Asianet Suvarna News Asianet Suvarna News

ಪ್ಲೇ ಆಫ್‌ ಸ್ಥಾನದ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ ಪಡೆ

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 52ನೇ ಪಂದ್ಯದಲ್ಲಿಂದು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಸನ್‌ರೈಸರ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Virat Kohli Led RCB Takes on SRH in Sharjah Stadium kvn
Author
Sharjah - United Arab Emirates, First Published Oct 31, 2020, 4:42 PM IST

ಶಾರ್ಜಾ(ಅ.31): ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು 3 ವರ್ಷಗಳ ಬಳಿಕ ಪ್ಲೇ-ಆಫ್‌ಗೇರುವ ಲಕ್ಷಣಗಳು ಕಾಣು​ತ್ತಿದ್ದು, ತಂಡದ ಆ ಕನಸು ಈಡೇ​ರ​ಬೇ​ಕಿ​ದ್ದರೆ ಶನಿ​ವಾರ ಇಲ್ಲಿ ನಡೆ​ಯ​ಲಿ​ರುವ ಸನ್‌ರೈಸ​ರ್ಸ್ ಹೈದ​ರಾ​ಬಾದ್‌ ವಿರು​ದ್ಧದ ಪಂದ್ಯ​ದಲ್ಲಿ ಜಯಗಳಿ​ಸ​ಬೇ​ಕಿದೆ. 

12 ಪಂದ್ಯ​ಗ​ಳಿಂದ 14 ಅಂಕ ಗಳಿ​ಸಿ​ರುವ ಆರ್‌ಸಿಬಿ, ಈ ಪಂದ್ಯ​ದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗ​ಲಿದೆ. ಒಂದೊಮ್ಮೆ ಸೋತರೂ, ತಂಡಕ್ಕೆ ಅವ​ಕಾಶ ಇರ​ಲಿದೆ. ಸತತ 2 ಪಂದ್ಯ​ಗ​ಳಲ್ಲಿ ಸೋತಿರುವ ಕಾರಣ, ನಾಯಕ ವಿರಾಟ್‌ ಕೊಹ್ಲಿ ಮೇಲೆ ಸಹ​ಜ​ವಾ​ಗಿಯೇ ಒತ್ತಡ ಹೆಚ್ಚಾ​ಗಿದೆ. ಕೊಹ್ಲಿ ಇಲ್ಲವೇ ಎಬಿ ಡಿ ವಿಲಿ​ಯರ್ಸ್ ಇಬ್ಬ​ರಲ್ಲಿ ಒಬ್ಬ​ರೂ ಸಿಡಿ​ದ​ರಷ್ಟೇ ಜಯ ಎನ್ನು​ವುದು ಮತ್ತೆ ಸಾಬೀ​ತಾ​ಗಿದೆ. ಮತ್ತೊಂದೆಡೆ ಸನ್‌ರೈಸ​ರ್ಸ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ತಂಡ ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಹೊರ​ಬೀ​ಳ​ಲಿದೆ.

ಸನ್‌ರೈಸರ್ಸ್ ಹೊರದಬ್ಬಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ?

ಪಿಚ್‌ ರಿಪೋರ್ಟ್‌

ಶಾರ್ಜಾ ಪಿಚ್‌ ಮೊದ​ಲಿ​ನಂತೆ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುತ್ತಿಲ್ಲ. ಕಳೆದೆರಡು ಪಂದ್ಯ​ಗ​ಳಲ್ಲಿ 150ಕ್ಕಿಂತ ಕಡಿಮೆ ಮೊತ್ತ ದಾಖ​ಲಾ​ಗಿದೆ. ಹೀಗಾಗಿ, ಆಟ​ಗಾ​ರರ ಆಯ್ಕೆಯಲ್ಲಿ ತಂಡಗಳು ಎಚ್ಚ​ರಿಕೆ ವಹಿ​ಸ​ಬೇ​ಕಿದೆ. ಸ್ಪಿನ್ನರ್ಸ್‌ಗೆ ನೆರವು ದೊರೆ​ಯ​ಲಿದೆ.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಆರ್‌ಸಿಬಿ: ಜೋಸ್ ಫಿಲಿಪಿ, ದೇವದತ್ ಪಡಿ​ಕ್ಕಲ್‌, ವಿರಾಟ್ ಕೊಹ್ಲಿ​(​ನಾ​ಯ​ಕ​), ಎಬಿ ಡಿ ವಿಲಿ​ಯರ್ಸ್, ಗುರ್‌ಕೀರತ್‌ ಮನ್, ಶಿವಂ ದುಬೆ, ಕ್ರಿಸ್ ಮೋರಿಸ್‌, ವಾಷಿಂಗ್ಟನ್ ಸುಂದರ್‌, ಇಸುರು ಉಡಾನ, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌.

ಸನ್‌ರೈಸ​ರ್ಸ್: ವೃದ್ದಿಮಾನ್ ಸಾಹ, ಡೇವಿಡ್ ವಾರ್ನರ್‌(ನಾ​ಯ​ಕ), ಮನೀಶ್ ಪಾಂಡೆ, ಕೇನ್ ವಿಲಿ​ಯಮ್ಸನ್‌, ಅಬ್ದುಲ್ ಸಮ​ದ್‌, ವಿಜಯ್‌ ಶಂಕರ್‌, ಜೇಸನ್ ಹೋಲ್ಡರ್‌, ರಶೀದ್ ಖಾನ್‌, ಸಂದೀಪ್ ಶರ್ಮಾ‌, ಶಾಬಾಜ್ ನದೀಮ್‌, ಟಿ ನಟ​ರಾ​ಜನ್‌.

ಸ್ಥಳ: ಶಾರ್ಜಾ, 
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

Follow Us:
Download App:
  • android
  • ios