Asianet Suvarna News Asianet Suvarna News

ಆಸ್ಪತ್ರೆಗೆ ದಾಖಲಾದ ಕ್ರಿಸ್ ಗೇಲ್: ಅಭಿಮಾನಿಗಳಿಗೆ ಸಂದೇಶ ರವಾನಿಸಿದ ಬಾಸ್!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸತತ ಸೋಲು ಕಾಣುತ್ತಿದೆ. ಇತ್ತ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆಸ್ಪತ್ರೆ ದಾಖಲಾಗಿದ್ದಾರೆ.  ಪಂಜಾಬ್ ಕಳಪೆ ಪ್ರದರ್ಶನಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಇತ್ತ ಕ್ರಿಸ್ ಗೇಲ್ ತಂಡಕ್ಕೆ ಸೇರಿಸಿಕೊಳ್ಳುತ್ತಿಲ್ಲ ಅನ್ನೋ ಬೇಸರವನ್ನೂ ಅಭಿಮಾನಿಗಳು ಹೊರಹಾಕಿದ್ದಾರೆ. ಇದೀಗ ಗೇಲ್ ಅಲಭ್ಯರಾಗಿರುವುದಕ್ಕೆ ಕಾರಣವೂ ಬಹಿರಂಗವಾಗಿದೆ. 
 

Kings XI punjab batsman admit hospital due to stomach pain ckm
Author
Bengaluru, First Published Oct 11, 2020, 8:21 PM IST
  • Facebook
  • Twitter
  • Whatsapp

ದುಬೈ(ಅ.11):  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನವೇ ಗೇಲ್ ಲಭ್ಯರಾಗಿದ್ದರೂ, ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಗೇಲ್ ತಂಡಕ್ಕೆ ಸೇರಿಸದ ಅಸಲಿ ಕಾರಣ ಬಹಿರಂಗವಾಗಿದೆ. ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಗೇಲ್ ಇದೀಗ ಚಿಕಿತ್ಸೆಗೆಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ.

IPL 2020: ಹೈದಾರಾಬಾದ್ ಎದುರು ಪಂಜಾಬ್ ಹೀನಾಯ ಸೋಲು ಕಂಡಿದ್ದೇಗೆ?..

ದುಬೈಗೆ ಆಗಮಿಸಿದ ಬಳಿಕ ಆಹಾರದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಂಡಿದೆ.  ಗೇಲ್‌ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡ ವಿಶ್ರಾಂತಿಗೆ ಸೂಚಿಸಿತ್ತು. ಇದೀಗ ಮತ್ತೆ ಹೊಟ್ಟೆ ನೋವಿನ ಸಮಮಸ್ಯೆ ಉಲ್ಪಣಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಆಸ್ಪತ್ರೆಯಿಂದ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಹೋರಾಟ ಮಾಡದೇ ಗೇಲ್ ಎಂದಿಗೂ ಶಸ್ತ್ರ ಕೆಳಗಿಟ್ಟಿಲ್ಲ ಎಂದಿದ್ದಾರೆ. ನಾನು ಯನಿವರ್ಸಲ್ ಬಾಸ್. ಹೋರಾಟ ಮಾಡದೆ ಹಿಂತಿರುಗುವು ಜಾಯಮಾನ ನಂದಲ್ಲ. ನಾನು ಮಾಡುವುದೆಲ್ಲಾ ಅನುಸರಿಸಲು ಸಾಧ್ಯವಿಲ್ಲ, ಆದರೆ ಕಲಿಯಬಹುದು. ನನ್ನ ಸ್ಟೈಲ್ ಹಾಗೂ ಸ್ಫೋಟಕ ಇನ್ನಿಂಗ್ಸ್ ಮರೆಯದಿರಿ. ಕಾಳಜಿ ವಹಿಸಿದ ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ. ನಿಜಕ್ಕೂ ನಾನು ಫೋನ್ ಕಾಲ್‌ನಲ್ಲಿದ್ದೆ ಎಂದು ಫೋಟೋ ಮೂಲಕ ಗೇಲ್ ಸಂದೇಶ ರವಾನಿಸಿದ್ದಾರೆ.

 

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸತತ ಸೋಲು, ಕಳೆಪೆ ಪ್ರದರ್ಶನದಿಂದ ಬೇಸತ್ತಿರುವ ಅಭಿಮಾನಿಗಳು ಕ್ರಿಸ್ ಗೇಲ್‌ಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಇತ್ತ ಗೇಲ್ ಪಂದ್ಯದ ವೇಳೆ ಡಗೌಟ್‌ನಲ್ಲಿ ಕಾಣಿಸಿಕೊಂಡರು ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅಸಲಿ ಕಾರಣ ಬಹಿರಂಗಗೊಂಡಿದೆ.

ಪಂಜಾಬ್ ಆಡಿದ 7 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿದೆ. ಇನ್ನುಳಿದ 6 ಪಂದ್ಯಗಳನ್ನು ಸೋತಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ  ಗೆಲ್ಲುವ ಪಂದ್ಯಗಳನಲ್ಲಾ ಸೋತ ನತದೃಷ್ಟ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್.

Follow Us:
Download App:
  • android
  • ios