ಬೆಂಗ​ಳೂ​ರು(ಆ.21): 13ನೇ ಆವೃ​ತ್ತಿಯ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎಲ್‌)ನಲ್ಲಿ ಆಡಲು ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು (ಆರ್‌ಸಿಬಿ) ತಂಡ ಶುಕ್ರ​ವಾರ ವಿಶೇಷ ವಿಮಾ​ನ​ದಲ್ಲಿ ದುಬೈಗೆ ಪ್ರಯಾಣ ಬೆಳ​ಸ​ಲಿದೆ ಎಂದು ತಂಡದ ಅಧ್ಯಕ್ಷ ಸಂಜೀವ್‌ ಚುರಿ​ವಾಲಾ ಗುರು​ವಾ​ರ ತಿಳಿ​ಸಿ​ದರು.

ತಂಡ​ದ​ಲ್ಲಿ​ರುವ ಭಾರ​ತೀಯ ಆಟ​ಗಾ​ರರು ಆ.14ರಂದೇ ಬೆಂಗ​ಳೂ​ರಿಗೆ ಆಗ​ಮಿಸಿ, 7 ದಿನ​ಗಳ ಕ್ವಾರಂಟೈನ್‌ ಪೂರೈ​ಸಿದ್ದು ದುಬೈಗೆ ತೆರ​ಳಿದ ಬಳಿಕ ಮತ್ತೆ 7 ದಿನಗಳ ಕ್ವಾರಂಟೈನ್‌ಗೆ ಒಳ​ಪ​ಡ​ಲಿ​ದ್ದಾರೆ. ಆಟ​ಗಾ​ರ​ರಿಗೆ 3 ಬಾರಿ ಕೋವಿಡ್‌ ಪರೀಕ್ಷೆ ನಡೆ​ಸ​ಲಾ​ಗಿದೆ, ದುಬೈ​ನಲ್ಲಿ ಮತ್ತೆ 3 ಬಾರಿ ಪರೀಕ್ಷೆ ನಡೆ​ಸಿದ ಬಳಿಕ ಆ.29ರಿಂದ 3 ವಾರಗಳ ಶಿಬಿರ ನಡೆ​ಯ​ಲಿದೆ ಎಂದು ಸಂಜೀವ್‌ ತಿಳಿ​ಸಿ​ದರು.

ದುಬೈನಲ್ಲಿರುವ ವಾಲ್ಡೊರ್ಫ್ ಎಸ್ಟೋ​ರಿಯಾ ಪಂಚ​ತಾರಾ ಹೋಟೆಲ್‌ನ ಇಡೀ ಬ್ಲಾಕ್‌ ಅನ್ನು (ಸುಮಾರು 155 ಕೊಠಡಿ) ಕಾಯ್ದಿ​ರಿ​ಸ​ಲಾ​ಗಿದ್ದು, ಪ್ರತ್ಯೇಕ ಜಿಮ್‌, ಡೈನಿಂಗ್‌ ಹಾಲ್‌, ಕಾನ್ಫರೆನ್ಸ್‌ ಕೊಠಡಿ, ಲಿಫ್ಟ್‌ಗಳು ಇರ​ಲಿವೆ. ತಂಡ ಟೂರ್ನಿ​ಯು​ದ್ದಕ್ಕೂ ಇದೇ ಹೋಟೆಲ್‌ನಲ್ಲೇ ಉಳಿಯಲಿದೆ. ಆಟ​ಗಾ​ರರ ಸುರ​ಕ್ಷತೆಗೆ ಎಲ್ಲಾ ರೀತಿಯ ಮುನ್ನೆ​ಚ್ಚ​ರಿಕೆ ಕ್ರಮ​ಗ​ಳನ್ನು ಕೈಗೊ​ಳ್ಳ​ಲಾ​ಗಿದೆ ಎಂದು ಸಂಜೀವ್‌ ಹೇಳಿ​ದರು.

2020ರ ಐಪಿ​ಎಲ್‌ಗಷ್ಟೇ ಡ್ರೀಮ್‌ 11 ಪ್ರಾಯೋ​ಜ​ಕತ್ವ

ದಕ್ಷಿಣ ಆಫ್ರಿಕಾದ ಆಟ​ಗಾ​ರರು ಆ.22ಕ್ಕೆ ದುಬೈಗೆ ತಲು​ಪ​ಲಿದ್ದು, ಲಂಕಾ ವೇಗಿ ಇಸುರು ಉಡನ ಸೆ.1ಕ್ಕೆ ತಂಡ ಕೂಡಿ​ಕೊ​ಳ್ಳ​ಲಿ​ದ್ದಾರೆ. ಇಂಗ್ಲೆಂಡ್‌-ಆಸ್ಪ್ರೇ​ಲಿಯಾ ನಡು​ವಿನ ಸರ​ಣಿಯಲ್ಲಿ ಪಾಲ್ಗೊಳ್ಳಲಿ​ರುವ ಮೋಯಿನ್‌ ಅಲಿ, ಆ್ಯರೋನ್‌ ಫಿಂಚ್‌ ಸೆ.17ಕ್ಕೆ ದುಬೈಗೆ ಬರ​ಲಿ​ದ್ದಾರೆ ಎಂದು ಹೇಳಿದ ಅವರು, ಮೊದಲ ಪಂದ್ಯ​ಕ್ಕೂ ಮುನ್ನ ಬಹು​ತೇಕ ಎಲ್ಲಾ ಆಟ​ಗಾ​ರರು ತಂಡ ಕೂಡಿ​ಕೊ​ಳ್ಳ​ಲಿ​ದ್ದಾರೆ ಎಂದರು. ಇಂಗ್ಲೆಂಡ್‌ನಿಂದ ಆಗ​ಮಿ​ಸುವ ಆಟ​ಗಾ​ರರು ಬಯೋ ಸೆಕ್ಯೂರ್‌ ವಾತಾ​ವ​ರಣದಲ್ಲೇ ಇರ​ಲಿದ್ದು, ದುಬೈಗೆ ಬಂದ ಬಳಿಕ ಮತ್ತೆ ಕ್ವಾರಂಟೈನ್‌ಗೆ ಒಳ​ಪ​ಡು​ವ ಅಗತ್ಯ ಇರು​ವು​ದಿಲ್ಲ ಎಂದರು.

ಯುಎ​ಇ ತಲು​ಪಿದ ರಾಯಲ್ಸ್‌, ಪಂಜಾಬ್‌: ರಾಜ​ಸ್ಥಾನ ರಾಯಲ್ಸ್‌, ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ಸೇರಿ​ದಂತೆ ಇನ್ನೂ ಕೆಲ ತಂಡ​ಗಳು ಗುರು​ವಾ​ರವೇ ಯುಎ​ಇಗೆ ತೆರ​ಳಿ​ದವು. 7 ದಿನಗಳ ಕಡ್ಡಾಯ ಕ್ವಾರಂಟೈನ್‌ ಬಳಿಕ ತಂಡ​ಗಳು ಅಭ್ಯಾಸ ಆರಂಭಿ​ಸ​ಲಿವೆ.