ದುಬೈ(ಅ.22):  ಸನ್‌‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ. ಸಂಜು ಸಾಮ್ಸನ್  ಫಾರ್ಮ್ ಕಂಡುಕೊಂಡರು ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಇತ್ತ ಬೆನ್ ಸ್ಟೋಕ್ಸ್ ಹೋರಾಟ ನೀಡಿದರೂ ಅಬ್ಬರಿಸಲಿಲ್ಲ. ಹೀಗಾಗಿ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ154 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್‌ಗೆ ರಾಬಿನ್ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್‌ಗೆ ಉತ್ತಮ ಆರಂಭ ನೀಡಲು ಸಾಧ್ಯವಾಗಿಲ್ಲ. ರಾಬಿನ್ ಉತ್ತಪ್ಪ ಕೇವಲ 119 ರನ್ ಸಿಡಿಸಿ ಔಟಾದರು. ಬೆನ್ ಸ್ಟೋಕ್ಸ್ ಹಾಗೂ ಸಂಜು ಸಾಮ್ಸನ್ ಜೊತೆಯಾಟದಿಂದ ಚೇತರಿಸಿಕೊಂಡಿತು. 

ಫಾರ್ಮ್ ಸಮಸ್ಯೆ ಅನುಭವಿಸಿದ ಸಂಜು ಸಾಮ್ಸನ್ 36 ರನ್ ಕಾಣಿಕೆ ನೀಡಿದರು. ಬೆನ್ ಸ್ಟೋಕ್ಸ್ 30 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ಕೇವಲ 9 ರನ್ ಸಿಡಿಸಿ ಔಟಾದರು.  ಸ್ಟೀವ್ ಸ್ಮಿತ್ ಹಾಗೂ ರಿಯಾನ್ ಪರಾಗ್ ಹೋರಾಟ ತಂಡಕ್ಕೆ ಚೇತರಿಕೆ ನೀಡೋ ಸೂಚನೆ ನೀಡಿತು. ಆದರೆ ಸ್ಮಿತ್ 19 ರನ್ ಸಿಡಿಸಿ ಔಟಾದರು. ಇನ್ನು ಪರಾಗ್ 20 ರನ್ ಸಿಡಿಸಿದರು. 

ರಾಹುಲ್ ಟಿವಾಟಿಯಾ ಅಜೇಯ 2 ರನ್ ಹಾಗೂ ಜೋಫ್ರಾ ಆರ್ಚರ್ ಅಜೇಯ 116 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು.