Asianet Suvarna News Asianet Suvarna News

IPL 2020: 6 ಸಾವಿರ ರನ್ ಪೂರೈಸಿ ದಾಖಲೆ ಬರೆದ ವಿರಾಟ್ ಕೊಹ್ಲಿ !

  • ಟಿ20 ಲೀಗ್ ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ದಾಟಿದ ವಿರಾಟ್ ಕೊಹ್ಲಿ
  • ಚೆನ್ನೈ ವಿರುದ್ಧ ಅಬ್ಬರಿಸುವ ಮೂಲಕ ಕೊಹ್ಲಿ ಸಾಧನೆ
IPL 2020 virat kohli cross 6000 run mark in t20 league tourney ckm
Author
Bengaluru, First Published Oct 10, 2020, 10:29 PM IST
  • Facebook
  • Twitter
  • Whatsapp

ದುಬೈ(ಅ.10): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 52 ಎಸೆತದಲ್ಲಿ ಅಜೇಯ 90  ರನ್ ಸಿಡಿಸಿದ್ದಾರೆ. ಈ ಮೂಲಕ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಉತ್ತಮ ಮೊತ್ತ ಪೇರಿಸಿತು. ಈ ಪಂದ್ಯದಲ್ಲಿ ಕೊಹ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.  ಟ20 ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ 6,000 ರನ್ ಸಿಡಿಸಿದ್ದಾರೆ.

IPL 2020: ವಿರಾಟ್ ಕೊಹ್ಲಿ ಅಬ್ಬರ, ಚೆನ್ನೈಗೆ 170 ರನ್ ಟಾರ್ಗೆಟ್

ಐಪಿಎಲ್ ಟೂರ್ನಿ ಹಾಗೂ ಚಾಂಪಿಯನ್ಸ್ ಲೀಗ್ ಟೂರ್ನಿ ಮೂಲಕ ಕೊಹ್ಲಿ 6,000 ರನ್ ಪೂರೈಸಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಚೆನ್ನೈ ವಿರುದ್ಧ ಅಬ್ಬರಿಸಿದ ವಿರಾಟ್ ಕೊಹ್ಲಿ 52 ಎಸೆತದಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 90 ರನ್ ಸಿಡಿಸಿದರು. 173.08ರ ಸ್ಟ್ರೈಕ್ ರೇಟ್‌ನಲ್ಲಿ ಕೊಹ್ಲಿ ಬ್ಯಾಟ್ ಬೀಸಿದರು.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಸುರೇಶ್ ರೈನಾ ಹಾಗೂ ರೋಹಿತ್ ಶರ್ಮಾ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರು
ವಿರಾಟ್ ಕೊಹ್ಲಿ 5,635
ಸುರೇಶ್ ರೈನಾ 5,368
ರೋಹಿತ್ ಶರ್ಮಾ  5,109

Follow Us:
Download App:
  • android
  • ios