ಭಾರತೀಯ ಟೆಕ್ಕಿಗಳ ವೀಸಾ ನಿಯಮಗಳನ್ನು ಅಮೆರಿಕ ಕಠಿಣಗೊಳಿಸಿದ ಬೆನ್ನಲ್ಲೇ, ಪ್ರಸ್ತುತ ವರ್ಷದಲ್ಲಿ 2 ಲಕ್ಷ ಭಾರತೀಯ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಜಪಾನ್‌ ವಿದೇಶಾಂಗ ವಾಣಿಜ್ಯ ಸಂಸ್ಥೆ(ಜೆಟ್ರೋ)ಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಮಾಯಿದಾ ತಿಳಿಸಿದ್ದಾರೆ. ಈ ಮೂಲಕ ಐಟಿ ಕ್ಷೇತ್ರ ಎದುರಿಸುತ್ತಿರುವ ಮಾನವ ಕೊರತೆಯನ್ನು ನಿವಾರಿಸುವುದಾಗಿ ಅವರು ತಿಳಿಸಿದ್ದಾರೆ.

ನವದೆಹಲಿ: ಭಾರತೀಯ ಟೆಕ್ಕಿಗಳ ವೀಸಾ ನಿಯಮಗಳನ್ನು ಅಮೆರಿಕ ಕಠಿಣಗೊಳಿಸಿದ ಬೆನ್ನಲ್ಲೇ, ಪ್ರಸ್ತುತ ವರ್ಷದಲ್ಲಿ 2 ಲಕ್ಷ ಭಾರತೀಯ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಜಪಾನ್‌ ವಿದೇಶಾಂಗ ವಾಣಿಜ್ಯ ಸಂಸ್ಥೆ(ಜೆಟ್ರೋ)ಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಮಾಯಿದಾ ತಿಳಿಸಿದ್ದಾರೆ. ಈ ಮೂಲಕ ಐಟಿ ಕ್ಷೇತ್ರ ಎದುರಿಸುತ್ತಿರುವ ಮಾನವ ಕೊರತೆಯನ್ನು ನಿವಾರಿಸುವುದಾಗಿ ಅವರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ಛೇಂಬರ್‌ ಆಫ್‌ ಇಂಡಸ್ಟ್ರಿ ಮತ್ತು ಜೆಟ್ರೋ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಾದ್ಯಂತ ಅತ್ಯಂತ ಮುಂದುವರಿಯುತ್ತಿರುವ ತಂತ್ರಜ್ಞಾನ ಅಭಿವೃದ್ಧಿಯಿಂದ ಜಪಾನ್‌ ಹಿಂದುಳಿದಿದೆ. ಇದನ್ನು ತಪ್ಪಿಸಲು 2 ಲಕ್ಷಕ್ಕಿಂತ ಹೆಚ್ಚು ಇಂಜಿನಿಯರ್‌ಗಳ ನೇಮಕಾತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಪಾನ್‌ನಲ್ಲಿ ನೆಲೆಸಲು ಭಾರತೀಯರಿಗೆ ಅಗತ್ಯವಿರುವ ಗ್ರೀನ್‌ ಕಾರ್ಡ್‌ ಸೇರಿದಂತೆ ಇತರ ಅನುಕೂಲಗಳನ್ನು ಮಾಡಿಕೊಡುವುದಾಗಿ ಭರವಸೆ ಇತ್ತಿದ್ದಾರೆ.

ಪ್ರಸ್ತುತ ಜಪಾನ್‌ನಲ್ಲಿ 9,20,000 ಐಟಿ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, 2030ರ ವೇಳೆಗೆ ಇನ್ನೂ 8 ಲಕ್ಷ ಟೆಕ್ಕಿಗಳ ಅವಶ್ಯಕತೆ ಎದುರಾಗಬಹುದು ಎನ್ನಲಾಗಿದೆ. ಆದರೆ, ಇದೀಗ ತ್ವರಿತಗತಿಯಲ್ಲಿ ಬದಲಾವಣೆಯಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಇನ್ನೂ 2 ಲಕ್ಷಕ್ಕಿಂತ ಹೆಚ್ಚು ಇಂಜಿನಿಯರ್‌ ಅವಶ್ಯಕವಿದ್ದು, 2 ಲಕ್ಷ ಭಾರತೀಯ ಟೆಕ್ಕಿಗಳನ್ನು ಜಪಾನ್‌ ಕಂಪನಿಗಳಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಿಗೆಕಿ ಅವರು ಹೇಳಿದ್ದಾರೆ.