Asianet Suvarna News Asianet Suvarna News

IPL ಹರಾಜು: ಕನ್ನಡಿಗ ರಾಬಿನ್ ಉತ್ತಪ್ಪ 3 ಕೋಟಿಗೆ ಸೇಲ್!

ಕೆಕೆಆರ್ ತಂಡ ರಿಲೀಸ್ ಮಾಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಇದೀಗ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ. 

IPL player auction robin uthappa sold to rajasthan royals
Author
Bengaluru, First Published Dec 19, 2019, 3:51 PM IST
  • Facebook
  • Twitter
  • Whatsapp

ಕೋಲ್ಕತಾ(ಡಿ.19): 13ನೇ ಆವೃತ್ತಿ ಐಪಿಎಲ್ ಟೂರ್ನಿ ಆಟಗಾರರ ಹರಾಜಿನಲ್ಲಿ ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ ಬರೋಬ್ಬರಿ 3 ಕೋಟಿ ರೂಪಾಯಿಗೆ ಸೇಲಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಉತ್ತಪ್ಪಗೆ 3 ಕೋಟಿ ರೂಪಾಯಿ ನೀಡಿತು. 1.5 ಕೋಟಿ ರೂಪಾಯಿ ಮೂಲ ಬೆಲೆಯಿದ್ದ ಉತ್ತಪ್ಪಗೆ ಇತರ ಫ್ರಾಂಚೈಸಿಗಳು ಖರೀದಿಗೆ ಮುಂದಾಗಿತ್ತು. ಆದರೆ ರಾಜಸ್ಥಾನ ರಾಯಲ್ಸ್ 3 ಕೋಟಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಯಿತು.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ರಾಬಿನ್ ಉತ್ತಪ್ಪ , 2020ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿರುವ ಉತ್ತುಪ್ಪ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ರಾಜಸ್ಥಾನದ ಪಾಲಾಗಿದ್ದಾರೆ.

Follow Us:
Download App:
  • android
  • ios