ದುಬೈ(ಸೆ.30): ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಆಟಗಾರ ರಾಬಿನ್ ಉತ್ತಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುನಿಲ್ ನೈರೈನ್ ಕ್ಯಾಚ್ ಡ್ರಾಪ್ ಮಾಡಿದ ಬೆನ್ನಲ್ಲೇ ಉತ್ತಪ್ಪ ಮಾಡಿದ ತಪ್ಪು ಇದೀಗ ಮ್ಯಾಚ್ ರೆಫ್ರಿ ಕಣ್ಣು ಕೆಂಪಾಗಿಸಿದೆ. ಕ್ಯಾಚ್ ಕೈಚೆಲ್ಲಿದ ರಾಬಿನ್ ಉತ್ತಪ್ಪ ಬಾಲ್ ಹಿಡಿದು ಎಂಜಲು ಸವರಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದೆ.

ಸೋಲಿಲ್ಲದ ಸರದಾರ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕೆಕೆಆರ್‌ ಗೆದ್ದಿದ್ದು ಹೇಗೆ?

ಕೊರೋನಾ ವೈರಸ್ ಕಾರಣ ಐಸಿಸಿ ತಾತ್ಕಾಲಿಕವಾಗಿ ಬಾಲ್‌ಗೆ ಎಂಜಲು ಸವರುವುದು ಬ್ಯಾನ್ ಮಾಡಿದೆ. ಆದರೆ ಉತ್ತಪ್ಪ ಅರಿವಿಲ್ಲದಂತೆ ಎಂಜಲು ಸವರಿಸಿದ್ದಾರೆ. ಉತ್ತಪ್ಪ ಎಂಜಲು ಸವರುತ್ತಿರು ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂಜಲು ಸವರುವ ಮೂಲಕ ರಾಬಿನ್ ಉತ್ತಪ್ಪ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ.

 

ಬಾಲ್‌ಗೆ ಎಂಜಲು ಸವರಿದರೆ ಒಂದು ಇನ್ನಿಂಗ್ಸ್‌ನಲ್ಲಿ 2 ಬಾರಿ ತಂಡಕ್ಕೆ ಅಂಪೈರ್ ಎಚ್ಚರಿಕೆ ನೀಡಲಿದ್ದಾರೆ. 3ನೇ ಬಾರಿ ತಪ್ಪು ಮರುಕಳಿಸಿದರೆ ಎದುರಾಳಿಗೆ ಪೆನಾಲ್ಟಿಯಾಗಿ 5 ರನ್ ನೀಡಲಾಗುತ್ತದೆ. ಇಷ್ಟೇ ಅಲ್ಲ ಚೆಂಡನ್ನು ಶುಚಿಗೊಳಿಸದ ಬಳಿಕವೇ ಮತ್ತ ಆಟಕ್ಕೆ ಬಳಸಬೇಕು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಒಂದು ಬಾರಿ ಈ ರೀತಿ ಮಾಡಿದ್ದಾರೆ.