Asianet Suvarna News Asianet Suvarna News

ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ತಂಡಕ್ಕೆ ಸೋಲುಣಿಸಿದ ಚಹಾಲ್ ಟೀಂ!

ಐಪಿಎಲ್ ಟೂರ್ನಿಗಾಗಿ ಇದೀಗ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಕಠಿಣ ಅಭ್ಯಾಸ ನಡೆಸುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಯಜುವೇಂದ್ರ ಚಹಾಲ್ ಎಂಬ ಎರಡು ತಂಡಗಳಾಗಿ ಅಭ್ಯಾಸ ಮಾಡುತ್ತಿದೆ. ಈ ಅಭ್ಯಾಸ ಪಂದ್ಯದ ರಿಸಲ್ಟ್ ಇಲ್ಲಿದೆ.

Team Virat Kohli lost to Team Yuzvendra Chahal in Royal Challengers Bangalore practice match ckm
Author
Bengaluru, First Published Sep 17, 2020, 10:14 PM IST

ದುಬೈ(ಸೆ.17): ಐಪಿಎಲ್ 2020 ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಅಂತಿಮ ಕಸರತ್ತು ನಡೆಸುತ್ತಿದೆ. ವಿರಾಟ್ ಕೊಹ್ಲಿ ತಂಡ ಹಾಗೂ ಯಜುವೇಂದ್ರ ಚಹಾಲ್ ತಂಡಗಳ ನಡುವೆ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ವಿಶೇಷ ಅಂದರೆ ಕೊಹ್ಲಿ ತಂಡ, ಚಹಾಲ್ ತಂಡದ ಎದರು ಸೋಲು ಕಂಡಿದೆ.

ಕೊರೋನಾ ವಾರಿಯರ್ಸ್‌ಗೆ ಗೌರವ: MyCovidHeroes ಸಂದೇಶದ ಜರ್ಸಿ ತೊಡಲಿದೆ RCB! 

ಆರ್‌ಸಿಬಿ ತಂಡದೊಳಗೆ ನಡೆದ ಅಭ್ಯಾಸ ಪಂದ್ಯದಲ್ಲ ಕೊಹ್ಲಿ ಟೀಂ ಮುಗ್ಗರಿಸಿದೆ. ಕೊಹ್ಲಿ ತಂಡದಲ್ಲಿ ಪಾರ್ಥೀವ್ ಪಟೇಲ್, ಡೇಲ್ ಸ್ಟೇನ್ ಸೇರಿದಂತ ಸ್ಟಾರ್ ಕ್ರಿಕೆಟಿಗರೂ ಇದ್ದರೂ ತಂಡ ಮುಗ್ಗರಿಸಿದೆ. ಯಜುವೇಂದ್ರ ಚಹಾಲ್ ತಂಡದ ಪರ ಎಬಿ ಡಿವಿಲಿಯರ್ಸ್ ಸ್ಫೋಟಕ 43 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲವು ತಂದುಕೊಟ್ಟಿದ್ದಾರೆ.

ಎಬಿ ಡಿವಿಲಿಯರ್ಸ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಕೊಹ್ಲಿ ತಂಡಕ್ಕೆ ಬೌಲಿಂಗ್‌ನಲ್ಲಿ ಯುವ ಸ್ಪಿನ್ನರ್ ಶಹಭಾಝ್ ಅಹಮ್ಮದ್ ಶಾಕ್ ನೀಡಿದರು. 13 ರನ್ ನೀಡಿ 3 ವಿಕೆಟ್ ಕಬಳಿಸಿದರು.  ಕೊಹ್ಲಿ ತಂಡದಲ್ಲಿ ಪಾರ್ಥೀವ್ ಪಟೇಲ್ ಹಾಗೂ ಕೊಹ್ಲಿ ಆರಂಭಿಕರಾಗಿದ್ದರೆ, ಚಹಾಲ್ ತಂಡ ಪರ ಎಬಿ ಡಿವಿಲಿಯರ್ಸ್ ಹಾಗೂ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ದೇವದತ್ ಪಡಿಕ್ಕಲ್ ಈ ಬಾರಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡವು ಸಾಧ್ಯತೆ ಹೆಚ್ಚಿದೆ. ಇಷ್ಟೇ ಅಲ್ಲ ಆರಂಭಿಕರಾಗಿ ಕಣಕ್ಕಿಳಿಸುವ ಕುರಿತು ಟೀಂ ಮ್ಯಾನೇಜ್ಮೆಂಟ್ ಚಿಂತಿಸುತ್ತಿದೆ.
 

 

Follow Us:
Download App:
  • android
  • ios