ದುಬೈ(ಸೆ.20): ಜೋಫ್ರಾ ಆರ್ಚರ್ ಸೇರಿದಂತೆ ರಾಜಸ್ಥಾನ ರಾಯಲ್ಸ್ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದೆ. ಆದರೆ  ಶುಭ್‌ಮನ್ ಗಿಲ್ , ಇಯಾನ್ ಮಾರ್ಗನ್   ಹೋರಾಟ ಆ್ಯಂಡ್ರೆ ರಸೆಲ್ ಸಿಡಿಸಿದ   ಸಿಕ್ಸರ್ ನೆರವಿನಿಂದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದೆ. 

ಕಳೆದೆರಡು ಪಂದ್ಯದಲ್ಲಿ ಕೆಕೆಆರ್ ಆರಂಭಿಕ ಸಮಸ್ಯೆ ಅನುಭವಿಸುತ್ತಿದೆ. ಈ ಪಂದ್ಯದಲ್ಲೂ ಸುನಿಲ್ ನರೈನ್ ಅಬ್ಬರಿಸಲಿಲ್ಲ. ನರೈನ್ 15 ರನ್ ಸಿಡಿಸಿ ಔಟಾದರು. ಆದರೆ ಶುಭ್‌ಮನ್ ಗಿಲ್ ತಂಡಕ್ಕೆ ಆಸರೆಯಾದರು. ಗಿಲ್ ಹಾಗೂ ನಿತೀಶ್ ರಾಣಾ ಹೋರಾಟದಿಂದ ಕೋಲ್ಕತಾ ನೈಟ್ ರೈಡರ್ಸ್ ಚೇತರಿಸಿಕೊಂಡಿತು. 

ನಿತೀಶ್ ರಾಣಾ 22 ರನ್ ಸಿಡಿಸಿ ಔಟಾದರು. 34 ಎಸೆತದಲ್ಲಿ 47 ರನ್ ಸಿಡಿಸಿದ ಶುಬ್‌ಮನ್ ಗಿಲ್ ವಿಕೆಟ್ ಪತನ ಕೆಕೆಆರ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು. ಕ್ರೀಸ್‌ಗಿಳಿದ ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 3 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ ರಸೆಲ್ ಅಬ್ಬರ 24 ರನ್‌ಗಳಿಗೆ ಅಂತ್ಯವಾಯಿತು. 

ನಾಯಕ ದಿನೇಶ್ ಕಾರ್ತಿಕ್ ಮತ್ತೆ ವಿಫಲರಾಜರು. ಕೇವಲ 1 ರನ್ ಸಿಡಿಸಿ ಔಟಾದರು. ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್ ಹೋರಾಟದಿಂದ ಕೆಕೆಆರ್ ಸುಧಾರಿಸಿಕೊಂಡಿತು. ಕಮಿನ್ಸ್ 12 ರನ್ ಸಿಡಿಸಿ ಔಟಾದರು. ಇಯಾನ್ ಮಾರ್ಗನ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದೆ.