ದುಬೈ(ಅ.07): ಹಿರಿಯ ವೇಗಿ ಭುವ​ನೇ​ಶ್ವರ್‌ ಕುಮಾರ್‌ ಗಾಯ​ಗೊಂಡು ಈ ಆವೃತ್ತಿಯ ಐಪಿ​ಎಲ್‌ನಿಂದ ಹೊರಬಿದ್ದ ಕಾರಣ, ಅವರ ಬದಲು ಸನ್‌ರೈಸ​ರ್ಸ್ ಹೈದ​ರಾ​ಬಾದ್‌ ತಂಡ ಎಡಗೈ ವೇಗಿ ಪೃಥ್ವಿ ರಾಜ್‌ ಎರ್ರಾ ಅವ​ರನ್ನು ಸೇರಿ​ಸಿ​ಕೊಂಡಿದೆ. 

ಸದ್ಯ​ದಲ್ಲೇ ಪೃಥ್ವಿ ರಾಜ್‌ ಎರ್ರಾ ಯುಎಇ ತಲು​ಪ​ಲಿ​ದ್ದಾ​ರೆ. ಆಂಧ್ರ ಪ್ರದೇಶದ ಪೃಥ್ವಿ 11 ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ 39 ವಿಕೆಟ್‌ ಕಬ​ಳಿ​ಸಿದ್ದು, ಕಳೆದ ವರ್ಷ ಐಪಿ​ಎಲ್‌ನಲ್ಲಿ ಕೆಕೆ​ಆರ್‌ ಪರ ಆಡಿ​ದ್ದರು.  ತುಂಬಾ ಕುತೂಹಲಕಾರಿ ಸಂಗತಿಯೆಂದರೆ ಐಪಿ​ಎಲ್‌ನಲ್ಲಿ ಪೃಥ್ವಿ ರಾಜ್‌ ಎರ್ರಾ ಏಕೈಕ ವಿಕೆಟ್‌ ಪಡೆದಿದ್ದು, ಅದು ಸನ್‌ರೈಸ​ರ್ಸ್ ಹಾಲಿ ನಾಯಕ ಡೇವಿಡ್‌ ವಾರ್ನರ್‌ ಅವ​ರ​ದ್ದು ಎನ್ನುವುದು ಮತ್ತೊಂದು ವಿಶೇಷ.

ಅಕ್ಟೋಬರ್ 02ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಇಂಜುರಿಗೆ ತುತ್ತಾಗಿದ್ದರು. ಇದೀಗ ಭುವಿ ಸ್ಥಾನವನ್ನು 22 ವರ್ಷದ ಯುವ ಎಡಗೈ ವೇಗಿ ತುಂಬಲಿದ್ದಾರೆ. 

ಗಾಯದ ಮೇಲೆ ಮತ್ತೊಂದು ಬರೆ; ಐಪಿಎಲ್ ಟೂರ್ನಿಯಿಂದ ಭುವನೇಶ್ವರ್ ಕುಮಾರ್ ಔಟ್..!

ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಫ್ರಾಂಚೈಸಿ ಹಾರೈಸುತ್ತದೆ. ಇನ್ನುಳಿದ ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಸ್ಥಾನವನ್ನು ಪೃಥ್ವಿ ರಾಜ್‌ ಎರ್ರಾ ತುಂಬಲಿದ್ದಾರೆ ಎಂದು ಸನ್‌ರೈಸರರ್ಸ್ ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿದೆ.