ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಸಂಜು ಸಾಮ್ಸನ್‌ ಔಟ್ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದ್ದರು. ಕೆಲವರ ವಾದ ಇದು ನಾಟೌಟ್, ಮತ್ತ ಕೆಲವರು ಔಟ್ ಎಂದಿದ್ದಾರೆ. ಈ ವಿವಾದಕ್ಕೆ ಕಾರಣವೇನು? ಹಾಗಾದರೆ ಅಸಲಿ ತೀರ್ಪು ಏನು?

ಅಬು ಧಾಬಿ(ಅ.03): ರಾಜಸ್ಥಾನ ರಾಯಲ್ಸ್ ತಂಡದ ಕೀ ಪ್ಲೇಯರ್ ಸಂಜು ಸಾಮ್ಸನ್ ಆರಂಭಿಕ 2 ಪಂದ್ಯದಲ್ಲಿ 50 ಪ್ಲಸ್ ಸ್ಕೋರ್ ಮಾಡಿ ಮಿಂಚಿದ್ದರು. ಆದರೆ ನಂತರದ 2 ಪಂದ್ಯದಲ್ಲಿ ಅಬ್ಬರಿಸಲು ಸಾಧ್ಯವಾಗಿಲ್ಲ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಸಂಜು ಸಾಮ್ಸನ್ ಕಾಟ್ ಅಂಡ್ ಬೋಲ್ಡ್ ಆಗಿದ್ದಾರೆ. ಇದೀಗ ವಿವಾದ ಸೃಷ್ಟಸಿದ್ದಾರೆ.

IPL 2020: RCBಗೆ ಸ್ಫರ್ಧಾತ್ಮಕ ಗುರಿ ನೀಡಿದ ರಾಜಸ್ಥಾನ ರಾಯಲ್ಸ್.

ಆರ್‌ಸಿಬಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ಎಸೆತದಲ್ಲಿ ಕಾಟ್ ಅಂಡ್ ಬೋಲ್ಡ್ ಆದ ಸಂಜು ಸಾಮ್ಸನ್ ನಿರಾಸೆ ಅನುಭವಿಸಿದರು. ಚಹಾಲ್ ಕ್ಯಾಚ್ ಹಿಡಿಯುವಾಗ ಬಾಲ್ ನೆಲಕ್ಕೆ ತಾಗಿದೆ ಅನ್ನೋದು ಒಂದು ವಾದ. ಚಹಾಲ್ ಕೈ ಬೆರಳು ಬಾಲ್ ಅಡಿಯಲ್ಲಿತ್ತು ಹೀಗಾಗಿ ನಾಟೌಟ್ ಅನ್ನೋದು ಮತ್ತೊಂದು ವಾದ. ಔಟ್ ಕುರಿತು ಫೀಲ್ಡ್ ಅಂಪೈರ್ ನೇರವಾಗಿ ಥರ್ಡ್ ಅಂಪೈರ್‌ಗೆ ಮನವಿ ಮಾಡಿದ್ದರು. ಇತ್ತ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಕ್ಯಾಚ್ ಪಡೆದುಕೊಂಡ ಚಹಾಲ್ ,ತಂಡದೊಂದಿದೆ ಸಂಭ್ರಮಾಚರಣೆ ಆರಂಭಿಸಿದ್ದರು. ಇತ್ತ ಫೀಲ್ಡ್ ಅಂಪೈರ್ ಮೇಲ್ನೋಟಕ್ಕೆ ಕ್ಯಾಚ್ ಸರಿಯಾಗಿ ತೆಗೆದುಕೊಂಡಿರುವಂತೆ ಭಾಸವಾಗುವ ಕಾರಣ ಸಾಫ್ಟ್ ಸಿಗ್ನಲ್ ಔಟ್ ಎಂದು ಸೂಚಿಸಿ, ಥರ್ಡ್ ಅಂಪೈರ್‌ಗೆ ತೀರ್ಪು ನೀಡಲು ಮನವಿ ಮಾಡಿದ್ದಾರೆ. ಇತ್ತ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ಗಮನದಲ್ಲಿಟ್ಟುಕೊಂಡು ತೀರ್ಪು ನೀಡಿದ್ದಾರೆ.

ಈ ತೀರ್ಪಿನ ವಿರುದ್ಧ ಪರ ವಿರೋಧಗಳು ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಇದು ಔಟ್ ಎಂದು ಹೇಳಿದ್ದರೆ, ಕೆಲವರು ನಾಟೌಟ್ ಎಂದು ವಿಡಿಯೋ ಸಮೇತ ವಿವರಣೆ ನೀಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…