IPL 2020: RCB ವರ್ಸಸ್ ಕಿಂಗ್ಸ್ ಇಲೆವನ್ ಕನ್ನಡಿಗರ ನಡುವಿಂದು ಪೈಪೋಟಿ..!
13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕನ್ನಡಿಗರಿಂದಲೇ ತುಂಬಿರುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಸೆ.24): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜಸ್ ಬೆಂಗಳೂರು ತಂಡ ಶುಭಾರಂಭದೊಂದಿಗೆ ಅಭಿಯಾನ ಆರಂಭಿಸಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಗುರುವಾರ ಇಲ್ಲಿನ ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿವಾದಿತ ‘ಶಾರ್ಟ್ ರನ್’ನಿಂದಾಗಿ ಸೂಪರ್ ಓವರ್‌ನಲ್ಲಿ ಸೋಲು ಕಂಡ ಪಂಜಾಬ್ ತಂಡ, ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ. ಹೊಸ ನಾಯಕ ಕೆ.ಎಲ್.ರಾಹುಲ್ ಹಾಗೂ ಕೋಚ್ ಅನಿಲ್ ಕುಂಬ್ಳೆ, ಆರ್‌ಸಿಬಿ ವಿರುದ್ಧ ಯಾವ ರಣತಂತ್ರ ಹೂಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕದ ಆಟಗಾರರೇ ಹೆಚ್ಚಿರುವ ಕಿಂಗ್ಸ್ ಇಲೆವೆನ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯ ಸಹಜವಾಗಿಯೇ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಬಲಿಷ್ಠವಾಗಿದೆ ಆರ್‌ಸಿಬಿ: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಅವರನ್ನೊಳಗೊಂಡ ಆರ್‌ಸಿಬಿಯ ಅಗ್ರ ಕ್ರಮಾಂಕ ಅತ್ಯಂತ ಬಲಿಷ್ಠವಾಗಿದೆ. ಪಡಿಕ್ಕಲ್, ಎಬಿಡಿ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರೆ, ಕೊಹ್ಲಿ ಹಾಗೂ ಫಿಂಚ್ ತಮ್ಮ ಅಸಲಿ ಆಟ ಪ್ರದರ್ಶಿಸಲು ಕಾತರಿಸುತ್ತಿದ್ದಾರೆ. ಜೋಶ್ವಾ ಫಿಲಿಪಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಕಾಯುತ್ತಿದ್ದಾರೆ. ಆರ್‌ಸಿಬಿಯ ಕೆಳ ಮಧ್ಯಮ ಕ್ರಮಾಂಕದ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.
IPL 2020: ಫಿಫ್ಟಿ ಬಾರಿಸಿ ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿಕೊಂಡ ದೇವದತ್ ಪಡಿಕ್ಕಲ್..!
ಯಜುವೇಂದ್ರ ಚಹಲ್ ತಂಡದ ಬೌಲಿಂಗ್ ಟ್ರಂಪ್‌ಕಾರ್ಡ್, ನವ್‌ದೀಪ್ ಸೈನಿ ಹಾಗೂ ಡೇಲ್ ಸ್ಟೈಲ್ ನಾಯಕನ ನಂಬಿಕೆ ಉಳಿಸಿಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ. ಆದರೆ ಉಮೇಶ್ ಯಾದವ್ ದುಬಾರಿಯಾಗಿದ್ದು, ಈ ಸಮಸ್ಯೆಗೆ ಕೊಹ್ಲಿ ಉತ್ತಮ ಹುಡುಕಿಕೊಳ್ಳದಿದ್ದರೆ ಗೆಲುವು ಕೈಜಾರಿದರೆ ಅಚ್ಚರಿಯಿಲ್ಲ.
ಗೊಂದಲದಲ್ಲಿ ಕಿಂಗ್ಸ್: ಇನ್ನು ಪಂಜಾಬ್ ತಂಡ ಆರಂಭಿಕ ಮಯಾಂಕ್ ಅಗರ್‌ವಾಲ್ ಫಾಮ್‌ರ್‍ನಲ್ಲಿದ್ದಾರೆ. ನಾಯಕ ರಾಹುಲ್, ಕರುಣ್ ನಾಯರ್, ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟ್‌ನಿಂದ ರನ್ ಹರಿದುಬರಲಿಲ್ಲ. ಈ ನಾಲ್ವರು ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಎದುರಾಳಿ ತಂಡವನ್ನು ಸುಲಭವಾಗಿ ಮಣಿಸಬಹುದಾಗಿದೆ. ಧೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ರನ್ನು ಹೊರಗಿಟ್ಟರೂ, ಪಂಜಾಬ್ ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಆಟಗಾರರನ್ನು ಹೊಂದಿದೆ. ಆದರೆ ನಾಯಕ ರಾಹುಲ್‌ಗೆ ಆಯ್ಕೆ ಗೊಂದಲ ಶುರುವಾಗಿದ್ದು, ಪರಿಹಾರ ಸಿಕ್ಕಂತೆ ಕಾಣುತ್ತಿಲ್ಲ. ವೇಗಿ ಶಮಿ ಬೌಲಿಂಗ್ ಮುಂದಾಳತ್ವ ವಹಿಸಿದ್ದು, ಕರಾರುವಕ್ ಬೌಲಿಂಗ್‌ನಿಂದ ಗಮನಸೆಳೆದಿದ್ದಾರೆ. ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ, ಡೆಲ್ಲಿ ವಿರುದ್ಧ ಅತ್ಯದ್ಭುತ ಪ್ರದರ್ಶನದ ಮೂಲಕ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ:
ಆರ್‌ಸಿಬಿ: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಶಿವಂ ದುಬೆ, ಜೋಶ್ ಫಿಲಿಪ್ಪೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಉಮೇಶ್ ಯಾದವ್, ಡೇಲ್ ಸ್ಟೇನ್, ಯಜುವೇಂದ್ರ ಚಹಲ್.
ಪಂಜಾಬ್: ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ಸರ್ಫರಾಜ್ ಖಾನ್, ಕೆ.ಗೌತಮ್, ಕ್ರಿಸ್ ಜೋರ್ಡನ್, ಮೊಹಮದ್ ಶಮಿ, ಶೆಲ್ಡನ್ ಕಾರ್ಟೆಲ್, ರವಿ ಬಿಷ್ಣೋಯಿ.
ಪಿಚ್ ರಿಪೋರ್ಟ್
ದುಬೈ ಕ್ರೀಡಾಂಗಣದ ಪಿಚ್‌ನಲ್ಲಿ ಈಗಾಗಲೇ 2 ಪಂದ್ಯಗಳು ನಡೆದಿದ್ದು, ಸ್ಪರ್ಧಾತ್ಮಕ ಪಿಚ್ ಆಗಿದೆ. ಸ್ವಿಂಗ್ ಬೌಲರ್‌ಗಳು ತಕ್ಕಮಟ್ಟಿಗಿನ ಲಾಭ ಪಡೆಯಲಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಯಶಸ್ಸು ದೊರಕಲಿದೆ. ಮೊದಲು ಬ್ಯಾಟ್ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ದೊರಕಲಿದೆ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್