ಕೋವಿಡ್-19 ಹೀರೋ ಹೆಸರಿನ ಜರ್ಸಿಯಲ್ಲಿ ವಿರಾಟ್-ಎಬಿ ಕಣಕ್ಕೆ!
ಪ್ರತಿ ಆವೃತ್ತಿ IPL ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಲವು ಸಾಮಾಜಿಕ ಕಾರ್ಯ, ಅಭಿಯಾನಗಳನ್ನು ಮಾಡಿದೆ. ಪ್ರತಿ ವರ್ಷ ಗೋ ಗ್ರೀನ್ ಅಭಿಯಾನ RCB ತಂಡದ ಜನಪ್ರಿಯ ಅಭಿಯಾನವಾಗಿದೆ. ಈ ಬಾರಿ ಮತ್ತೊಂದು ವಿಶೇಷತೆ ಇದೆ. ಈ ಆವೃತ್ತಿಯಲ್ಲಿ ಕೋವಿಡ್ 19 ಹೀರೋಗಳಿಗೆ ಗೌರವ ಸಲ್ಲಿಸಲು ಆರ್‌ಸಿಬಿ ವಿಶೇಷ ಪ್ರಯತ್ನ ಮಾಡಿದೆ.
ದುಬೈ(ಸೆ.21); ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಟೂರ್ನಿಯುದ್ದಕ್ಕೂ ಕೊರೋನಾ ವಾರಿಯರ್ಸ್, ಕೊರೋನಾ ಹೀರೋಗಳಿಗೆ ಗೌರವ ನೀಡಲಿದೆ. ಇದಕ್ಕಾಗಿ ವಿಶೇಷ ಜರ್ಸಿ ಮೂಲಕ ಆರ್‌ಸಿಬಿ ಆಟಗಾರರು ಕಣಕ್ಕಿಳಿಯಲಿದ್ದಾರೆ. ಸನ್ ರೈಸರ್ಸಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ತಮ್ಮ ಹೆಸರಿನ ಜರ್ಸಿ ಬದಲು ಕೊವಿಡ್ 19 ಹೀರೋಗಳ ಹೆಸರಿನ ಜರ್ಸಿ ತೊಟ್ಟಿದ್ದಾರೆ.
RCB ವಿರುದ್ದ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ
ಕೊರೋನಾ ವೈರಸ್ , ಲಾಕ್‌ಡೌನ್ ಸಮಯದಲ್ಲಿ ಹೀರೋಗಳಾಗಿ ಮಿಂಚಿದ ಹಲವು ವಾರಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೌರವ ಸೂಚಿಸುತ್ತಿದೆ. ಎಬಿ ಡಿವಿಲಿಯರ್ಸ್ ಪಾರಿತೋಶ್ ಪಂತ್ ಅನ್ನೋ ಕೋವಿಡ್ 19 ಹೀರೋ ಹೆಸರಿನ ಜರ್ಸಿ ತೊಟ್ಟಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸಿಮ್ರನ್‌ಜೀತ್ ಹೆಸರಿನ ಜರ್ಸಿ ತೊಟ್ಟು ಗೌರವ ಸೂಚಿಸಿದ್ದಾರೆ.
ಎಬಿ ಡಿವಿಲಿಯರ್ಸ ಈ ಕುರಿತು ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ನೆರವಾದ ಪಾರಿತೋಶ್‌ಗೆ ಗೌರವ ಸೂಚಿಸಲು ಪಾರಿತೋಶ್ ಹೆಸರಿನ ಜರ್ಸಿ ತೊಡುವುದಾಗಿ ಎಬಿಡಿ ಹೇಳಿದ್ದಾರೆ. ಇಷ್ಟೇ ಅಲ್ಲ ಎಬಿ ಡಿವಿಲಿಯರ್ಸ್ ತಮ್ಮ ಟ್ವಿಟರ್ ಖಾತೆ ಹೆಸರನ್ನು ಬದಲಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೌರವ ಸೂಚನೆ ಕಾರ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫೀಲ್ಡಿಂಗ್ ಕೋಚ್ ಮೊಹಮ್ಮದ್ ಕೈಫ್ ಶ್ಲಾಘಿಸಿದ್ದಾರೆ.