯಲ್ಲಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮೋಸವಾಗುತ್ತದೆ. ಹೀಗಾಗಿ, ಗರಿಷ್ಠ ಮತ್ತು ಕನಿಷ್ಠ ಅಂಕ ನಿಗದಿಪಡಿಸಬೇಕು ಎಂಬ ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳ ಸಂಘದ ಒತ್ತಾಯವನ್ನು ಉಲ್ಲೇಖಿಸಲಾಗಿತ್ತು. ಸದ್ಯ ನಿಯಮವನ್ನು ಅಳವಡಿಸಿಕೊಳ್ಳಲು ಸರ್ಕಾರ ಸೂಚಿಸಿದೆ.

ಜತೆಗೆ ನಾಲ್ಕು ಜನರನ್ನು ಒಳಗೊಂಡ ಸಂದರ್ಶನ ಮಂಡಳಿಯು ಅಭ್ಯರ್ಥಿಗಳ ಸಂದರ್ಶನ ನಡೆಸಬೇಕು. ನಾಲ್ಕು ಜನರ ಪೈಕಿ ಇಬ್ಬರು ಮಾತ್ರ ಆಯ್ಕೆ ಪ್ರಾಧಿಕಾರದ ಸದಸ್ಯರು, ಉಳಿದ ಇಬ್ಬರು ನಿವೃತ್ತ ಎ ದರ್ಜೆ ಅಧಿಕಾರಿಗಳು, ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳು, ವಿಷಯ ತಜ್ಞ ನಿವೃತ್ತ ಪ್ರಾಧ್ಯಾಪಕರು ಇರಬೇಕು. ನಾಲ್ಕು ಜನ ಪ್ರತ್ಯೇಕವಾಗಿ ನೀಡಿದ ಅಂಕಗಳ ಸರಾಸರಿಯನ್ನು ಅಭ್ಯರ್ಥಿಗೆ ನೀಡಬೇಕು ಎಂದು ಆದೇಶದ ಪತ್ರದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸೂಚಿಸಿದ್ದಾರೆ.

Krishi Mela Bengaluru: ಕೃಷಿ ಮೇಳಕ್ಕೆ 17.35 ಲಕ್ಷ ಜನ ಭೇಟಿ ದಾಖಲೆ

Follow Us:
Download App:
  • android
  • ios