Asianet Suvarna News Asianet Suvarna News

ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡ್ತಾರಂತೆ ಧೋನಿ, ರೈನಾ?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಎಂ ಎಸ್ ಧೋನಿ, ಸುರೇಶ್ ರೈನಾ, ಯುವರಾಜ್ ಸಿಂಗ್ ಈ ಬಾರಿಯ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

MS Dhoni Suresh Raina Likely to play BBL after completion of IPL 2020 says report kvn
Author
New Delhi, First Published Oct 24, 2020, 2:48 PM IST

ನವದೆಹಲಿ(ಅ.24): 13ನೇ ಆವೃತ್ತಿ ಐಪಿಎಲ್‌ ಮುಕ್ತಾಯದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌. ಧೋನಿ, ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡಲಿದ್ದಾರೆ. 

ಬಿಗ್‌ಬ್ಯಾಶ್‌ ಲೀಗ್‌ ಫ್ರಾಂಚೈಸಿಗಳು ಭಾರತದ ತಾರಾ ಅನುಭವಿ ಆಟಗಾರರು ಹಾಗೂ ಇತರೆ ವಿದೇಶಿ ಆಟಗಾರರ ದೊಡ್ಡ ಪಟ್ಟಿಯೊಂದನ್ನು ಮಾಡಿಕೊಂಡಿದ್ದು, ಇದರಲ್ಲಿ ಧೋನಿ, ಸುರೇಶ್‌ ರೈನಾ ಹಾಗೂ ಯುವರಾಜ್‌ ಸಿಂಗ್‌ ಕೂಡ ಇದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಈಗಾಗಲೇ ಚೆನ್ನೈ ತಂಡ, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಐಪಿಎಲ್‌ ಮುಕ್ತಾಯದ ಬಳಿಕ ಧೋನಿ ಹಾಗೂ ರೈನಾ ಬಿಬಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಇಬ್ಬರೂ ಆಟಗಾರರು ಐಪಿಎಲ್‌ ಆರಂಭಕ್ಕೂ ಮುನ್ನ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. 

ಕನ್ನಡಿಗ ದೇವದತ್ ಪಡಿಕ್ಕಲ್‌ ಬ್ಯಾಟಿಂಗ್ ಶೈಲಿಯನ್ನು ಮ್ಯಾಥ್ಯೂ ಹೇಡನ್‌ಗೆ ಹೋಲಿಸಿದ ಕ್ರಿಸ್ ಮೋರಿಸ್..!

ಮುಂದಿನ ಆವೃತ್ತಿಯಿಂದ ಈ ಆಟಗಾರರು ಐಪಿಎಲ್‌ನಲ್ಲಿಯೂ ಆಡುವುದಿಲ್ಲ ಎನ್ನಲಾಗಿದೆ. ಯುವರಾಜ್‌ ಈ ಹಿಂದೆಯಷ್ಟೇ ವಿದೇಶಿ ಲೀಗ್‌ ಟೂರ್ನಿಯೊಂದರಲ್ಲಿ ಆಡಿದ್ದರು. ಈ ಆವೃತ್ತಿಯ ಬಿಗ್‌ಬ್ಯಾಶ್ ಲೀಗ್ ಟೂರ್ನಿಯು ಡಿಸೆಂಬರ್‌ನಿಂದ ಆರಂಭವಾಗಲಿದ್ದು, ಈ ಮೂವರು ಆಟಗಾರರು ಬಿಸಿಸಿಐನಿಂದ ನಿರಪೇಕ್ಷಣ ಪತ್ರ ಪಡೆದು ಟೂರ್ನಿಯಲ್ಲಿ ಪಾಲ್ಗೊಳ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
 

Follow Us:
Download App:
  • android
  • ios