ಕೋಲ್ಕತಾ(ಡಿ.19): ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಈ ಬಾರಿಯ ಹರಾಜಿನಲ್ಲಿ ಆಟಗಾರ ಮೊದಲು ಬಿಕರಿಯಾದ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಪಾತ್ರರಾಗಿದ್ದಾರೆ. ಕ್ರಿಸ್ ಲಿನ್ನನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತು.  

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಈ ಬಾರಿಯ ಹರಾಜಿನಲ್ಲಿ ಒಟ್ಟು 338 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. 73 ಸ್ಥಾನಕ್ಕಾಗಿ 338 ಆಟಗಾರರು ಪೈಪೋಟಿ ನಡೆಸಲಿದ್ದಾರೆ. ಸದ್ಯ ಬ್ಯಾಟ್ಸ್‌ಮನ್ ಹರಾಜು ನಡೆಯುತ್ತಿದೆ. ಬ್ಯಾಟ್ಸ್‌ಮನ್ ಬಳಿಕ ಆಲ್ರೌಂಡರ್, ವಿಕೆಟ್ ಕೀಪರ್, ವೇಗಿ ಹಾಗೂ ಸ್ಪಿನ್ನರ್‌ಗಳ ಹರಾಜು ನಡೆಯಲಿದೆ.