Asianet Suvarna News Asianet Suvarna News

ಕಿಂಗ್ಸ್‌, ಮುಂಬೈಗೆ ಪುಟಿ​ದೇ​ಳುವ ಗುರಿ!

ಕಿಂಗ್ಸ್‌, ಮುಂಬೈಗೆ ಪುಟಿ​ದೇ​ಳುವ ಗುರಿ| ಕಳೆದ ಪಂದ್ಯ​ದಲ್ಲಿ ಸೋಲುಂಡಿದ್ದ ಉಭಯ ತಂಡ​ಗ​ಳು

Kings XI Punjab vs Mumbai Indians Statistical Preview pod
Author
Bangalore, First Published Oct 1, 2020, 3:39 PM IST
  • Facebook
  • Twitter
  • Whatsapp

ಅಬು ಧಾಬಿ(ಅ.01): ವೀರೋ​ಚಿತ ಸೋಲಿನ ನಿರಾಸೆಯಿಂದ ಹೊರ​ಬ​ರಲು ಹಾಲಿ ಚಾಂಪಿ​ಯನ್ಸ್‌ ಮುಂಬೈ ಇಂಡಿ​ಯನ್ಸ್‌ ಹಾಗೂ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡ​ಗಳು ಕಾತ​ರಿ​ಸು​ತ್ತಿದ್ದು, ಗುರು​ವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಮುಖಾ​ಮುಖಿ​ಯಾ​ಗ​ಲಿವೆ.

ಕಳೆದ ಪಂದ್ಯ​ದಲ್ಲಿ ರಾಜ​ಸ್ಥಾನ ರಾಯಲ್ಸ್‌ನ ದಾಖಲೆಯ ರನ್‌ ಚೇಸ್‌ಗೆ ಕಿಂಗ್ಸ್‌ ಇಲೆ​ವೆನ್‌ ಬೆಚ್ಚಿ​ಬಿ​ದ್ದರೆ, ಆರ್‌ಸಿಬಿ ವಿರುದ್ಧ ಸೂಪರ್‌ ಓವರ್‌ನಲ್ಲಿ ಮುಂಬೈ ಪರಾ​ಭವಗೊಂಡಿತ್ತು. ಉಭಯ ತಂಡ​ಗಳು ಆಡಿ​ರುವ 3 ಪಂದ್ಯ​ಗ​ಳಲ್ಲಿ ತಲಾ 1ರಲ್ಲಿ ಗೆದ್ದು, 2ರಲ್ಲಿ ಸೋಲುಂಡಿವೆ. ಈ ಪಂದ್ಯ​ದಲ್ಲಿ ಜಯಿಸಿ ಅಂಕ​ಪ​ಟ್ಟಿ​ಯಲ್ಲಿ ಮೇಲೇ​ಳಲು ಎದುರು ನೋಡು​ತ್ತಿವೆ.

ಭಾರ​ತದ ಯುವ ಹಾಗೂ ಅನು​ಭವಿ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌.ರಾ​ಹುಲ್‌, ಮಯಾಂಕ್‌ ಅಗರ್‌ವಾಲ್‌, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಕರುಣ್‌ ನಾಯ​ರ್‌, ಸರ್ಫರಾಜ್‌ ಖಾನ್‌ ಈ ಪಂದ್ಯ​ದಲ್ಲಿ ಪೈಪೋಟಿ ನಡೆ​ಸ​ಲಿರು​ವುದು ವಿಶೇ​ಷ.

ಒಟ್ಟು ಮುಖಾ​ಮುಖಿ: 24

ಮುಂಬೈ: 13

ಪಂಜಾಬ್‌: 11

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಮುಂಬೈ: ರೋಹಿತ್‌ ಶರ್ಮಾ(ನಾ​ಯ​ಕ​), ಕ್ವಿಂಟನ್‌ ಡಿ ಕಾಕ್‌, ಸೂರ್ಯ​ಕು​ಮಾರ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಕೀರನ್‌ ಪೊಲ್ಲಾರ್ಡ್‌, ರಾಹುಲ್‌ ಚಹರ್‌, ಟ್ರೆಂಟ್‌ ಬೌಲ್ಟ್‌, ಜೇಮ್ಸ್‌ ಪ್ಯಾಟಿ​ನ್ಸನ್‌, ಜಸ್‌ಪ್ರೀತ್‌ ಬೂಮ್ರಾ.

ಪಂಬಾಬ್‌: ಕೆ.ಎಲ್‌.ರಾ​ಹುಲ್‌(ನಾ​ಯ​ಕ), ಮಯಾಂಕ್‌ ಅಗರ್‌ವಾಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ನಿಕೋ​ಲಸ್‌ ಪೂರನ್‌, ಕರುಣ್‌ ನಾಯರ್‌, ಜೇಮ್ಸ್‌ ನೀಶಮ್‌, ಸರ್ಫ​ರಾಜ್‌ ಖಾನ್‌, ಮೊಹ​ಮದ್‌ ಶಮಿ, ಶೆಲ್ಡನ್‌ ಕಾಟ್ರೆಲ್‌, ರವಿ ಬಿಷ್ಣೋಯಿ, ಎಂ.ಅ​ಶ್ವಿನ್‌.

ಪ್ರಾಬಲ್ಯ

ಭರ​ವಸೆ ಮೂಡಿ​ಸಿ​ರುವ ಇಶಾನ್‌

ಆಲ್ರೌಂಡರ್‌ ಪೊಲ್ಲಾರ್ಡ್‌ ಬಲ

ಉತ್ತಮ ಲಯ​ದಲ್ಲಿ ಸ್ಪಿನ್ನರ್‌ ಚಹರ್‌

ಲಯ​ದಲ್ಲಿ ರಾಹುಲ್‌, ಮಯಾಂಕ್‌

ಭರ​ವಸೆ ಹೆಚ್ಚಿ​ಸಿ​ರುವ ತೆವಾ​ಟಿ​ಯಾ

ತಂಡದ ಉತ್ತಮ ಕ್ಷೇತ್ರರಕ್ಷಣೆ

ದೌರ್ಬಲ್ಯ

ಸ್ಥಿರತೆ ಕಾಣದ ಅಗ್ರ ಕ್ರಮಾಂಕ

ಡೆತ್‌ ಓವ​ರಲ್ಲಿ ಬೂಮ್ರಾ ದುಬಾ​ರಿ

ನಿರೀಕ್ಷೆ ಉಳಿ​ಸಿ​ಕೊ​ಳ್ಳದ ಹಾರ್ದಿಕ್‌

ದುಬಾ​ರಿ​ಯಾ​ಗು​ತ್ತಿ​ರುವ ಬೌಲ​ರ್‍ಸ್

ಮೇಲ್ಕ್ರಮಾಂಕದ ಮೇಲೆ ಒತ್ತಡ

ಆಲ್ರೌಂಡರ್‌ ಕೊರತೆ

ಆರಂಭ: 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

ಪಿಚ್‌ ರಿಪೋರ್ಟ್‌

ಈ ಐಪಿ​ಎಲ್‌ನಲ್ಲಿ ಇಲ್ಲಿ 4 ಪಂದ್ಯ​ಗಳು ನಡೆ​ದಿದ್ದು, ಮೊದಲು ಬ್ಯಾಟ್‌ ಮಾಡಿದ ತಂಡಗಳು 2ರಲ್ಲಿ ಗೆದ್ದರೆ, ಮತ್ತೆರಡು ಪಂದ್ಯ​ಗ​ಳಲ್ಲಿ 2ನೇ ಬ್ಯಾಟಿಂಗ್‌ ನಡೆ​ಸಿದ ತಂಡ​ಗಳು ಜಯಿ​ಸಿವೆ. ಇಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ 170-180 ರನ್‌ ಗಳಿ​ಸಿ​ದರೆ ಸುರ​ಕ್ಷಿತ ಎಂದೇ ಪರಿ​ಗ​ಣಿ​ಸ​ಬ​ಹುದು. ಸ್ಪಿನ್ನರ್‌ಗಳಿಗೆ ಪಿಚ್‌ ಹೆಚ್ಚು ನೆರವು ನೀಡ​ಲಿದೆ. 2ನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಬೀಳುವ ಕಾರಣ, ಬೌಲ್‌ ಮಾಡುವ ತಂಡಕ್ಕೆ ಕಷ್ಟ​ವಾ​ಗ​ಲಿದೆ.

Follow Us:
Download App:
  • android
  • ios