RCB ತಂಡದಿಂದ ಹೊರಬಂದ ಬೆನ್ನಲ್ಲೇ ಟ್ರೋಫಿ ಗೆದ್ದ 3 ಕ್ರಿಕೆಟರ್ಸ್!
IPL ಟೂರ್ನಿಯ 12 ಆವೃತ್ತಿಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ 12 ಬಾರಿಯೂ ಪ್ರಶಸ್ತಿ ಗೆಲುವಿನ ಸಿಹಿ ಕಂಡಿಲ್ಲ. ಆದರೆ RCB ತಂಡ ಹರಾಜಿನಲ್ಲಿ ಕೈಬಿಟ್ಟ ಆಟಗಾರ ಮುಂದಿನ ಆವೃತ್ತಿಯಲ್ಲೇ ಇತರ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು(ಫೆ.28): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುತ್ತೆ ಅನ್ನೋ ವಿಶ್ವಾಸ ಅಭಿಮಾನಿಗಳದ್ದು. ಕಳೆದ 12 ಆವೃತ್ತಿಯಲ್ಲಿ ಟ್ರೋಫಿ ಇಲ್ಲದೆ RCB ಕೊರಗಿದೆ. ಆದರೆ RCB ತಂಡದಿಂದ ಹೊರಬಂದ ಬೆನ್ನಲ್ಲೇ ಬೇರೆ ತಂಡ ಸೇರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!
ಮೂವರು ಕ್ರಿಕೆಟಿಗರು RCB ತಂಡ ಕೈಬಿಟ್ಟ ಬೆನ್ನಲ್ಲೇ ಬೇರೆ ತಂಡ ಸೇರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
ಪಾರ್ಥೀವ್ ಪಟೇಲ್
RCB ತಂಡದಿಂದ ಹೊರಬಂದು ಟ್ರೋಫಿ ಗೆಲ್ಲಿಸಿಕೊಟ್ಟ ಆಟಾಗಾರರ ಪೈಕಿ ಪಾರ್ಥೀವ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ RCB ತಂಡದಲ್ಲಿರುವ ಪಾರ್ಥೀವ್ ಪಟೇಲ್ 2014ರಲ್ಲೂ RCB ತಂಡದ ಪರ ಆಡಿದ್ದರು.
ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!.
2015ರಲ್ಲಿ ಮುಂಬೈ ಇಂಡಿಯನ್ಸ್ ಸೇರಿಕೊಂಡ ಪಾರ್ಥೀವ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದರು. ಇಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ 2015ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು.
ಕ್ವಿಂಟನ್ ಡಿಕಾಕ್
2018ರ ಹರಾಜಿನಲ್ಲಿ RCB ತಂಡ ಸೌತ್ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಖರೀದಿಸಿತ್ತು. ಆದರೆ ಡಿಕಾಕ್ ಸಂಪೂರ್ಣ ಕಳಪೆಯಾದರು. ಹೀಗಾಗಿ 2019ರಲ್ಲಿ RCB ತಂಡ ಡಿಕಾಕ್ ಉಳಿಸಿಕೊಳ್ಳಲಿಲ್ಲ. ಇತ್ತ ಮುಂಬೈ ಇಂಡಿಯನ್ಸ್ ಡಿಕಾಕ್ ಖರೀದಿಸಿತು. ಅದ್ಭುತ ಪ್ರದರ್ಶನ ನೀಡಿದ ಡಿಕಾಕ್ ಮುಂಬೈ ಇಂಡಿಯ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಶೇನ್ ವ್ಯಾಟ್ಸನ್
2016ರಲ್ಲಿ RCB ತಂಡ ಸೇರಿಕೊಂಡ ಶೇನ್ ವ್ಯಾಟ್ಸನ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ RCB ಸೋಲು ಕಂಡಿತ್ತು. 2017ರಲ್ಲಿ ವ್ಯಾಟ್ಸನ್ ಸಂಪೂರ್ಣ ಕಳಪೆಯಾಗಿದ್ದರು. ಹೀಗಾಗಿ 2018ರಲ್ಲಿ RCB ತಂಡ ಕೈಬಿಟ್ಟಿತು. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವ್ಯಾಟ್ಸನ್ ಖರೀದಿಸಿತ್ತು.
2018ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವ್ಯಾಟ್ಸನ್ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.