Asianet Suvarna News Asianet Suvarna News

ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ RCB;ಸೋತರೆ ಪ್ಲೇ-ಆಫ್‌ ರೇಸ್‌ನಿಂದ KXIP ಔಟ್?

ಗೆಲುವಿನ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸುವ ಲೆಕ್ಕಾಚಾರದಲ್ಲಿದೆ. ಇತ್ತ ಪಂಜಾಬ್ ಮತ್ತೊಂದು ಸೋಲು ಕಂಡರೆ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬೀಳಲಿದೆ.
 

Ipl 2020 Rcb ready to face KXIP challenge in sharjah ckm
Author
Bengaluru, First Published Oct 15, 2020, 5:38 PM IST
  • Facebook
  • Twitter
  • Whatsapp

ಶಾರ್ಜಾ(ಅ.15):  ಕನ್ನಡಿಗ ಕೆ.ಎಲ್‌.ರಾ​ಹುಲ್‌ ನೇತೃ​ತ್ವದ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡ ಐಪಿ​ಎಲ್‌ 13ನೇ ಆವೃ​ತ್ತಿಯ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿ​ದು​ಕೊ​ಳ್ಳ​ಬೇ​ಕಿ​ದ್ದರೆ ಬಾಕಿ ಇರುವ ಎಲ್ಲಾ 7 ಪಂದ್ಯ​ಗ​ಳಲ್ಲಿ ಗೆಲ್ಲ​ಲೇ​ಬೇಕು. ತಂಡ ಆಡಿ​ರುವ 7 ಪಂದ್ಯ​ಗ​ಳಲ್ಲಿ ಈಗಾ​ಗಲೇ 6ರಲ್ಲಿ ಸೋಲುಂಡಿದೆ. ಗುರು​ವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಬಲಿಷ್ಠ ರಾಯಲ್‌ ಚಾಲೆಂಜ​ರ್‍ಸ್ ಬೆಂಗ​ಳೂರು ವಿರುದ್ಧ ಸೆಣ​ಸ​ಲಿದ್ದು, ಈ ಪಂದ್ಯ​ದಲ್ಲಿ ಸೋಲುಂಡರೆ ತಂಡ ಪ್ಲೇ-ಆಫ್‌ ಪೈಪೋ​ಟಿ​ಯಿಂದ ಬಹು​ತೇಕ ಹೊರ​ಬಿ​ದ್ದಂತಾ​ಗು​ತ್ತದೆ.

RCBಗೆ ಸೇಡಿನ ಪಂದ್ಯ, ಪಂಜಾಬ್‌ಗೆ ಗೆಲುವು ಅನಿವಾರ್ಯ: ರೋಚಕ ಫೈಟ್‌ಗೆ ವೇದಿಕೆ ರೆಡಿ!.

ಉತ್ಸಾಹ​ದಲ್ಲಿ ಆರ್‌ಸಿಬಿ: ಮತ್ತೊಂದೆಡೆ ಆರ್‌ಸಿಬಿ ಜಯದ ಲಯ​ದ​ಲ್ಲಿದ್ದು, ಹ್ಯಾಟ್ರಿಕ್‌ ಗೆಲು​ವಿನ ಮೇಲೆ ಕಣ್ಣಿ​ಟ್ಟಿ​ದೆ. ವಿರಾಟ್‌ ಕೊಹ್ಲಿ ಪಡೆ ಆಡಿ​ರುವ 7 ಪಂದ್ಯ​ಗಳಲ್ಲಿ 5ರಲ್ಲಿ ಜಯಿಸಿದ್ದು, ಪ್ಲೇ-ಆಫ್‌ನತ್ತ ದಾಪು​ಗಾ​ಲಿ​ರಿ​ಸಿದೆ. ಕ್ರಿಸ್‌ ಮೋರಿಸ್‌ ಸೇರ್ಪಡೆ ತಂಡದ ಸಮ​ತೋ​ಲನ ಹೆಚ್ಚಿ​ಸಿದೆ. ಅಗ್ರ ಕ್ರಮಾಂಕದ ಭರ್ಜರಿ ಬೌಲಿಂಗ್‌ ಜೊತೆಗೆ ಬೌಲರ್‌ಗಳು ಅಸಾ​ಧಾ​ರಣ ಪ್ರದ​ರ್ಶನ ನೀಡು​ತ್ತಿ​ದ್ದಾರೆ. ಪ್ರಮು​ಖ​ವಾಗಿ ವಾಷಿಂಗ್ಟನ್‌ ಸುಂದರ್‌ ಹೆಚ್ಚು ಪರಿ​ಣಾ​ಮ​ಕಾ​ರಿ​ಯಾಗಿದ್ದು, ಲೆಗ್‌ ಸ್ಪಿನ್ನರ್‌ ಚಹಲ್‌ ಸಹ ದೊಡ್ಡ ಮಟ್ಟದ ಕೊಡುಗೆ ನೀಡು​ತ್ತಿ​ದ್ದಾರೆ. ಆರ್‌ಸಿಬಿ ಮತ್ತೊಂದು ಭರ್ಜರಿ ಪ್ರದ​ರ್ಶ​ನದ ವಿಶ್ವಾಸದಲ್ಲಿದೆ.

ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಸಂಭಾವ್ಯ RCB ತಂಡ ಪ್ರಕಟ; ಒಂದು ಬದಲಾವಣೆ?

ಕಿಂಗ್ಸ್‌ಗೆ ಗೇಲ್‌ ಬಲ: ಅನಾ​ರೋ​ಗ್ಯ​ದಿಂದ ಬಳ​ಲು​ತ್ತಿದ್ದು ಕ್ರಿಸ್‌ ಗೇಲ್‌ ಚೇತ​ರಿ​ಸಿ​ಕೊಂಡಿದ್ದು, ಈ ಪಂದ್ಯ​ದಲ್ಲಿ ಆಡು​ವುದು ಬಹು​ತೇಕ ಖಚಿತವಾಗಿದೆ. ಲಯ ಕಂಡು​ಕೊ​ಳ್ಳದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬದ​ಲಿಗೆ ಗೇಲ್‌ರನ್ನು ಆಡಿ​ಸುವುದು ಪಂಜಾಬ್‌ಗಿರುವ ಮೊದಲ ಆಯ್ಕೆ. ಇಲ್ಲವೇ ದುಬಾ​ರಿ​ಯಾ​ಗು​ತ್ತಿ​ರುವ ವಿದೇಶಿ ಬೌಲರ್‌ ಬದ​ಲಿಗೆ ಗೇಲ್‌ರನ್ನು ಕಣ​ಕ್ಕಿ​ಳಿ​ಸ​ಬ​ಹುದು. ಪಂಜಾಬ್‌ ತಂಡ ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಂಡಿದ್ದು, ಅದು ಸೆ.24ರಂದು ಆರ್‌ಸಿಬಿ ವಿರುದ್ಧ ನಡೆದ ಪಂದ್ಯ​ದಲ್ಲೇ ದಾಖ​ಲಿ​ಸಿ​ದ್ದಾ​ಗಿದೆ. ಹಿಂದಿನ ಗೆಲು​ವು ತಂಡದ ಆತ್ಮ​ವಿ​ಶ್ವಾಸ ಹೆಚ್ಚಿ​ಸ​ಬ​ಹುದು. ಸಹ​ಜ​ವಾ​ಗಿಯೇ ರಾಹುಲ್‌ ಹಾಗೂ ಮಯಾಂಕ್‌ ಅಗರ್‌ವಾಲ್‌ ಮೇಲೆ ಹೆಚ್ಚಿನ ಒತ್ತಡವಿದೆ.

ಒಟ್ಟು ಮುಖಾ​ಮುಖಿ: 25
ಆರ್‌ಸಿಬಿ: 12
ಪಂಜಾಬ್‌: 13

ಸ್ಥಳ: ಶಾರ್ಜಾ, ಪಂದ್ಯ: ಸಂಜೆ 7.30ಕ್ಕೆ

ಪಿಚ್‌ ರಿಪೋರ್ಟ್‌
ಶಾರ್ಜಾ ಪಿಚ್‌ ಮೊದ​ಲಿ​ನಂತೆ ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳಿಗೆ ನೆರ​ವಾ​ಗು​ತ್ತಿಲ್ಲ. ಆರ್‌ಸಿಬಿ-ಕೆಕೆ​ಆರ್‌ ಪಂದ್ಯ​ದಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ ಗಳಿ​ಸಲು ಹೆಚ್ಚು ಪರಿ​ಶ್ರಮ ವಹಿ​ಸ​ಬೇ​ಕಾ​ಯಿತು. ಸರಿ​ಯಾದ ಲೈನ್‌ ಅಂಡ್‌ ಲೆಂಥ್‌ ಕಾಪಾ​ಡಿ​ಕೊಂಡ​ರೆ ಎದು​ರಾ​ಳಿ​ಯನ್ನು 160-170ರೊಳಗೆ ಕಟ್ಟಿಹಾ​ಕಲು ಸಾಧ್ಯ ಎನ್ನು​ವು​ದನ್ನು ಆರ್‌ಸಿಬಿ ಬೌಲರ್‌ಗಳು ತೋರಿ​ಸಿ​ಕೊ​ಟ್ಟಿ​ದ್ದಾರೆ. ಆದರೂ ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಲು ಎದುರು ನೋಡುವ ಸಾಧ್ಯತೆ ಹೆಚ್ಚು.

Follow Us:
Download App:
  • android
  • ios