Asianet Suvarna News Asianet Suvarna News

ಈ ಐಪಿ​ಎಲ್‌ನಲ್ಲಿ 600 ರನ್ ಬಾರಿಸಿ ದಾಖಲೆ ಬರೆದ ಕೆ ಎಲ್ ರಾಹುಲ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

KXIP Captain KL Rahul creates history becomes only 2nd Indian after Virat Kohli to score over 600 runs in 2 seasons kvn
Author
Abu Dhabi - United Arab Emirates, First Published Oct 31, 2020, 1:51 PM IST

ಅಬು​ಧಾ​ಬಿ(ಅ.31): ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡದ ನಾಯಕ, ಕನ್ನ​ಡಿಗ ಕೆ.ಎಲ್‌.ರಾ​ಹುಲ್‌ ಈ ಆವೃ​ತ್ತಿಯ ಐಪಿಎಲ್‌ನಲ್ಲಿ 600 ರನ್‌ ಪೂರೈ​ಸಿ​ದ್ದಾರೆ. ರಾಜ​ಸ್ಥಾನ ರಾಯಲ್ಸ್‌ ವಿರುದ್ಧ ಶುಕ್ರ​ವಾರ ಇಲ್ಲಿ ನಡೆದ ಪಂದ್ಯ​ದಲ್ಲಿ ಅವರು ಈ ಮೈಲಿ​ಗಲ್ಲು ತಲು​ಪಿ​ದರು. 

13 ಪಂದ್ಯ​ಗ​ಳಲ್ಲಿ ಪಂಜಾಬ್ ನಾಯಕ ಕೆ. ಎಲ್. ರಾಹುಲ್‌ 58.27ರ ಸರಾ​ಸ​ರಿ​ಯಲ್ಲಿ 641 ರನ್‌ ಗಳಿ​ಸಿ​ದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 5 ಅರ್ಧ​ಶ​ತಕಗಳು ಸೇರಿದ್ದು, ಅತಿ​ಹೆಚ್ಚು ರನ್‌ ಗಳಿ​ಸಿದ ಆಟ​ಗಾ​ರರ ಪಟ್ಟಿ​ಯಲ್ಲಿ ರಾಹುಲ್ ಅಗ್ರ​ಸ್ಥಾನ ಕಾಯ್ದುಕೊಂಡಿ​ದ್ದಾರೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 600 ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ರಾಹುಲ್ ಪಾತ್ರರಾಗಿದ್ದಾರೆ.

ರಾಜಸ್ಥಾನ್ ವಿರುದ್ಧ ಹೊಸ ದಾಖಲೆ ಬರೆದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್..!

2018ರ ಐಪಿಎಲ್‌ನಲ್ಲಿ 659 ರನ್‌ ದಾಖ​ಲಿ​ಸಿದ್ದ ರಾಹುಲ್‌, 2019ರ ಆವೃ​ತ್ತಿ​ಯಲ್ಲಿ 593 ರನ್‌ ಗಳಿ​ಸಿ​ದ್ದರು. ಐಪಿ​ಎಲ್‌ನಲ್ಲಿ 2 ಬಾರಿ 600ಕ್ಕೂ ಹೆಚ್ಚು ರನ್‌ ಗಳಿ​ಸಿದ 2ನೇ ಆಟ​ಗಾರ ರಾಹುಲ್‌. ಕೊಹ್ಲಿ ಈ ಮೊದಲು 2013 ಹಾಗೂ 2016ರಲ್ಲಿ 600+ ರನ್ ಬಾರಿಸಿದ ಸಾಧನೆ ಮಾಡಿ​ದ್ದರು. 2013ರಲ್ಲಿ ಆರ್‌ಸಿಬಿ ತಂಡದ ನಾಯಕನಾಗುತ್ತಿದ್ದಂತೆ ಕೊಹ್ಲಿ 634 ರನ್ ಬಾರಿಸಿದ್ದರು, ಇನ್ನು 2016ರಲ್ಲಿ ಕೊಹ್ಲಿ 4 ಶತಕ ಸಹಿತ 81.08ರ ಸರಾಸರಿಯಲ್ಲಿ 973 ರನ್ ಚಚ್ಚಿದ್ದರು.


 

Follow Us:
Download App:
  • android
  • ios