ನವ​ದೆ​ಹ​ಲಿ(ಆ.07): ಕೊರೋನಾ ಸಂಕಷ್ಟದ ನಡುವೆಯೂ ಈ ವರ್ಷ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ವ್ಯವಸ್ಥೆ ಮಾಡಿ​ದ್ದರೂ, ಫ್ರಾಂಚೈಸಿ​ಗ​ಳಿಗೆ ದೊಡ್ಡ ನಷ್ಟ ಎದು​ರಾ​ಗ​ಲಿದೆ ಎಂದು ವರ​ದಿ​ಯಾ​ಗಿದೆ. 

ಟೈಟಲ್‌ ಪ್ರಾಯೋ​ಜ​ಕತ್ವ ಹೊಂದಿದ್ದ ವಿವೋ ಸಂಸ್ಥೆ ಬಿಸಿ​ಸಿ​ಐಗೆ ವಾರ್ಷಿಕ 440 ಕೋಟಿ ರು. ಪಾವ​ತಿ​ಸು​ತ್ತಿತ್ತು. ಇದ​ರಲ್ಲಿ ಶೇ.50ರಷ್ಟು ಮೊತ್ತವನ್ನ ಬಿಸಿ​ಸಿಐ, ಫ್ರಾಂಚೈ​ಸಿ​ಗ​ಳಿಗೆ ಹಂಚು​ತ್ತಿತ್ತು. ಅಂದರೆ ಪ್ರತಿ ಫ್ರಾಂಚೈ​ಸಿಗೆ 27.5 ಕೋಟಿ ರು. ಸಿಗು​ತ್ತಿತ್ತು. ಆದರೆ ಈ ವರ್ಷ ವಿವೋ ಪ್ರಾಯೋ​ಜ​ಕತ್ವದಿಂದ ಹಿಂದೆ ಸರಿ​ದಿದ್ದು, ನೂತನ ಪ್ರಾಯೋ​ಜ​ಕತ್ವದ ಮೌಲ್ಯ, ಗರಿಷ್ಠ 300 ಕೋಟಿಯಷ್ಟು ಇರ​ಬ​ಹುದು ಎಂದು ವಿಶ್ಲೇ​ಷಿ​ಸ​ಲಾ​ಗಿದೆ. 

ಐಪಿ​ಎಲ್‌ ಪ್ರಾಯೋ​ಜ​ಕ​ತ್ವ​ಕ್ಕೆ ಕೋಕ್‌, ಬೈಜೂಸ್‌ ಆಸಕ್ತಿ?

ಹೀಗಾಗಿ, ಫ್ರಾಂಚೈ​ಸಿ​ಗ​ಳಿಗೆ ಏನಿ​ಲ್ಲ​ವೆಂದ​ರೂ 12ರಿಂದ 15 ಕೋಟಿ ರು. ಕಡಿಮೆ ಸಿಗಲಿದೆ. ಜತೆಗೆ ಟಿಕೆಟ್‌ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈ​ಸಿ​ಗ​ಳಿಗೆ ಅಂದಾಜು 25 ಕೋಟಿ ಸಿಗು​ತ್ತಿತ್ತು. ಈ ವರ್ಷ ಪ್ರೇಕ್ಷ​ಕ​ರಿಗೆ ನಿರ್ಬಂಧ ಹೇರ​ಲಿ​ರುವ ಕಾರಣ, ಆ ಮೊತ್ತವೂ ಸಿಗು​ವು​ದಿಲ್ಲ. ಇತರ ಪ್ರಾಯೋ​ಜ​ಕ​ತ್ವದ ಮೌಲ್ಯವೂ ಕಡಿತಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ಭೀತಿಯಿಂದಾಗಿ ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತದಿಂದ ಯುಎಇಗೆ ಸ್ಥಳಾಂತರವಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಜರುಗಲಿದೆ.