Asianet Suvarna News Asianet Suvarna News

IPL 2020: ಸಾಮಾಜಿಕ ಜಾಲದಲ್ಲಿ ಹೊಸ ದಾಖಲೆ ಬರೆದ RCB

ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಅಪರೂಪದ ದಾಖಲೆ ಬರೆದಿದೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

IPL 2020 RCB becomes the first Cricket team to reach 84 million impressions on Instagram kvn
Author
New Delhi, First Published Oct 10, 2020, 8:57 AM IST

ನವದೆಹಲಿ(ಅ.10): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಶ್ವದ ಟಾಪ್‌ 5 ಕ್ರೀಡಾ ತಂಡಗಳಲ್ಲಿ 4ನೇ ಸ್ಥಾನ ಪಡೆದಿದೆ. 

ಸೆಪ್ಟೆಂಬರ್‌ ತಿಂಗಳಲ್ಲಿ ಇನ್‌ಸ್ಟಾಗ್ರಾಮ್‌ ಬಳಕೆದಾರರು ಈ ಕ್ರೀಡಾ ತಂಡಗಳ ಬಗ್ಗೆ ಅತಿ ಹೆಚ್ಚು ಚರ್ಚೆ ನಡೆಸಿದ್ದಾರೆ ಎಂದು ಡಿಪೋರ್ಟಸಿ ಫೈನಾನ್ಜಸ್‌.ಕಾಂ ತನ್ನ ಸಮೀಕ್ಷೆ ವರದಿಯಲ್ಲಿ ಹೇಳಿಕೊಂಡಿದೆ. ಸಮೀಕ್ಷೆಗೆ ಲೈಕ್‌ ಹಾಗೂ ಕಾಮೆಂಟ್‌ ಎರಡನ್ನೂ ಪರಿಗಣಿಸಲಾಗಿದ್ದು, ಆರ್‌ಸಿಬಿ ತಂಡವನ್ನು 84.6 ಕೋಟಿ ಜನರು ತಮ್ಮ ಚರ್ಚೆಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. 

ಟಾಪ್‌ 5 ಪಟ್ಟಿಯಲ್ಲಿ ಬಾರ್ಸಿಲೋನಾ ಎಫ್‌ಸಿ (188 ಕೋಟಿ), ಮ್ಯಾನ್‌ ಯುಟಿಡಿ (94.0 ಕೋಟಿ), ಎಲ್‌ಎಫ್‌ಸಿ (86.6 ಕೋಟಿ) ಮೊದಲ 3 ಸ್ಥಾನದಲ್ಲಿವೆ. ಆರ್‌ಸಿಬಿ ನಂತರದ ಸ್ಥಾನದಲ್ಲಿ ಚೆಲ್ಸಾ ಎಫ್‌ಸಿ (79.9 ಕೋಟಿ) ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಿಕ್ಕಾಪಟ್ಟೆ ಚುರುಕಾಗಿದ್ದು, ಸಾಕಷ್ಟು ವಿಭಿನ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ. ಇದರ ಜತೆಗೆ ಪ್ರತಿ ಪಂದ್ಯದ ಮುಕ್ತಾಯದ ಬಳಿಕ ಅನಾಲಿಸಿಸ್ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ 10 ಲಕ್ಷ ಚಂದದಾರರನ್ನು ಹೊಂದಿದ ಏಕೈಕ ಐಪಿಎಲ್ ಫ್ರಾಂಚೈಸಿ ಎನ್ನುವ ಹೆಗ್ಗಳಿಕೆ ಆರ್‌ಸಿಬಿಯದ್ದು. ಇನ್ನು ಕಳೆದ ತಿಂಗಳನಲ್ಲಿ ಹೊಸದಾಗಿ ಆರ್‌ಸಿಬಿ ಯೂಟ್ಯೂಬ್ ಚಾನೆಲ್‌ಗೆ 5 ಲಕ್ಷ ಚಂದಾದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.  

Morning Express:

"

Follow Us:
Download App:
  • android
  • ios