Asianet Suvarna News Asianet Suvarna News

ಐಪಿ​ಎಲ್‌ ಪ್ರಾಯೋ​ಜ​ಕ​ತ್ವ​ಕ್ಕೆ ಕೋಕ್‌, ಬೈಜೂಸ್‌ ಆಸಕ್ತಿ?

2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಭಾರತೀಯ ಕಂಪನಿಗಳು ಮುಂದೆ ಬಂದಿವೆ. ಬೈಜೂಸ್‌ ಈಗಾ​ಗಲೇ ಭಾರತ ತಂಡಗಳಿಗೆ ಪ್ರಾಯೋಜಕತ್ವ ನೀಡು​ತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coco Byjus IPL 2020 title sponsorship race
Author
New Delhi, First Published Aug 7, 2020, 1:06 PM IST
  • Facebook
  • Twitter
  • Whatsapp

ನವದೆಹಲಿ(ಆ.07): 2020ರ ಐಪಿ​ಎಲ್‌ ಟೈಟಲ್‌ ಪ್ರಾಯೋ​ಜ​ಕತ್ವದಿಂದ ಚೀನಾ ಮೊಬೈಲ್‌ ಕಂಪನಿ ವಿವೋ ಹಿಂದೆ ಸರಿ​ದಿದೆ ಎಂದು ಬಿಸಿ​ಸಿ​ಐ ಗುರು​ವಾರ ಅಧಿ​ಕೃತ ಪ್ರಕ​ಟಣೆ ನೀಡಿದ ಬೆನ್ನಲ್ಲೇ 1 ವರ್ಷದ ಅವ​ಧಿಗೆ ಪ್ರಾಯೋ​ಜ​ಕತ್ವ ಹಕ್ಕಿಗೆ ಬಿಡ್‌ ಸಲ್ಲಿ​ಸಲು ಭಾರ​ತದ ಕೆಲ ಪ್ರಮುಖ ಸಂಸ್ಥೆಗಳು ಆಸಕ್ತಿ ತೋರಿವೆ. 

ಕೋಕಾ ಕೋಲಾ ಇಂಡಿಯಾ, ಬೈಜೂಸ್‌ ಈ ಪೈಕಿ ಮುಂಚೂ​ಣಿ​ಯ​ಲ್ಲಿವೆ ಎಂದು ಪ್ರತಿ​ಷ್ಠಿತ ಮಾಧ್ಯ​ಮ​ವೊಂದು ವರ​ದಿ ಮಾಡಿದೆ. ಬೈಜೂಸ್‌ ಈಗಾ​ಗಲೇ ಭಾರತ ತಂಡಗಳಿಗೆ ಪ್ರಾಯೋಜಕತ್ವ ನೀಡು​ತ್ತಿದೆ.

IPL 2020: ಟೈಟಲ್ ಪ್ರಾಯೋಜಕತ್ವದಿಂದ ವಿವೋ ಔಟ್, ಬಿಸಿಸಿಐ ಕನ್ಫರ್ಮ್..!

ವಾರ್ಷಿಕ 440 ಕೋಟಿ ರು. ಒಪ್ಪಂದ ಹೊಂದಿದ್ದ ವಿವೋ, ಮುಂದಿನ ವರ್ಷ ಹೊಸ ಗುತ್ತಿಗೆಯೊಂದಿಗೆ ಪ್ರಾಯೋ​ಜ​ಕತ್ವಕ್ಕೆ ವಾಪ​ಸಾ​ಗ​ಬ​ಹುದು. ಆದರೆ ಈ ವರ್ಷದ ಮಟ್ಟಿಗೆ ಕೇವಲ 1 ತಿಂಗಳ ಸಮ​ಯ​ದಲ್ಲಿ ಹೊಸ ಪ್ರಾಯೋ​ಜಕರನ್ನು ಹುಡು​ಕುವ ಒತ್ತ​ಡಕ್ಕೆ ಬಿಸಿ​ಸಿಐ ಸಿಲು​ಕಿದೆ. ಐಪಿಎಲ್‌ಗಿರುವ ಜನ​ಪ್ರಿ​ಯ​ತೆಯ ಕಾರಣ, ಪ್ರಾಯೋ​ಜ​ಕ​ರನ್ನು ಹುಡು​ಕು​ವುದು ಕಷ್ಟದ ಕೆಲ​ಸ​ವೇ​ನಲ್ಲ ಎಂದು ತಜ್ಞರು ಅಭಿ​ಪ್ರಾ​ಯಿ​ಸಿ​ದ್ದಾರೆ. ಇದೇ ವೇಳೆ ಫೋನ್‌ ಪೇ, ಅಮೇ​ಜಾನ್‌ ಇಂಡಿಯಾ, ಜಿಯೋ ಸಂಸ್ಥಗಳು ಸಹ ಪ್ರಾಯೋ​ಜ​ಕ​ತ್ವದ ಹಕ್ಕು ಪಡೆ​ಯುವ ರೇಸ್‌ನಲ್ಲಿವೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.
 

Follow Us:
Download App:
  • android
  • ios