ದುಬೈ(ಸೆ.21): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ. ಚೊಚ್ಚಲ ಐಪಿಎಲ್ ಕಪ್ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಗೆಲುವಿನೊಂದಿಗೆ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿದೆ

"

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಆಸೀಸ್ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಜೋಸ್ ಫಿಲಿಫ್ ಪಾದಾರ್ಪಣೆ ಮಾಡಿದ್ದಾರೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಫಿಲಿಪ್‌ ಕೊಹ್ಲಿ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಫಿಂಚ್ ಜತೆ ಪಡಿಕ್ಕಲ್ ಇನಿಂಗ್ಸ್ ಆರಂಭಿಸಲಿದ್ದು, ಬಳಿಕ ಕೊಹ್ಲಿ, ಎಬಿಡಿ, ಫಿಲಿಫ್ ಬ್ಯಾಟಿಂಗ್ ಇಳಿಯಲಿದ್ದಾರೆ. ಡೇಲ್ ಸ್ಟೇನ್ ಕೂಡಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರೆ ಮೊಯಿನ್ ಅಲಿ ಹಾಗೂ ಕ್ರಿಸ್ ಮೋರಿಸ್‌ಗೆ ವಿಶ್ರಾಂತಿ ನೀಡಿದ್ದು ಸಾಕಷ್ಟು ಅಚ್ಚರಿ ಮೂಡಿಸಿದೆ.

ಇನ್ನು ಹೈದರಾಬಾದ್ ತಂಡದಲ್ಲೂ ಮಿಚೆಲ್ ಮಾರ್ಷ್ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಡೇವಿಡ್ ವಾರ್ನರ್, ಜಾನಿ ಬೇರ್‌ಸ್ಟೋ ಹಾಗೂ ರಶೀದ್ ಖಾನ್‌ ಹೈದರಾಬಾದ್ ತಂಡದಲ್ಲಿರುವ ವಿದೇಶಿ ಆಟಗಾರರಾಗಿದ್ದಾರೆ.

ತಂಡಗಳು ಹೀಗಿವೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಸನ್‌ರೈಸರ್ಸ್ ಹೈದರಾಬಾದ್: