ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳ ಟೀಕೆಗೆ ಗುರಿಯಾದ ಐಪಿಎಲ್ ವಿವರಣೆಕಾರರನ್ನು ಎಬಿ ಡಿ ವಿಲಿಯರ್ಸ್ ತರಾಟೆಗೆ ತೆಗೆದುಕೊಂಡರು. ಆರ್‌ಸಿಬಿ ಈ ವರ್ಷ ಐಪಿಎಲ್ ಗೆದ್ದು 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

IPL 2025: ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೌಲರ್‌ಗಳ ವಿರುದ್ಧ ಅನಗತ್ಯ ಟೀಕೆಗೆ ಗುರಿ ಮಾಡಿದ್ದ ಐಪಿಎಲ್ ವಿವರಣೆಕಾರರನ್ನು ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ತರಾಟೆಗೆ ತೆಗೆದುಕೊಂಡರು. ಇದಾದ ಬಳಿಕ ಅವರು, ಆರ್‌ಸಿಬಿ ಈ ವರ್ಷದ ಐಪಿಎಲ್ ಗೆದ್ದು, 18 ವರ್ಷಗಳ ಕಾಲದ ಕಾಯುವಿಕೆಯನ್ನು ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ. ಗುರುವಾರ ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಟೇಬಲ್ ಟಾಪರ್‌ ಪಂಜಾಬ್ ಕಿಂಗ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿದ ನಂತರದಲ್ಲಿ ಡಿ ವಿಲಿಯರ್ಸ್‌ ಈ ಮಾತು ಹೇಳಿದ್ದಾರೆ. 2016 ರ ನಂತರ ಆರ್‌ಸಿಬಿ ಮೊದಲ ಬಾರಿಗೆ ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ.

ಅಂದಹಾಗೆ ಡಿ ವಿಲಿಯರ್ಸ್, "ಈ ಸಲ ಕಪ್ ನಮ್ದೆ" ಎಂದು ಹೇಳಬೇಡಿ ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಇದರ ಅರ್ಥ "ಈ ವರ್ಷ ಕಪ್ ನಮ್ಮದು" ಎಂದಾಗಿತ್ತು. ಪ್ರತಿ ವರ್ಷವೂ ಈ ಸಲ ಕಪ್‌ ನಮ್ದೇ ಎಂಬ ಘೋಷವಾಕ್ಯವನ್ನು ಎಲ್ಲರೂ ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಾಕ್ಯವೂ ಸದಾ ಟ್ರೆಂಡಿಂಗ್‌ನಲ್ಲಿ ಇರುತ್ತಿತ್ತು. ಆದರೆ ಈ ಬಾರಿ ಈ ಮಾತು ಒಮ್ಮೆಯೂ ಟ್ರೆಂಡಿಂಗ್‌ ಆಗಿರಲಿಲ್ಲ. ಅಂದಹಾಗೆ ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ತಾನು ನಂಬಿದ್ದೇನೆ ಎಂದು ಎಬಿಡಿ ಹೇಳಿದ್ದಾರೆ.

"ಗೆಲ್ಲುವ ಸಮಯ ಬಂದಿದೆ. ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ. ಈ ಸಲ ಕಪ್‌ ನಮ್ದೇ ಎಂದು ಹೇಳಬೇಡಿ ಅಂತ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಹೀಗಾಗಿ ಈ ಮಾತು ಹೇಳಲು ನನಗೆ ಅನುಮತಿ ಇಲ್ಲ. ಈ ಸೀಸನ್‌ನಲ್ಲಿ ನಾವು ಸಂಪೂರ್ಣವಾಗಿ ಗೆಲ್ಲುತ್ತೇವೆ ಎಂದು ನಂಬಿದ್ದೇನೆ. ಆದ್ದರಿಂದ, ಎಚ್ಚರಿಕೆಯಿಂದಿರಿ, ಗೆಲುವಿಗೆ ಸಿದ್ಧರಾಗಿ, ಜರ್ನಿಯನ್ನು ಆನಂದಿನಿ" ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ಈ ಹಿಂದೆ, ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಗೆದ್ದಿತ್ತು. ಈ ಮೂಲಕ ಟಾಪ್-2 ಸ್ಥಾನವನ್ನು ಗಳಿಸಿ ಕ್ವಾಲಿಫೈಯರ್ 1 ಗೆ ಪ್ರವೇಶ ಮಾಡಿತ್ತು. ಎಬಿಡಿ ವಿಲಿಯರ್ಸ್ ಈ ವರ್ಷ ಆರ್‌ಸಿಬಿಯ ಯಶಸ್ಸಿನ ಕಾರಣ ಏನೆಂದು ಹೇಳಿದ್ದರು.

"ಈ ಸೀಸನ್‌ನಲ್ಲಿ ಒಬ್ಬರಿಬ್ಬರು ಆಟಗಾರರಷ್ಟೇ ಅಲ್ಲ, ಹಲವಾರು ಆಟಗಾರರು ಮುಂದೆ ಬಂದು ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದರಿಂದಲೇ ನನ್ನನ್ನು ಹೆಚ್ಚು ಉತ್ಸಾಹ ಬಂದಿದೆ. ವಿರಾಟ್ ಕೊಹ್ಲಿ ಅಥವಾ ಹಿಂದಿನ ದಿನಗಳಲ್ಲಿ ಕ್ರಿಸ್ ಗೇಲ್‌ನಂತಹವರಿಗೆ ಮಾತ್ರ ಈ ಆಟ ಸೀಮಿತವಾಗಿಲ್ಲ. ಅವಶ್ಯಕತೆ ಬಂದಾಗ ಇಡೀ ತಂಡವೇ ಪ್ರತಿಕ್ರಿಯೆ ನೀಡುತ್ತಿದೆ" ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್‌ ತಂಡವನ್ನು ಆರ್‌ಸಿಬಿ ಆತಿಥೇಯ ತಂಡವು 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಮಾಡಿದೆ. 2008 ರಲ್ಲಿ ಲೀಗ್ ಆರಂಭವಾದಾಗಿನಿಂದ ಮೂರು ಬಾರಿ ಫೈನಲ್‌ಗಳನ್ನು (2009, 2011, 2016) ತಲುಪಿದರೂ ಕೂಡ ಇನ್ನೂ ಐಪಿಎಲ್ ಟ್ರೋಫಿ ಗೆಲ್ಲದ ಆರ್‌ಸಿಬಿ, ಓಪನರ್ ಫಿಲ್ ಸಾಲ್ಟ್‌ರ ಆಕ್ರಮಣಕಾರಿ ಅರ್ಧಶತಕದಿಂದ (27 ಎಸೆತಗಳಲ್ಲಿ 56* ರನ್) 10 ಓವರ್‌ಗಳಲ್ಲಿ ಸಖತ್‌ ಆಗಿ ಚೇಸ್‌ ಮಾಡಿತ್ತು. ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿ ಆಡಲಿದೆ.

2014 ರ ನಂತರ ಮೊದಲ ಬಾರಿಗೆ ಪ್ಲೇ-ಆಫ್ ತಲುಪಿರುವ ಪಂಜಾಬ್ ಕಿಂಗ್ಸ್ ತಂಡವು, ಜೂನ್ 1 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಫೈನಲ್‌ಗೆ ತಲುಪಲು ಇನ್ನೊಂದು ಅವಕಾಶವನ್ನು ಪಡೆದಿದೆ.