ದುಬೈ(ಅ.04): ಪ್ರತಿ ಆವೃತ್ತಿಯಲ್ಲಿ ಟೇಬಲ್ ಟಾಪ್‍ ಸ್ಥಾನ ಅಲಂಕರಿಸುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಸತತ 3 ಸೋಲಿನೊಂದಿಗೆ ಅಂಕಪಟ್ಟಿಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ದಿಟ್ಟ ಹೋರಾಟ ನೀಡುತ್ತಿದ್ದರೂ ಗೆಲುವು ಕಾಣುತ್ತಿಲ್ಲ. ಹೀಗಾಗಿ 7ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಪಂಜಾಬ್ ಹಾಗೂ ಚೆನ್ನೈ ಹೋರಾಟ ಪ್ರಾಮುಖ್ಯತೆ ಪಡೆದುಕೊಂಡಿದೆ.

ಐಪಿಎಲ್ 2020: ಪಂಜಾಬ್‌ಗಿಂದು ಧೋನಿ ಪಡೆ ಚಾಲೆಂಜ್..!.

ಗೆಲುವಿಗಾಗಿ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಅಗತ್ಯವಿದೆ. ಆದರೆ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಪದೇ ಪದೇ ಬದಲಾವಣೆ ಮಾಡುವುದಿಲ್ಲ. ಹೀಗಾಗಿ ಇಂದು ಕೂಡ ಯಾವುದೇ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.

ಕನ್ನಡಿಗರಿಗೆ ಅವಕಾಶ ನೀಡಲು KXIP ತಂಡದ ಹಿತ ಮರೆತ್ರಾ ಕುಂಬ್ಳೆ..?

ಸಿಎಸ್‌ಕೆ ಸಂಭವನೀಯ ಪ್ಲೇಯಿಂಗ್ 11
ಶೇನ್ ವ್ಯಾಟ್ಸನ್, ಫಾಫ್ ಡುಪ್ಲೆಸಿಸ್, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು,  ಎಂ.ಎಸ್.ಧೋನಿ , ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಡ್ವೇನ್ ಬ್ರಾವೋ, ದೀಪಕ್ ಚಹಾರ್, ಪಿಯೂಷ್ ಚಾವ್ಲಾ, ಶಾರ್ದೂಲ್ ಠಾಕೂರ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ ಇಲ್ಲದೆಯೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದೆರೆ ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ನಾಯಕ ಕೆಎಲ್ ರಾಹುಲ್ ಕೆಲ ಬದಲಾವಣೆ ಮಾಡಲು ಇಚ್ಚಿಸಿದ್ದಾರೆ. ಆದರೆ ಮ್ಯಾನೇಜ್ಮೆಂಟ್ ರಾಹುಲ್ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾರ ಅನ್ನೋದೇ ಕುತೂಹಲ

ಪಂಜಾಬ್ ಸಂಭವನೀಯ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ನಿಕೊಲಸ್ ಪೂರನ್, ಮಂದೀಪ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ರಿಸ್ ಜೋರ್ಡಾನ್, ಕೆ ಗೌತಮ್, ಸರ್ಫರಾಜ್ ಖಾನ್, ರವಿ ಬಿಶ್ನೋಯಿ, ಶೆಲ್ಡನ್ ಕಾಟ್ರೆಲ್, ಮೊಹಮ್ಮದ್ ಶಮಿ