Asianet Suvarna News Asianet Suvarna News

ಶಾರ್ಜಾದಲ್ಲಿಂದು ಮಹಿಳಾ ಟಿ20 ಚಾಲೆಂಜ್ ಫೈನಲ್

ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ಟ್ರಯಲ್ ಬ್ಲೇಜರ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Womens T20 Challenge supernovas takes on trail blazers in Sharjah Final Match preview kvn
Author
Sharjah - United Arab Emirates, First Published Nov 9, 2020, 9:12 AM IST

ಶಾರ್ಜಾ(ನ.09): ಐಪಿಎಲ್‌ 13ನೇ ಆವೃತ್ತಿಯ ಫೈನಲ್‌ಗೂ ಮುನ್ನ ಮಹಿಳಾ ಟಿ20 ಚಾಲೆಂಜರ್‌ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಸೋಮವಾರ ಇಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸೂಪರ್‌ನೋವಾಸ್‌ ಹಾಗೂ ಟ್ರೈಯಲ್‌ಬ್ಲೇಜ​ರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಶನಿವಾರ ನಡೆದ ರೌಂಡ್‌-ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ಟ್ರೈಯಲ್‌ಬ್ಲೇಜ​ರ್ಸ್ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ ತಂಡ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೀಲಂಕಾದ ಹಿರಿಯ ಆಟಗಾರ್ತಿ ಚಾಮರಿ ಅಟಾಪಟ್ಟು, ಹರ್ಮನ್‌ಪ್ರೀತ್‌, ಜೆಮಿಮಾ ರೋಡ್ರಿಗಸ್‌ರಂತಹ ಸ್ಫೋಟಕ ಆಟಗಾರ್ತಿಯರ ಬಲ ತಂಡಕ್ಕಿದೆ. 

IPL 2020: ಹೈದರಾಬಾದ್ ಮಣಿಸಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡ ಡೆಲ್ಲಿ!

ಮತ್ತೊಂದೆಡೆ ಟ್ರೈಯಲ್‌ಬ್ಲೇಜ​ರ್ಸ್ ತನ್ನ ನಾಯಕಿ ಸ್ಮೃತಿ, ವಿಂಡೀಸ್‌ ಆಲ್ರೌಂಡರ್‌ ದಯೇಂದ್ರ ಡಾಟಿನ್‌, ದೀಪ್ತಿ ಶರ್ಮಾ ಹಾಗೂ ಹರ್ಲೀನ್‌ ಡಿಯೋಲ್‌ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಟ್ರೈಯಲ್‌ಬ್ಲೇಜ​ರ್ಸ್‌ಗೆ ವಿಶ್ವ ನಂ.1 ಟಿ20 ಬೌಲರ್‌ ಸೋಫಿ ಎಕ್ಲೆಸ್ಟೋನ್‌, ರಾಜೇಶ್ವರಿ ಗಾಯಕ್ವಾಡ್‌ ಬಲವಿದ್ದರೆ, ಸೂಪರ್‌ನೋವಾಸ್‌ ತಂಡದಲ್ಲಿ ಭಾರತದ ತಾರಾ ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌ ಹಾಗೂ ಯುವ ಸ್ಪಿನ್ನರ್‌ ರಾಧಾ ಯಾದವ್‌ ಇದ್ದಾರೆ. ಸಮಬಲರ ನಡುವಿನ ಹೋರಾಟ ಭಾರೀ ಕುತೂಹಲ ಮೂಡಿಸಿದೆ.

ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
 

Follow Us:
Download App:
  • android
  • ios